ಕಲಬುರಗಿಯಿಂದ-ಬೆಂಗ್ಳೂರಿಗೆ ಪ್ರತ್ಯೇಕ ರೈಲು ಸಂಚಾರ ಯಾವಾಗ?-ಮಾಹಿತಿ ಇಲ್ಲಿದೆ

ಕಲಬುರಗಿ, ಫೆಬ್ರವರಿ, 07: ಸಾರಿಗೆ ವಿಭಾಗಗಳಲ್ಲಿ ಭಾರತೀಯ ರೈಲ್ವೆಯು ವಿಸ್ತರಣೆ ಮೂಲಕ ದಿನದಿಂದ ಅಭಿವೃದ್ಧಿಯಾಗುತ್ತಲೇ ಇದೆ.ಇದೀಗ ಬಹುನಿರೀಕ್ಷಿತ ಕಲಬುರಗಿ-ಬೆಂಗಳೂರು ನೆಡುವೆ ಪ್ರತ್ಯೇಕ ರೈಲು ಸಂಚಾರವನ್ನು ಪ್ರಾರಂಭ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಒಂದು ತಿಂಗಳಲ್ಲೇ ಈ ರೈಲು ಸಂಚಾರ ಆರಂಭ ಆಗಲಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ನಿಖರವಾಗಿ ಯಾವಾಗ ಆರಂಭವಾಗಲಿದೆ, ಯಾವೆಲ್ಲ ಮಾರ್ಗಗಳಲ್ಲಿ ಈ ರೈಲು ಸಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸಂಸದ ಉಮೇಶ್‌ ಜಾಧವ್‌ ಮಾತನಾಡಿದ್ದು, ಪ್ರಯಾಣಿಕರ ಒತ್ತಡ ಹೆಚ್ಚಾಗಿ ಇರುವುದನ್ನು ಗಮನಿಸಿ ಕೇಂದ್ರ ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ಸಚಿವರು ತಾತ್ವಿಕವಾಗಿ ಒಪ್ಪಿದ್ದಾರೆ ಎಂದು ತಿಳಸಿದ್ದಾರೆ. ಇನ್ನು ಕಲಬುರಗಿ ವಿಭಾಗೀಯ ರೈಲ್ವೆ ಕಚೇರಿ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿ, ಈ ಕುರಿತು ಪ್ರಯತ್ನ ಜಾರಿಯಲ್ಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ತಪ್ಪಿಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ ಎಂದಿದ್ದಾರೆ.

When is the separate train service from Kalaburagi-Bengaluru?, know details

ರೈಲ್ವೆ ಕಚೇರಿ ಸ್ಥಾಪನೆಗೆ ಕ್ರಮಕೈಗೊಳ್ಳಲಾಗುವುದು. ಕೇಂದ್ರ ರೈಲ್ವೆ ಸಚಿವಾಲಯ ರೈಲ್ವೆ ನಿಲ್ದಾಣಗಳಿಗೆ ಮೂಲ ಸೌಲಭ್ಯ ಒದಗಿಸಲು ಕಲಬುರಗಿ, ವಾಡಿ ಮತ್ತು ಶಾಹಾಬಾದ್‌ ನಿಲ್ದಾಣಗಳಿಗೆ ತಲಾ 30 ಕೋಟಿ ರೂಪಾಯಿ ನೀಡಲಾಗಿದೆ ಎಂದರು. ಇನ್ನು ಕಲ್ಯಾಣ ಕರ್ನಾಟಕದ ಗದಗ-ವಾಡಿ ರೈಲು ಮಾರ್ಗದ ಕಾಮಗಾರಿ ವೇಗ ಪಡೆದಿವೆ.

ಈ ಭಾಗದ ಬಹುದಿನಗಳ ಕನಸು ನನಸಾಗುವ ಸದಾವಕಾಶ ಇದೀಗ ಬಂದೊದಗಿದೆ. ಕಲ್ಯಾಣ ಕರ್ನಾಟಕದ ಎರಡು ಪ್ರಮುಖ ಯೋಜನೆಯಾದ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ಮಧ್ಯದ ಮಾರ್ಗದಲ್ಲಿಒಂದಾದ ಗದಗ-ವಾಡಿ ರೈಲು ನಡುವಿನ ಮಾರ್ಗವನ್ನು 2026ರ ಮಾರ್ಚ್ ವೇಳೆಗೆ‌ ಮುಗಿಸುವ ಗಡುವು ನೀಡಲಾಗಿದೆ.

ಗದಗ-ವಾಡಿ ರೈಲು ಮಾರ್ಗದ ಕಾಮಗಾರಿಯು 2013-14ರಲ್ಲಿ ಮಂಜೂರಾಗಿದೆ. ಒಟ್ಟು 257.26 ಕಿಲೋ ಮೀಟರ್‌, ಅಂದಾಜು ಮೊತ್ತ 2841.84 ಕೋಟಿ ರೂಪಾಯಿ ಆಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇಕಡಾ 50ರಷ್ಟು ಸಮಪಾಲಿದೆ. ಈಗಾಗಲೇ ಭೂಸ್ವಾಧೀನ ಒಟ್ಟು 3,764 ಹೆಕ್ಟೇರ್‌, ಅದರಲ್ಲಿ ಕೊಪ್ಪಳ ಜಿಲ್ಲೆಯ 1,009 ಹೆಕ್ಟೇರ್‌ ಭೂ ಸ್ವಾಧೀನ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ,

ಗದಗದಿಂದ ತಳಕಲ್‌ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್‌ದಿಂದ ಕುಷ್ಟಗಿವರೆಗಿನ 57 ಕಿಲೋ ಮೀಟರ್‌ ಪೈಕಿ ನಿಂಗಲಬಂಡಿ ಗ್ರಾಮದವರೆಗೆ ಕೆಲಸ ಮುಕ್ತಾಯವಾಗಿದೆ. ನಿಂಗಲಬಂಡಿ ಗ್ರಾಮದಿಂದ ಕುಷ್ಟಗಿವರೆಗಿನ ರೈಲು ಮಾರ್ಗದ ಕಾಮಗಾರಿ ತೀವ್ರವಾಗಿ ನಡೆಯುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ರೈಲು ನಿಂಗಲಬಂಡಿವರಗೆ ಸಂಚಾರ ಮಾಡಿದೆ.

ಇನ್ನು ಕುಷ್ಟಗಿವರೆಗೆ ಹಳಿ ಜೋಡಣೆ ಮಾಡಲಾಗಿದೆ. ರೈಲು ಮಾರ್ಗದ ನಡುವೆ ಕುಷ್ಟಗಿ-ಕೊಪ್ಪಳ ಮುಖ್ಯ ರಸ್ತೆ ಹಾಗೂ ಹೇದ್ದಾರಿ 50 ಇರುವುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿತ್ತು. ಆದರೂ ಕೂಡ ಭೂಮಿ ಸಮಾನಂತರವಾಗಿ ರೈಲು ಹಳಿ ಜೋಡಣೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಕುಷ್ಟಗಿ-ಕೊಪ್ಪಳ ರಸ್ತೆಯ ಮೇಲೆ ಕಾಮಗಾರಿ ನಡೆಯುತ್ತಿದೆ. ಮಾರ್ಚ್ನೊಳಗೆ ಕಾಮಗಾರಿ ಮುಕ್ತಾಯವಾಗಲಿದ್ದು, ಕುಷ್ಟಗಿಗೆ ರೈಲು ಸಂಚಾರ ಆರಂಭಗೊಳ್ಳಲಿದೆ ಎಂಬ ಮಾಹಿತಿಯನ್ನು ಗುತ್ತಿಗೆದಾರ ವಲಯ ತಿಳಿಸಿದೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+