• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯ ಬಜೆಟ್: ಬೆಂಗಳೂರಿಗೆ ದೊರೆತಿದ್ದೇನು? ಇಲಾಖೆವಾರು ಮಾಹಿತಿ

|
   ಕರ್ನಾಟಕ ಬಜೆಟ್ 2018 : ಬೆಂಗಳೂರಿಗರಿಗೆ ಸಿದ್ದರಾಮಯ್ಯ ಕೊಟ್ಟ ಕೊಡುಗೆಗಳು | Oneindia Kannada

   ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ 13 ನೇ ಹಾಗು ಮುಖ್ಯಮಂತ್ರಿಯಾಗಿ 6ನೇ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದರು.2018-19ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದೆ.

   ಸಿದ್ದರಾಮಯ್ಯ ಅವರು ಬೆಂಗಳೂರಿಗೆ ಏನೇನು ಮೀಸಲಿಟ್ಟಿದ್ದಾರೆ. ಈ ಬಾರಿ ಬೆಂಗಳೂರು ಏನೇನು ಪಡೆಯಲಿದೆ ಎನ್ನುವುದರ ಇಲಾಖಾವಾರು ವಿವರ ಇಲ್ಲದೆ. ರಾಜ್ಯ ಬಜೆಟ್ ನಲ್ಲಿ ನಮ್ಮ ಮೆಟ್ರೋ, ಒಳಚರಂಡಿ, ರಸ್ತೆಗಳು, ನಗರ ಭೂ ನಿರ್ದೇನಾಲಯ ವಿವಿಧ ಇಲಾಖೆಗಳಿಗೆ ಏನೇನು ದೊರೆಯಲಿದೆ ಎಂಬ ವಿವರ ಇಲ್ಲದೆ.

   Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು

   500 ಕೋಟಿ ಅನುದಾನದೊಂದಿಗೆ ಕ್ರಿಯಾ ಯೋಜನೆ ಸಿದ್ಧ

   500 ಕೋಟಿ ಅನುದಾನದೊಂದಿಗೆ ಕ್ರಿಯಾ ಯೋಜನೆ ಸಿದ್ಧ

   1) ಪ್ರದೇಶಾಧಾರಿತ ಮಾದರಿಯಲ್ಲಿ ನಗರದ 25 ಪ್ರಮುಖ ರಸ್ತೆಗಳನ್ನು ಟೆಂಡರ್ ಶ್ಯೂರ್ ಮಾದರಿಯಲ್ಲಿ ಅಭಿವೃದ್ಧಿ,
   2) ಐತಿಹಾಸಿಕ ವಾಣಿಜ್ಯ ಕೇಂದ್ರವಾದ ಕೆ.ಆರ್. ಮಾರುಕಟ್ಟೆ ಪ್ರದೇಶದ ಪುನಶ್ಚೇತನ
   3) ಶಿವಾಜಿನರದ ಸಂಯೋಜಿತ ಪ್ರದೇಶ ಅಭಿವೃದ್ಧಿ, ಹಲಸೂರು ಕೆರೆ ಅಭಿವೃದ್ಧಿ, ಕೆಸಿ ಜನರಲ್ ಆಸ್ಪತ್ರೆ ನವೀಕರಣ

   ಬೆಂಗಳೂರಿನಲ್ಲಿ ಬಹುಮಹಡಿ ವಾಹನ ನಿಲ್ದಾಣಗಳ ನಿರ್ಮಾಣ ಘೋಷಣೆ

   ಬೆಂಗಳೂರಿನಲ್ಲಿ ಬಹುಮಹಡಿ ವಾಹನ ನಿಲ್ದಾಣಗಳ ನಿರ್ಮಾಣ ಘೋಷಣೆ

   ಗಾಂಧಿ ಬಜಾರ್, ಗಾಂಧಿನಗರದ ಸುಖಸಾಗರ್ ಹೋಟೆಲ್ ಬಳಿ, ಡಿಸ್ಪೆನ್ಸರಿ ರಸ್ತೆ, ಬಳಿ, ರೇಸ್ ಕೋರ್ಟ್ ರಸ್ತೆ, ಶೇಷಾದ್ರಿ ರಸ್ತೆ, ಕೋರಮಂಗಲ 4 ನೇ ಬಡಾವಣೆ, ಜಯನಗರ ಕಾಂಪ್ಲೆಕ್ಸ್, ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಾಣವಾಗಲಿದೆ.

   ರಾಜಧಾನಿಗೆ ಸಿದ್ದರಾಮಯ್ಯ ಬಜೆಟ್ ನಲ್ಲಿ ಕೊಟ್ಟಿದ್ದೇನು? ಹೈಲೈಟ್ಸ್

   3ನೇ ಹಂತದ ಮೆಟ್ರೋ ಯೋಜನೆಯು ಎಲ್ಲಿಂದೆಲ್ಲಿಗೆ

   3ನೇ ಹಂತದ ಮೆಟ್ರೋ ಯೋಜನೆಯು ಎಲ್ಲಿಂದೆಲ್ಲಿಗೆ

   2018-19ರಲ್ಲಿ 105.55 ಕಿ.ಮೀ ಉದ್ದದ ಬೆಂಗಳೂರು ಮೆಟ್ರೋ ಹಂತ 3 ಯೋಜನೆಯ ವಿಸ್ತೃತ ಯೋಜನಾ ವರದಿ ತಯಾರಿಸಲು ಅಗತ್ಯಕ್ರಮ
   ಹಂತ 3 ರಲ್ಲಿ ಜೆಪಿನಗರದಿಂದ ಹೆಬ್ಬಾಳದ ಮೂಲಕ ಕೆ.ಆರ್. ಪುರಂ, ಟೋಲ್ ಗೇಟ್ ನಿಂದ ಕಡಬಗೆರೆ, ಗೊಟ್ಟಿಗೆರೆಯಿಂದ ಬಸವಾಪುರ, ಆರ್ ಕೆ ನಗರದಿಂದ ಏರೋಸ್ಪೇಸ್ ಪಾರ್ಕ್, ಕೋಗಿಲು ಕ್ರಾಸ್ ನಿಂದ ರಾಜನುಕುಂಟೆ, ಬೊಮ್ಮಸಂದ್ರದಿಂದ ಅತ್ತಿಬೆಲೆ, ಇಬ್ಬಲೂರಿನಿಂದ ಕರ್ಮಲ್ ರಾಮ್ ಮೆಟ್ರೋ ಸಂಪರ್ಕ ಕಲ್ಪಿಸಲಾಗುತ್ತದೆ.

   ನೀರು ಸರಬರಾಜು ಯೋಜನೆಗಳ ಬಗ್ಗೆ ಮಾಹಿತಿ

   ನೀರು ಸರಬರಾಜು ಯೋಜನೆಗಳ ಬಗ್ಗೆ ಮಾಹಿತಿ

   1) ಪ್ರಾಯೋಗಿಕವಾಗಿ 10 ಸ್ಥಳೀಯ ಸಂಸ್ಥೆಗಳಲ್ಲಿ ನೀರು ಸರಬರಾಜು ಯೋಜನೆಗಳ ಮಾಹಿತಿ, ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು 25 ಕೋಟಿ ರೂ. ಅನುದಾನ
   2) ಬೆಳಗಾವಿ ನಗರ ನೀರು ಸರಬರಾಜು ಯೋಜನೆಯನ್ನು ಪ್ರಾಯೋಗಿಕವಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಕ್ರಮ
   3) ರಾಜ್ಯದ ಹತ್ತು ಪಟ್ಟಣಗಳಲ್ಲಿ ಎಲ್ಲಾ ವಾಸದ ಮನೆಗಳಿಗೆ ಪ್ರತ್ಯೇಕ ಸಂಪರ್ಕ ಕಲ್ಪಿಸಲು ಕ್ರಮ

   ಸ್ಮಾರ್ಟ್ ಸಿಟಿ, ನಗರಗಳಲ್ಲಿ ಎಲ್ಇಡಿ ದೀಪ

   ಸ್ಮಾರ್ಟ್ ಸಿಟಿ, ನಗರಗಳಲ್ಲಿ ಎಲ್ಇಡಿ ದೀಪ

   1) ಕರ್ನಾಟಕದ ಎಲ್ಲಾ ಸ್ಮಾರ್ಟ್ ಸಿಟಿ/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳ ಬದಲಿಗೆ ಕೇಂದ್ರೀಕೃತ ನಿಯಂತ್ರಣ ಮತ್ತು ಉಸ್ತುವಾರಿ ವ್ಯವಸ್ಥೆ ಹೊಂದಿದ ಎಲ್ಇಡಿ ದೀಪಗಳನ್ನು ಅಳವಡಿಸಲು ಕ್ರಮ.
   2) ಮೊದಲ ಹಂತದಲ್ಲಿ ಎಲ್ಲಾ ಮಹಾನಗರ ಪಾಲಿಕೆಗಳು ಮತ್ತು ನಗರ ಸಭೆಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ಎಲ್ಲಾ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಈ ಯೋಜನೆ ಜಾರಿ
   3) ರಾಜ್ಯದಲ್ಲಿ ಪ್ರಾಯೋಗಿಕವಾಗಿ 10 ನಗರಗಳಲ್ಲಿ ತ್ಯಾಜ್ಯ ನೀರಿನ ಮರು ಬಳಕೆ ಯೋಜನೆ ಜಾರಿ

   ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಉದ್ದೇಶ ವಾಹಕ

   ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಉದ್ದೇಶ ವಾಹಕ

   1) ಬೆಂಗಳೂರು ಉಪನಗರ ರೈಲು ಯೋಜನೆಗಾಗಿ ರೈಲ್ವೆ ಮಂತ್ರಾಲಯದದೊಂದಿಗೆ ಜಂಟಿಯಾಗಿ ವಿಶೇಷ ಉದ್ದೇಶ ವಾಹಕ ಪ್ರಾರಂಭಿಸಲು ನಿರ್ಧಾರ
   2) 1745 ಕೋಟಿ ರೂ ಗಳನ್ನು ಯೋಜನಾ ವೆಚ್ಚದಲ್ಲಿ ಹಂತ 1 ನ್ನು ಅನುಷ್ಠಾನಗೊಳಿಸಲು ಎಸ್ ಪಿವಿ ಈಕ್ವಿಟಿಗಾಗಿ 349 ಕೋಟಿ ರೂ ಮಂಜೂರು
   3) ಟೈರ್-2 ನಗರಗಳ ಆದ್ಯತೆಯ ಪ್ರದೇಶಗಳಲ್ಲಿ 25 ಕೋಟಿ ರೂಗಳ ವೆಚ್ಚದಲ್ಲಿ ಪಾದಚಾರಿ ಮಾರ್ಗ ಸುಧಾರಣೆ ಮತ್ತು ಸೈಕಲ್ ಪಥದ ಮೂಲ ಸೌಕರ್ಯ ಅಭಿವೃದ್ಧಿ
   4) ಜಪಾನ್ ಸರ್ಕಾರದ ನೆರವಿನೊಂದಿಗೆ ಬೆಂಗಳೂರಿನ ಮುಖ್ಯ ಪ್ರದೇಶಗಳಲ್ಲಿ ಸುಧಾರಿತ ಮಾಹಿತಿ ಮತ್ತು ಸಂಚಾರ ನಿರ್ವಹಣೆ ವ್ಯವಸ್ಥೆಯ ಅನುಷ್ಠಾನ

    ಭೂಮಾಪನಾ ಇಲಾಖೆ ವತಿಯಿಂದ 5 ಮೊಬೈಲ್ ಅಪ್ಲಿಕೆಷನ್ ಅಭಿವೃದ್ಧಿ

   ಭೂಮಾಪನಾ ಇಲಾಖೆ ವತಿಯಿಂದ 5 ಮೊಬೈಲ್ ಅಪ್ಲಿಕೆಷನ್ ಅಭಿವೃದ್ಧಿ

   1) ಇಲಾಖೆಯ ಸಾರ್ವಜನಿಕ ಸೇವೆಗಳು ಪಡೆಯಲು'ಸಂಯೋಜನೆ'
   2) ನಾಗರೀಕ ತಾನು ನಿಂತಿರುವ ಸ್ಥಳದ ಸರ್ವೆ ನಂಬರ್ ಹಾಗೂ ನಕಾಶೆ ಪಡೆಯಲು'ದಿಶಾಂಕ್'
   3) ಎಲ್ಲಾ ಪೋಡಿ, ಅಳತೆ ಮತ್ತು 11 -ಇ ಕೆಲಸಗಳನ್ನು ಡಿಜಿಟಲ್ ನಕಾಶೆ ನೀಡುವ ಮೂಲಕ ಪಡೆಯಲು 'ಸಮೀಕ್ಷೆ'
   4) ಸಾರ್ವಜನಿಕರ ಆಧಾರ್ ಸಂಖ್ಯೆಯನ್ನು ಸಂಗ್ರಹಿಸಲು ಆಧಾರ್ ಸಂಗ್ರಹಣೆ
   5) ಯಾವುದೇ ಸ್ಥಿರಾಸ್ತಿಯ ಮಾರ್ಗಸೂಚಿ ಮೌಲ್ಯ ತಿಳಿಯಲು ಮೌಲ್ಯ

   ರಸ್ತೆ ಅಪಘಾತಗಳನ್ನು ತಡೆಗಟ್ಟಲು 150 ಕೋಟಿ ಅನುದಾನ

   ರಸ್ತೆ ಅಪಘಾತಗಳನ್ನು ತಡೆಗಟ್ಟಲು 150 ಕೋಟಿ ಅನುದಾನ

   1) ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿವಿಧ ಯೋಜನೆಯಡಿ 150 ಕೋಟಿ ರೂ ಅನುದಾನ
   2) ಬೆಂಗಳೂರು ಎಂ.ಎಸ್. ಬಿಲ್ಡಿಂಗ್ ಹತ್ತಿರ 2 ಕೋಟಿ ರೂ ವೆಚ್ಚದಲ್ಲಿ ಬಹುಮಹಡಿ ವಾಹನ ನಿಲ್ದಾಣ ನಿರ್ಮಾಣ
   3) 32 ಕೋಟಿ ರೂ ವೆಚ್ಚದಲ್ಲಿ ಬಿಡದಿ-ಹಾರೋಹಳ್ಳಿ ರಸ್ತೆ ಸರಪಳಿ 11.20 ರಿಂದ 17.00 ಕಿ.ಮೀ ವರೆಗೆ ನಾಲ್ಕು ಪಥ ರಸ್ತೆಯನ್ನಾಗಿ ಅಗಲೀಕರಣ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   ಇನ್ನಷ್ಟು ಬೆಂಗಳೂರು ಸುದ್ದಿಗಳುView All

   English summary
   To improve the infrastructure of Bengaluru like roads, drainage, grade separate and many more chief minister Siddaramaiah announced an action plan of Rs.2500 crore in his budget.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more