• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಟ್ಟ ಬಾಲಕಿಯ ಪ್ರಶ್ನೆಗೆ ಮನಸೋತ ಶಿಕ್ಷಣ ಸಚಿವ ಸುರೇಶ್ ಕುಮಾರ್

|

ಬೆಂಗಳೂರು, ಜೂನ್ 4: ಶಾಲೆಗಳನ್ನು ಮತ್ತೆ ಯಾವಾಗ ತೆರೆಯಲಾಗುತ್ತದೆ ಎನ್ನುವ ಪ್ರಶ್ನೆ ಎಲ್ಲ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೆ. ಈ ಪ್ರಶ್ನೆಯನ್ನು ಪುಟ್ಟ ಬಾಲಕಿಯೊಬ್ಬಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ರಿಗೆ ನೆರವಾಗಿ ಕೇಳಿದ್ದಾಳೆ.

   ಸದ್ಯಕ್ಕೆ ಶಾಲೆ ಆರಂಭವಾಗೋದಿಲ್ಲ,ಪೋಷಕರು ಚಿಂತೆ ಮಾಡ್ಬೇಡಿ | Education Minister on School Opening

   ಸುರೇಶ್ ಕುಮಾರ್ ಈ ಘಟನೆಯನ್ನು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ವಿಧಾನಸೌಧಕ್ಕೆ ಹೊರಟಿದ್ದ ಸಮಯದಲ್ಲಿ ನನ್ನ ಪುಟ್ಟ ಸ್ನೇಹಿತೆ ಬಂದು ನನ್ನೆದುರು ನಿಂತಳು ಎಂದು ಆ ಸಂದರ್ಭವನ್ನು ವಿವರಿಸಿದ್ದಾರೆ. ಪುಟ್ಟ ಬಾಲಕಿ ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಸುರೇಶ್ ಕುಮಾರ್‌ರಿಗೆ ಕೇಳಿದ್ದಾಳೆ.

   ಮಕ್ಕಳಿಗಷ್ಟೇ ಅಲ್ಲ, ಶಿಕ್ಷಣ ಸಚಿವರಿಗೂ ಪರೀಕ್ಷೆ; ಯಾರೂ 'ಫೇಲ್' ಆಗದಿರಲಿ

   ಮಹನ್ಯಾ ಎಂಬ ಬಾಲಕಿ "ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ" ಎಂದು ಸುರೇಶ್ ಕುಮಾರ್‌ ಜೊತೆ ಮಾತು ಶುರು ಮಾಡಿದ್ದಾಳೆ. "ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ" ಎಂದು ಪ್ರಶ್ನೆ ಹಾಕಿದ್ದಾಳೆ. ಇದಕ್ಕೆ "ಯಾವಾಗ ಶುರು ಮಾಡಬೇಕು?" ಎಂದು ಸುರೇಶ್ ಕುಮಾರ್ ನಗುತ್ತಾ ಮರು ಪ್ರಶ್ನೆ ಕೇಳಿದ್ದಾರೆ.

   ಆಗ ಆ ಬಾಲಕಿ "ಕೊರೋನಾ ಹೋದ ಮೇಲೆ" ಎಂದಿದ್ದಾರೆ. ಮತ್ತೆ ಸುರೇಶ್ ಕುಮಾರ್ "ತುಂಬಾ ದಿನ ಕೊರೊನಾ ಹೋಗದಿದ್ದರೆ" ಎಂದು ಕೇಳಿದ್ದಾರೆ. ಆಗ "ಇಲ್ಲ. ಕೊರೊನಾ ಹೋದ ಮೇಲೇ ಓಪನ್ ಮಾಡಿ" ಎಂದು ಉತ್ತರ ನೀಡಿದ್ದಾರೆ.

   "ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ" ಎಂದು ಕೇಳಿದ ಸುರೇಶ್ ಕುಮಾರ್‌ರಿಗೆ "ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ" ಎಂದು ನುಡಿದಿದ್ದಾಳೆ.

   ಈ ಪುಟ್ಟ ಬಾಲಕಿಯ ಹೆಸರು ಮಹನ್ಯಾ. ಆಕೆ ಒಂದನೇ ತರಗತಿ ಓದುತ್ತಿದ್ದಾಳೆ. ಈ ಸಿಹಿ ಸಮಯದ ವಿಡಿಯೋವನ್ನು ಮಹನ್ಯಾ ತಾಯಿ ಮಾಡಿದ್ದಾರೆ. ಬಾಲಕಿಯ ಪ್ರಶ್ನೋತ್ತರಗಳಿಗೆ ಸುರೇಶ್ ಕುಮಾರ್ ಮನಸೋತ್ತಿದ್ದಾರೆ.

   English summary
   When is the reopening of schools a small girl questioned Primary and Secondary Education Minister Suresh Kumar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X