ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್!

|
Google Oneindia Kannada News

ಬೆಂಗಳೂರು, ಜನವರಿ 17 : ಬೆಂಗಳೂರಿನ ಸಂಚಾರ ವ್ಯವಸ್ಥೆಯ ದಿಕ್ಕನ್ನು ಬದಲಿಸುವ ನಿರೀಕ್ಷೆ ಇರುವ ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ಯೋಜನೆ ಬಿಬಿಎಂಪಿ ಪಾಲಿಗೆ ಬಿಳಿಯಾನೆಯಾಗಿದೆ. ಹೌದು, ಯೋಜನೆ ಪೂರ್ಣಗೊಳಿಸಲು ಪಾಲಿಕೆ ಹಣಕಾಸು ನೆರವಿನ ನಿರೀಕ್ಷೆಯಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಮೂಲಕ 10,000 ಕೋಟಿ ಸಾಲವನ್ನು ಪಡೆಯಲು ಮುಂದಾಗಿದೆ. ಈ ಸಾಲದಲ್ಲಿ ಹೆಚ್ಚಿನ ಪ್ರಮಾಣ ಟೆಂಡರ್ ಶ್ಯೂರ್ ರಸ್ತೆ ಮತ್ತು ವೈಟ್ ಟಾಪಿಂಗ್ ಯೋಜನೆಗೆ ಹೋಗಲಿದೆ.

ಟೆಂಡರ್‌ ಶ್ಯೂರ್ ಯೋಜನೆಯಡಿ ಎಂ.ಜಿ.ರಸ್ತೆ ಅಭಿವೃದ್ಧಿಟೆಂಡರ್‌ ಶ್ಯೂರ್ ಯೋಜನೆಯಡಿ ಎಂ.ಜಿ.ರಸ್ತೆ ಅಭಿವೃದ್ಧಿ

ನಗರದ ಸುಮಾರು 150 ಕಿ.ಮೀ. ರಸ್ತೆಯ ವೈಟ್‌ ಟಾಪಿಂಗ್ ಆಗಬೇಕಿದೆ. 25 ಕಿ.ಮೀ. ರಸ್ತೆ ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿಯಾಗಬೇಕಿದೆ. ಆದರೆ, ಈ ಯೋಜನೆಗೆ ಹಣಕಾಸಿನ ನೆರವು ಬೇಕಾಗಿದ್ದು, ಬಿಬಿಎಂಪಿ ಎಐಐಬಿ ಬಾಗಿಲು ತಟ್ಟಿದೆ.

ಟೆಂಡರ್‌ ಶ್ಯೂರ್‌ ರಸ್ತೆಯ ವಿಶೇಷತೆಗಳೇನು?ಟೆಂಡರ್‌ ಶ್ಯೂರ್‌ ರಸ್ತೆಯ ವಿಶೇಷತೆಗಳೇನು?

2018ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಾಗ ಕರ್ನಾಟಕ ಸರ್ಕಾರ ಬೆಂಗಳೂರಿನ ರಸ್ತೆಗಳನ್ನು ಅಭಿವೃದ್ದಿ ಮಾಡಲು ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ (ಟಾರ್ ರಸ್ತೆಯ ಮೇಲೆ ಕಾಂಕ್ರೀಟ್ ಹೊದಿಕೆ) ಹಾಕುವ ಯೋಜನೆ ಪ್ರಕಟಿಸಿತು. ಈಗ ಈ ಯೋಜನೆಗಳು ಪಾಲಿಕೆಗೆ ನುಂಗಲಾರದ ತುತ್ತಾಗಿವೆ....

ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಈಜಾಡಿದ ಮೊಸಳೆ!

ಸರ್ಕಾರದ ಒಪ್ಪಿಗೆ ಸಿಕ್ಕಿದೆ

ಸರ್ಕಾರದ ಒಪ್ಪಿಗೆ ಸಿಕ್ಕಿದೆ

ಏಷ್ಯಾ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ)ಯಿಂದ 10 ಸಾವಿರ ಕೋಟಿ ರೂ. ಸಾಲ ಪಡೆಯಲು ಬಿಬಿಎಂಪಿ ಮುಂದಾಗಿದೆ. ಟೆಂಡರ್ ಶ್ಯೂರ್, ವೈಟ್ ಟಾಪಿಂಗ್ ಯೋಜನೆ ಪೂರ್ಣಗೊಳಿಸಲು ಮತ್ತು ಗೊರಗುಂಟೆಪಾಳ್ಯ, ಹೆಬ್ಬಾಳ, ಸಿಲ್ಕ್ ಬೋರ್ಡ್ ಮತ್ತು ಕೆ.ಆರ್.ಪುರಂ ಜಂಕ್ಷನ್ ಅಭಿವೃದ್ಧಿಗಾಗಿ ಹಣವನ್ನು ವೆಚ್ಚ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳಿಗೆ ಈಗಾಗಲೇ ಕರ್ನಾಟಕ ಸರ್ಕಾರದ ಒಪ್ಪಿಗೆ ಸಿಕ್ಕಿದೆ.

ವಿವಿಧ ರಸ್ತೆಗಳ ಅಭಿವೃದ್ಧಿ

ವಿವಿಧ ರಸ್ತೆಗಳ ಅಭಿವೃದ್ಧಿ

ಬೆಂಗಳೂರು ನಗರದ ವಿವಿಧ ರಸ್ತೆಗಳನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಹಲವು ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲಾಗುತ್ತಿದೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ಹಣದ ಕೊರತೆ ಎದುರಾಗಿದೆ. ಆದ್ದರಿಂದ, ಸಾಲ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ವೈಟ್ ಟಾಪಿಂಗ್‌ಗೆ ವಿರೋಧ

ವೈಟ್ ಟಾಪಿಂಗ್‌ಗೆ ವಿರೋಧ

ವೈಟ್ ಟಾಪಿಂಗ್ (ಟಾರು ರಸ್ತೆ ಮೇಲೆ ಕಾಂಕ್ರೀಟ್ ಹೊದಿಕೆ) ಯೋಜನೆಗೆ ಜನರು ವಿರೋಧ ವ್ಯಕ್ತಪಡಿಸಿದ್ದರು. ಅವೈಜ್ಞಾನಿಕವಾಗಿ, ಯಾವುದೇ ಅಧ್ಯಯನ ಮಾಡದೇ ಅಗತ್ಯವಿಲ್ಲದ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. 1 ಕಿ.ಮೀ. ವೈಟ್‌ ಟಾಪಿಂಗ್‌ ಮಾಡುವ ವೆಚ್ಚದಲ್ಲಿ 5 ಕಿ.ಮೀ. ಡಾಂಬರು ರಸ್ತೆ ಮಾಡಬಹುದು ಎಂದು ವಿಶ್ಲೇಷಿಸಲಾಗಿತ್ತು.

ನೀರು ಹೋಗಲು ಮಾರ್ಗವೇ ಇಲ್ಲ

ನೀರು ಹೋಗಲು ಮಾರ್ಗವೇ ಇಲ್ಲ

ಬೆಂಗಳೂರು ನಗರದಲ್ಲಿ ಸಾಮಾನ್ಯ ಮಳೆ ಬಂದರೆ ನೀರು ರಸ್ತೆಗೆ ನುಗ್ಗುತ್ತದೆ. ವೈಟ್ ಟಾಪಿಂಗ್ ಯೋಜನೆಯಡಿ ಹಾಲಿ ಇರುವ ರಸ್ತೆ ಮೇಲೆ 20 ಸೆಂಟಿ ಮೀಟರ್ ಕಾಂಕ್ರಿಟ್ ಹಾಕಲಾಗುತ್ತದೆ. ಇದರಿಂದಾಗಿ ಮೋರಿಗಳು ಕಟ್ಟಿಕೊಂಡು ನೀರು ಹೋಗಲು ಜಾಗ ಸಿಗುವುದಿಲ್ಲ ಎಂಬುದು ಕೆಲವರ ವಾದವಾಗಿದೆ.

ಟೆಂಡರ್ ಶ್ಯೂರ್ ಯೋಜನೆ

ಟೆಂಡರ್ ಶ್ಯೂರ್ ಯೋಜನೆ

ಇನ್ನು ಟೆಂಡರ್ ಶ್ಯೂರ್ ಯೋಜನೆಯಡಿ ಮತ್ತೆ-ಮತ್ತೆ ಅಗೆಯಲು ಅವಕಾಶ ಇಲ್ಲದಂತೆ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಪಾದಚಾರಿಗಳಿಗೆ ಸಮರ್ಪಕವಾಗಿ ಫುಟ್‌ಪಾತ್ ಸೌಲಭ್ಯ, ಸೈಕಲ್‌ಗೆ ಪ್ರತ್ಯೇಕ ಟ್ರಾಕ್, ಬಿಬಿಎಂಪಿ, ಜಲಮಂಡಳಿ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ಒಳಗೊಂಡ ಏಕಗವಾಕ್ಷಿ ವ್ಯವಸ್ಥೆಯಡಿ ನಗರದ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ನಗರದ ಇನ್ನೂ ಸುಮಾರು 25 ಕಿ.ಮೀ. ರಸ್ತೆ ಈ ಯೋಜನೆಯಡಿ ಅಭಿವೃದ್ಧಿಯಾಗಬೇಕಿದೆ.

English summary
Bruhat Bengaluru Mahanagara Palike is seeking funds amounting to Rs. 10,000 crore from the Asian Infrastructure Investment Bank (AIIB) for white topping and Tender SURE project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X