ಸ್ಥಗಿತಗೊಂಡ 'ನಮ್ಮ ಮೆಟ್ರೋ' ಸೇವೆ ಯಾವಾಗ ಆರಂಭವಾಗುತ್ತೆ?
ಮುಂಬೈ, ಜುಲೈ 7: ನಮ್ಮ ಮೆಟ್ರೋ ಬಂದ್ ಕುರಿತಂತೆ ರಾಜಧಾನಿಯಲ್ಲೀಗ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಮೆಟ್ರೋವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಜನರು ಇಂದು ಆಟೋ, ಕ್ಯಾಬು, ಬಸ್ಸು ಎನ್ನುತ್ತ ಪರದಾಡುತ್ತಿದ್ದಾರೆ.
ಈ ಮೆಟ್ರೋ ಸೇವೆ ಇವತ್ತೇ ಶುರುವಾಗುತ್ತಾ? ಶುರುವಾದರೂ ಎಷ್ಟು ಹೊತ್ತಿಗೆ ಆರಂಭವಾಗುತ್ತೆ? ಬೆಳಗ್ಗೆಯಂತೂ ಮೆಟ್ರೋ ಇಲ್ಲದೆ ಪರದಾಡಿದ್ದಾಯ್ತು. ಇಂದು ಸಂಜೆಯಾದರೂ ಈ ಪರದಾಟ ತಪ್ಪುತ್ತಾ ಎಂದು ಜನರು ಪರಿಪರಿಯಾಗಿ ಪ್ರಶ್ನಸುತ್ತಿದ್ದಾರೆ.

ಈ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ಬಿಎಂಆರ್ ಸಿಎಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ್ ವಸಂತ ರಾವ್ ಸಂಪರ್ಕಕ್ಕೆ ಸಿಗುತ್ತಿಲ್ಲ.
Train service temporally stopped - will tweet once the issues are resolved
— BMRCL (@cpronammametro) July 7, 2017
"ನಮ್ಮ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸೇವೆ ಆರಂಭವಾಗುತ್ತಿದ್ದಂತೆಯೇ ಟ್ವೀಟ್ ಮೂಲಕ ಮಾಹಿತಿ ನೀಡುತ್ತೇವೆ" ಎಂದು ಬಿಎಂಆರ್ ಸಿಎಲ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. "ಸಮಸ್ಯೆ ಬಗೆಹರಿದಿದೆ, ಮೆಟ್ರೋ ಸೇವೆ ಮತ್ತೆ ಆರಂಭವಾಗುತ್ತಿದೆ" ಎಂದು ಮತ್ತೊಮ್ಮೆ ಬಿಎಂಆರ್ ಸಿಎಲ್ ನಲ್ಲಿ ಟ್ವೀಟ್ ಬರುವವರೆಗೂ ಪ್ರಯಾಣಿಕರು ಮೆಟ್ರೋವನ್ನು ನಂಬಿಕೊಳ್ಳುವಂತಿಲ್ಲ!.
ಯಾವುದೇ ಮುನ್ಸೂಚನೆಯನ್ನೇ ನೀಡದೆ ಮೆಟ್ರೋ ಬಂದ್ ಆಗಿರುವುದು, ಸ್ವತಃ ಬಿಎಂಆರ್ ಸಿಎಲ್ ನ ಎಷ್ಟೊ ಸಿಬ್ಬಂದಿಗಳಿಗೇ ಕಾರಣ ಗೊತ್ತಿಲ್ಲ! ಸರಿಯಾಗಿ ಮಾಹಿತಿಯನ್ನೂ ನೀಡಿಲ್ಲ. ಇದರಿಂದ ಸಾರ್ವಜನಿಕರ ಆಕ್ರೋಶ ಹೆಚ್ಚಿದ್ದು, ಕೂಡಲೇ ಮೆಟ್ರೋ ಸೇವೆ ಆರಂಭಿಸಿ ಎಂಬ ಧ್ವನಿ ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.












Click it and Unblock the Notifications