ಭಾರತದಲ್ಲಿ ಕೊರೊನಾ ಚಿಕಿತ್ಸೆಗೆ ಖರ್ಚಾಗುವ ಹಣ ಎಷ್ಟು ಗೊತ್ತಾ?

ಬೆಂಗಳೂರು, ಏಪ್ರಿಲ್ 23: ಕೊರೊನಾ ವೈರಸ್ ಹಾವಳಿಯಿಂದ ಸೋಂಕು ತಗುಲಿಸಿಕೊಂಡು ಪ್ರತಿದಿನ ಸಾವಿರಾರು ಜನ ದೇಶದಲ್ಲಿ ಆಸ್ಪತ್ರೆ ಸೇರುತ್ತಿದ್ದಾರೆ. ಕೊರೊನಾ ಮಟ್ಟಹಾಕಲು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿ, ಪಾಸಿಟಿವ್ ಬಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಗಲಿರುಳು ಶ್ರಮಿಸುತ್ತಿವೆ.

ಕೊರೊನಾಕ್ಕೆ ತುತ್ತಾಗಿರುವವರನ್ನು ಆಸ್ಪತ್ರಗೆ ಸೇರಿಸಿ ಸರ್ಕಾರವೇ ವಿಶೇಷ ಚಿಕಿತ್ಸೆ ನೀಡುತ್ತಿದೆ. ಆದರೆ, ಬಹಳಷ್ಟು ಜನರಿಗೆ ಕೊರೊನಾ ರೋಗಿ ಚಿಕಿತ್ಸೆಗೆ ಎಷ್ಟು ವೆಚ್ಚ ತಗುಲುತ್ತದೆ ಎಂಬ ಕುತೂಹಲ ಕಾಡುತ್ತಿದೆ.

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್‌ ವಿಶೇಷ ವರದಿ ಪ್ರಕಟಿಸಿದ್ದು ಕೊರೊನಾ ಚಿಕಿತ್ಸೆಗಾಗಿ ಯಾವ ಯಾವ ಹಂತದಲ್ಲಿ ಯಾವ ಯಾವ ಪ್ರಕಾರದ ರೋಗಿಗಳಿಗೆ ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ.

3 ಲಕ್ಷ ರುಪಾಯಿವರೆಗೆ ಖರ್ಚಾಗಲಿದೆ

3 ಲಕ್ಷ ರುಪಾಯಿವರೆಗೆ ಖರ್ಚಾಗಲಿದೆ

ಕೊರೊನಾ ವೈರಸ್ ತಗುಲಿದ ಸಾಮಾನ್ಯ ರೋಗಿಗೆ ವೆಂಟಿಲೇಟರ್ ಬೆಂಬಲ ಇಲ್ಲದೆ ಚಿಕಿತ್ಸೆ ನೀಡಿದರೆ, ಅಂದಾಜು ಪ್ರತಿದಿನ 20 ರಿಂದ 25 ಸಾವಿರ ರೂಪಾಯಿ ಖರ್ಚು ಬರಲಿದೆ ಎಂದು ಹಿಂದೂಸ್ತಾನ್‌ ಟೈಮ್ಸ್ ಹೇಳಿದೆ. ತಿರುವನಂತಪುರದ ವೈದ್ಯರ ಅಭಿಪ್ರಾಯವನ್ನು ಉಲ್ಲೇಖಿಸಿದೆ. ಸದ್ಯ ಸಾಮಾನ್ಯ ರೋಗಿಗಳಿಗೆ 14 ದಿನ ಆಸ್ಪತ್ರೆಯಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅಂದರೆ ಒಬ್ಬ ರೋಗಿಗೆ 14 ದಿನಗಳ ಚಿಕಿತ್ಸೆಗೆ 3 ಲಕ್ಷ ರುಪಾಯಿವರೆಗೆ ಖರ್ಚಾಗಲಿದೆ.

ತಪಾಸಣೆ ನಡೆಸಲು 4,500 ರೂಪಾಯಿ ನಿಗದಿಯಾಗಿದೆ

ತಪಾಸಣೆ ನಡೆಸಲು 4,500 ರೂಪಾಯಿ ನಿಗದಿಯಾಗಿದೆ

ಶಂಕಿತ ವ್ಯಕ್ತಿಯ ಗಂಟಲು ದ್ರವದ ಪರೀಕ್ಷೆ ನಡೆಸಲು 4,500 ರೂಪಾಯಿ ನಿಗದಿಯಾಗಿದೆ. ಈ ಟೆಸ್ಟ್ ಕಿಟ್ ನ ಬೆಲೆಯೇ 3000 ಸಾವಿರ ರೂಪಾಯಿ ಇದೆ. ಸಾಮಾನ್ಯವಾಗಿ ಕೋವಿಡ್ 19 ಪೀಡಿತ ರೋಗಿಗಳಿಗೆ ಸತತ ಮೂರರಿಂದ ಐದು ಪರೀಕ್ಷೆ ನಡೆಸಿ ಅದು ನೆಗೆಟೀವ್ ಎಂದು ಫಲಿತಾಂಶ ಬಂದ ನಂತರವೇ ಆ ವ್ಯಕ್ತಿಯನ್ನು ಡಿಸ್‌ಚಾರ್ಜ್ ಮಾಡಲಾಗುತ್ತದೆ. ಇದೆಲ್ಲ ಸೇರಿ ಅಂದಾಜು ಮೂರು ಲಕ್ಷ ರುಪಾಯಿ ಆ ರೋಗಿಗೆ ಖರ್ಚಾಗುತ್ತದೆ.

ವೆಂಟಿಲೇಟರ್ ಅಳವಡಿಸಿದರೆ ಹೆಚ್ಚು ವೆಚ್ಚ

ವೆಂಟಿಲೇಟರ್ ಅಳವಡಿಸಿದರೆ ಹೆಚ್ಚು ವೆಚ್ಚ

ಕೊರೊನಾದಿಂದ ನರಳುತ್ತಿರುವ ಶೇ 2 ರಿಂದ 4 ರೋಗಿಗಳಿಗೆ ಮಾತ್ರ ವೆಂಟಿಲೇಟರ್ ಅಗತ್ಯ ಇರುತ್ತದೆ. ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಿದರೆ ರೋಗಿಗೆ ತಗುಲುವ ಚಿಕಿತ್ಸಾ ವೆಚ್ಚ ಇನ್ನೂ ಹೆಚ್ಚಾಗಲಿದೆ. ಅಲ್ಲದೇ ಆಸ್ಪತ್ರೆಯಲ್ಲಿ ರೋಗಿಗೆ ಒದಗಿಸುವ ಇನ್ನೀತರ ವಿಶೇಷ ಔಷಧಿ ಹಾಗೂ ಸೌಲಭ್ಯಗಳ ಮೇಲೂ ವೆಚ್ಚ ನಿಗದಿಯಾಗುತ್ತದೆ.

ಭಾರತದಲ್ಲಿ ಉಚಿತ ಚಿಕಿತ್ಸೆ

ಭಾರತದಲ್ಲಿ ಉಚಿತ ಚಿಕಿತ್ಸೆ

ಸದ್ಯ ಭಾರತದಲ್ಲಿ ಕೊರೊನಾ ಪೀಡಿತರಿಗೆ ತಪಾಸಣೆ, ಚಿಕಿತ್ಸೆಯ ಖರ್ಚನ್ನು ರಾಜ್ಯ ಸರ್ಕಾರಗಳೇ ಮಾಡುತ್ತಿವೆ. ಅಲ್ಲದೇ ಹಲವು ವಿಮಾ ಸಂಸ್ಥೆಗಳು ಕೊರೊನಾಕ್ಕೆ ವಿಮೆ ಅನ್ವಯವಾಗುತ್ತದೆ ಎಂದು ತಿಳಿಸಿವೆ. ಕೊರೊನಾಕ್ಕೆ ಸೂಕ್ತ ಮದ್ದು ಅನ್ವೇಷಿಸದ ಹೊರತು ಇದೇ ರೀತಿಯ ಪರಿಸ್ಥಿತಿ ಇರಲಿದೆ ಹಾಗೂ ಚಿಕಿತ್ಸಾ ವೆಚ್ಚವೂ ಹೀಗೆ ಇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+