ಮೋದಿ- ರಜನಿ ಭೇಟಿ ಅಲೆ ಜಾಲತಾಣ ಕಂಡಂತೆ
ಬೆಂಗಳೂರು, ಏ.16: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಳೆದ ಭಾನುವಾರ ಭೇಟಿ ಮಾಡಿದ್ದು ದೊಡ್ಡ ಮಟ್ಟದ ಸುದ್ದಿಯಾಯಿತು. ರಜನಿ ಭೇಟಿ ಚಿತ್ರವನ್ನು ಮೋದಿ ಅವರು ತಕ್ಷಣವೇ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಹಾಕುವ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲೂ ಕಿಚ್ಚು ಹಬ್ಬಿಸಿದರು.
ಏ.13 ರಂದು ತಮಿಳು ಹೊಸ ವರ್ಷಾಚರಣೆಗೆ ಶುಭ ಹಾರೈಸಲು ಮೋದಿ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿದ್ದು ರಾಜಕೀಯ ವಲಯದಲ್ಲೂ ಭಾರಿ ಚರ್ಚೆಗೊಳಗಾಯಿತು. ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆಗೆ ಭಯ ಶುರುವಾಗುವುದು ಗ್ಯಾರಂಟಿ, ನೆಲೆ ಇಲ್ಲದ ಬಿಜೆಪಿ ಹೆಮ್ಮೆರದಂತೆ ತಲೆ ಎತ್ತುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟರು.
ಆದರೆ, ಇದರಿಂದ ಬಿಜೆಪಿ ಲಾಭ ಪಡೆಯಿತೋ ಇಲ್ಲವೋ ಟ್ವಿಟ್ಟರ್ ನಲ್ಲಂತೂ ಕ್ರಾಂತಿ ಉಂಟಾಯಿತು. ಕೆಲವೇ ಗಂಟೆಗಳಲ್ಲಿ ಟ್ವೀಟ್(@narendramodi) 4,427 ರೀಟ್ವೀಟ್ಸ್, 3,511 ಫೇವರೀಟ್ ಟ್ವೀಟ್ ಆಗಿ ಕಾಣಿಸಿಕೊಂಡಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ರಜನಿ-ಮೋದಿ ಭೇಟಿ ಅಲೆ ಹೇಗೆ ಸದ್ದು ಮಾಡಿದೆ ನೋಡೋಣ...
ಫೇಸ್ ಬುಕ್ ನಲ್ಲಿ ಸುಮಾರು 14,381,056 ಜನರಿಗೆ ತಲುಪಿದ್ದು, 1,387,804 ಜನ ಈ ಚಿತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಫೇಸ್ ಬುಕ್ ಲೈಕ್ ಲೆಕ್ಕ ಹಾಕಿದರೆ (1,273,943 ಅಥವಾ 1.2 ಮಿಲಿಯನ್) ಲೈಕ್ಸ್ ಸಿಕ್ಕಿದೆ. 46,621 ಕಾಮೆಂಟುಗಳು, 67,240 ಬಾರಿ ಷೇರ್ ಆಗಿದೆ. ಇದು ಏ.15ರ ಲೆಕ್ಕಾಚಾರ ಈ ಅಂಕಿ ಅಂಶ ಬೆಳೆಯುತ್ತಲೇ ಇದೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಮೋದಿ ಹಾಗೂ ರಜನಿ ಭೇಟಿ ಕುರಿತಂತೆ ಬಂದಿರುವ ಕೆಲವು ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ ವೀಕ್ಷಿಸಿ...

ಟ್ವಿಟ್ಟರ್ ವಿಷಯಕ್ಕೆ ಬಂದರೆ
ಟ್ವಿಟ್ಟರ್ ವಿಷಯಕ್ಕೆ ಬಂದರೆ 5543 ಮಂದಿ ಚಿತ್ರವನ್ನು ವೀಕ್ಷಿಸಿದ್ದು, 6263 ಮಂದಿ ಚರ್ಚೆ ನಡೆಸಿದ್ದಾರೆ. 4920 ರೀಟ್ವೀಟ್ಸ್, 3937 ಫೇವರೀಟ್ಸ್ 1343 ರಿಪ್ಲೇಗಳನ್ನು ಕಂಡಿದೆ.

ಇದೊಂದು ಸೌಹಾರ್ದ ಭೇಟಿ ಎಂದ ರಜನಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನನ್ನ ಸ್ನೇಹಿತರು ಇದೊಂದು ಸೌಹಾರ್ದಯುತ ಭೇಟಿ ಎಂದು ರಜನಿ ಕಾಂತ್ ಅವರು ಚೆನ್ನೈನ ತಮ್ಮ ನಿವಾಸದ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದರು.
| Array |
ರಜನಿ ಭೇಟಿಯಾದ ಮೇಲೆ ಮೋದಿ ಹೇಳಿಕೆ!
ರಜನಿ ಭೇಟಿಯಾದ ಮೇಲೆ ಮೋದಿ ಹೇಳಿಕೆ ಹೇಗಿರಬಹುದು ಎಂಬುದರ ಬಗ್ಗೆ ಟ್ವೀಟ್
| Array |
272 ಮ್ಯಾಜಿಕ್ ನಂಬರ್ ದಾಟಲು ಸಹಕರಿಸಿ
272 ಮ್ಯಾಜಿಕ್ ನಂಬರ್ ದಾಟಲು ಸಹಕರಿಸಿ ಎಂದು ರಜನಿಗೆ ಮನವಿ ಪತ್ರ ಹಾಕಿದರೆ ಬಂತು ನೋಡಿ ಉತ್ತರ
| Array |
ಫೇಸ್ ಬುಕ್ ನಲ್ಲಿ ಹರಿದಾಡಿದ ಜನಪ್ರಿಯ ಚಿತ್ರ
ಫೇಸ್ ಬುಕ್ ನಲ್ಲೂ ರಜನಿ ಹಾಗೂ ಮೋದಿ ಭೇಟಿ ಚಿತ್ರ ಹರಿದಾಡಿ ಜನಪ್ರಿಯ ಚಿತ್ರ ಎನಿಸಿತು.
| Array |
ಮೋದಿ-ರಜನಿ ಭೇಟಿಯಾಗುತ್ತಿದ್ದಂತೆ ಇಟಲಿ
ಮೋದಿ-ರಜನಿ ಭೇಟಿಯಾಗುತ್ತಿದ್ದಂತೆ ಇಟಲಿ ಕೂಡಾ ಬಿಜೆಪಿ ಬೆಂಬಲ ನೀಡಲು ಒಪ್ಪಿದೆಯಂತೆ












Click it and Unblock the Notifications