ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಯಾವ ವಯಸ್ಸಿನವರಿಗೆ ಕೊರೊನಾದಿಂದ ಹೆಚ್ಚು ಅಪಾಯ?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊವಿಡ್-19 ಸೋಂಕಿನಿಂದ ಯಾವ ವಯಸ್ಸಿನವರಿಗೆ ಹೆಚ್ಚು ಅಪಾಯ ಎನ್ನುವುದನ್ನು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ.

ಕೊರೊನಾವೈರಸ್ ಎರಡನೇ ಅಲೆಯಲ್ಲಿ 20 ರಿಂದ 39 ವರ್ಷ ವಯಸ್ಸಿನೊಳಗಿನ ಯುವಕರಿಗೆ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಅಂಕಿ-ಅಂಶಗಳ ಸಹಿತ ರುಜುವಾತಾಗಿದೆ. ಕೊರೊನಾವೈರಸ್ ಮೊದಲ ಅಲೆಯಲ್ಲಿ ಮಹಾಮಾರಿಯಿಂದ ವೃದ್ಧರು, ಅನಾರೋಗ್ಯ ಪೀಡಿತರು ಹೆಚ್ಚು ಅಪಾಯವನ್ನು ಎದುರಿಸುತ್ತಿದ್ದರು.

ಸಾವಿಗೇನು ಕಾರಣ: ಬೆಂಗಳೂರಿನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳೇ ಇಲ್ಲ!ಸಾವಿಗೇನು ಕಾರಣ: ಬೆಂಗಳೂರಿನಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಹಾಸಿಗೆಗಳೇ ಇಲ್ಲ!

ಬೆಂಗಳೂರಿನಲ್ಲಿ ಪತ್ತೆಯಾಗುತ್ತಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಎಷ್ಟು. ಯಾವ ವಯಸ್ಸಿನ ಎಷ್ಟು ಜನರಿಗೆ ಕೊವಿಡ್-19 ಸೋಂಕು ಅಂಟಿಕೊಳ್ಳುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಂಗ್ರಹಿಸಿದ ಅಂಕಿ-ಅಂಶಗಳು ಏನನ್ನು ಸೂಚಿಸುತ್ತದೆ ಎಂಬುದರ ಕುರಿತು ಒಂದು ವರದಿ.

ಯಾವ ವಯಸ್ಸಿನವರಲ್ಲಿ ಕೊರೊನಾವೈರಸ್ ಹೆಚ್ಚು?

ಯಾವ ವಯಸ್ಸಿನವರಲ್ಲಿ ಕೊರೊನಾವೈರಸ್ ಹೆಚ್ಚು?

ಬೆಂಗಳೂರಿನಲ್ಲಿ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಮಾರ್ಚ್ 17ರಿಂದ 28ರ ನಡುವೆ ಪತ್ತೆಯಾಗಿರುವ ಕೊವಿಡ್-19 ಸೋಂಕಿತ ಪ್ರಕರಣಗಳ ಬಗ್ಗೆ ಬಿಬಿಎಂಪಿ ಮಾಹಿತಿ ನೀಡಿದೆ. 20 ರಿಂದ 29 ವರ್ಷದೊಳಗಿನ 2408 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, 30 ರಿಂದ 39 ವರ್ಷದ 2547 ಜನರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

60ಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ಕೊರೊನಾವೈರಸ್

60ಕ್ಕಿಂತ ಮೇಲ್ಪಟ್ಟ ವಯಸ್ಸಿನವರಲ್ಲಿ ಕೊರೊನಾವೈರಸ್

ಯುವಕರಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮತ್ತು ವೃದ್ಧರಲ್ಲಿ ದೃಢಪಟ್ಟಿರುವ ಸೋಂಕಿತ ಪ್ರಕರಣಗಳನ್ನು ಹೋಲಿಕೆ ಮಾಡಿ ನೋಡಲಾಗಿದೆ. ವೃದ್ಧರಿಗಿಂತ ಯುವಕರಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದೆ. 60 ರಿಂದ 69 ವರ್ಷದ 1178 ಮಂದಿಗೆ ಕೊವಿಡ್-19 ಸೋಂಕು ತಗುಲಿದ್ದು, ಇದೇ ಅವಧಿಯಲ್ಲಿ 70 ವರ್ಷ ಮೇಲ್ಪಟ್ಟ 828 ಜನರಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

ಕೊರೊನಾವೈರಸ್ ಬಗ್ಗೆ ಜನರಲ್ಲಿ ಭಯವಿಲ್ಲ

ಕೊರೊನಾವೈರಸ್ ಬಗ್ಗೆ ಜನರಲ್ಲಿ ಭಯವಿಲ್ಲ

35 ರಿಂದ 40 ವರ್ಷ ನಡುವಿನ ವಯಸ್ಸಿನವರಲ್ಲಿ ಕೊರೊನಾವೈರಸ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ. ಈ ವಯೋಮಾನದ ಜನರಲ್ಲಿ ಜ್ವರ, ನೆಗಡಿ, ಕೆಮ್ಮು ಮತ್ತು ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಸಿಎಂಐ ಆಸ್ಪತ್ರೆ ವೈದ್ಯ ಡಾ.ಬೃಂದಾ ತಿಳಿಸಿದ್ದಾರೆ. ಮೊದಲ ಅಲೆಗೆ ಹೋಲಿಸಿದ್ದಲ್ಲಿ ಈಗ ಸೋಂಕು ಹರಡುವಿಕೆ ವೇಗ ಹೆಚ್ಚಾಗಿದೆ. ಮೊದಲ ಕೊವಿಡ್-19 ಅಲೆ ನಿಯಂತ್ರಿಸುವುದಕ್ಕೆ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಸಾವಿನ ಭಯದಲ್ಲಿ ಜನರು ಮನೆಗಳಿಂದ ಹೊರಗೆ ಬರುತ್ತಿರಲಿಲ್ಲ. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ.

ಕೊರೊನಾವೈರಸ್ ಲಸಿಕೆಯ ಲಭ್ಯತೆ ಮತ್ತು ಸೋಂಕಿನ ಬಗ್ಗೆ ಜನರಲ್ಲಿನ ಭೀತಿ ಹೊರಟು ಹೋಗಿದೆ. ಸಾರ್ವಜನಿಕ ವಲಯದಲ್ಲಿ ಜನರ ಓಡಾಟದಿಂದಾಗಿ ಸೋಂಕು ಮೊದಲಿಗಿಂದ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ ಎಂದು ಡಾ. ಬೃಂದಾ ತಿಳಿಸಿದ್ದಾರೆ.

ಮಧ್ಯಮ ವಯಸ್ಸಿನವರಿಗೂ ಕೊರೊನಾವೈರಸ್ ಲಸಿಕೆ

ಮಧ್ಯಮ ವಯಸ್ಸಿನವರಿಗೂ ಕೊರೊನಾವೈರಸ್ ಲಸಿಕೆ

ಕೊರೊನಾವೈರಸ್ ಲಸಿಕೆ ವಿತರಣೆಯಿಂದಾಗಿ ಹಿರಿಯ ವಯಸ್ಸಿನವರಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಮಧ್ಯಮ ವಯಸ್ಸಿನವರಲ್ಲಿ ಕೊವಿಡ್-19 ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಲಸಿಕೆ ವಿತರಣೆಯ ವಯಸ್ಸಿನ ಮಿತಿಯನ್ನು ಇದೀಗ 35 ವರ್ಷಕ್ಕೆ ಇಳಿಸುವ ಅಗತ್ಯವಿದೆ. 35 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕಿದೆ ಎಂದು ವೈದ್ಯೆ ಡಾ. ಬೃಂದಾ ಹೇಳಿದ್ದಾರೆ. ಪ್ರಸ್ತುತ ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೊನಾವೈರಸ್ ಲಸಿಕೆ ನೀಡುವುದಕ್ಕೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.

ಸಿಲಿಕಾನ್ ಸಿಟಿಯಲ್ಲಿ ಐಸಿಯು ಬೆಡ್ ವ್ಯವಸ್ಥೆ ವ್ಯತ್ಯಯ

ಸಿಲಿಕಾನ್ ಸಿಟಿಯಲ್ಲಿ ಐಸಿಯು ಬೆಡ್ ವ್ಯವಸ್ಥೆ ವ್ಯತ್ಯಯ

ಕೊರೊನಾವೈರಸ್ ಸೋಂಕಿನ ಹೊಡೆತಕ್ಕೆ ಸಿಲಿಕಾನ್ ಸಿಟಿ ತತ್ತರಿಸಿ ಹೋಗಿದೆ. ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ತುರ್ತು ನಿಗಾ ಘಟಕ(ICU)ದ ಹಾಸಿಗೆಗಳ ಕೊರತೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮಾರ್ಚ್ 25ರಂದು 51 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮಾರ್ಚ್ 28ರ ವೇಳೆಗೆ ಈ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. 2020ರ ಡಿಸೆಂಬರ್ ತಿಂಗಳ ನಂತರ ಬೆಂಗಳೂರಿನಲ್ಲಿ ಮತ್ತೊಮ್ಮೆ ತುರ್ತು ನಿಗಾ ಘಟಕದ ಹಾಸಿಗೆಗಳ ಅಭಾವ ಹೆಚ್ಚಾಗುತ್ತದೆ. ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ ಕ್ರಮೇಣ ಏರಿಕೆ ಆಗುತ್ತಿದೆ. ಸಿಲಿಕಾನ್ ಸಿಟಿಯೊಂದರಲ್ಲೇ ಕಳೆದ ಫೆಬ್ರವರಿ ತಿಂಗಳಿನಲ್ಲಿ 88 ಮಂದಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದರೆ, ಮಾರ್ಚ್ 28ರವರೆಗೂ 98 ಜನರು ಪ್ರಾಣ ಬಿಟ್ಟಿದ್ದಾರೆ.

ರಾಜ್ಯದಲ್ಲಿ 2792 ಜನರಿಗೆ ಕೊವಿಡ್-19 ಸೋಂಕು

ರಾಜ್ಯದಲ್ಲಿ 2792 ಜನರಿಗೆ ಕೊವಿಡ್-19 ಸೋಂಕು

ಕರ್ನಾಟಕದಲ್ಲಿ ಒಂದೇ ದಿನ 2792 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 989804ಕ್ಕೆ ಏರಿಕೆಯಾಗಿದ್ದು, 12520 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳಲ್ಲಿ 16 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Recommended Video

ಸಂಗಕ್ಕಾರ ಜೊತೆ ಆಡೋದಕ್ಕೆ ಕಾಯ್ತಾ ಇದ್ದೀನಿ | Sanju Samson | Oneindia Kannada

English summary
Which Age Group Facing Risk From Coronavirus At Bengaluru, Here Read The Answer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X