• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತೃಪ್ತ ಶಾಸಕರ ಬಗ್ಗೆ ಸಿದ್ದರಾಮಯ್ಯ ಬೆಂಬಲಿಗರ ಆಶ್ಚರ್ಯಕರ ಟ್ವೀಟ್‌

|

ಬೆಂಗಳೂರು, ಜುಲೈ 25: ವಿಶ್ವಾಸಮತ ಸಂದರ್ಭದಲ್ಲಿ ಸರ್ಕಾರದ ಪರ ನಿಲ್ಲದ ಕಾಂಗ್ರೆಸ್ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಮೇಯವೇ ಇಲ್ಲ, ಚುನಾವಣೆಯಲ್ಲಿ ಟಿಕೆಟ್ ನೀಡುವ ಸಾಧ್ಯತೆಯೂ ಇಲ್ಲ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದರು. ಆದರೆ ಈಗ ಸಿದ್ದರಾಮಯ್ಯ ಹಿಂಬಾಲಕರು ಭಿನ್ನ ಮಾತುಗಳನ್ನಾಡಿದ್ದಾರೆ.

ಕಾಂಗ್ರೆಸ್ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸುವುದು ಅಥವಾ ಅನರ್ಹತೆಗೆ ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ನೆರವಾಗ ಕೂಡದು, ಈ ಅತೃಪ್ತ ಕಾಂಗ್ರೆಸ್ ಶಾಸಕರು ಪಕ್ಷವನ್ನು ಗಟ್ಟಿಗೊಳಿಸುವ ಮಾತನ್ನಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

ಶಂಕರ್ ನಂತರ ರಮೇಶ್, ಮಹೇಶ್ ಕೂಡಾ ಅನರ್ಹ : ಸ್ಪೀಕರ್ಶಂಕರ್ ನಂತರ ರಮೇಶ್, ಮಹೇಶ್ ಕೂಡಾ ಅನರ್ಹ : ಸ್ಪೀಕರ್

ಈ ಮೂಲಕ ರಾಜ್ಯರಾಜಕಾರಣದಲ್ಲಿ ಇನ್ನಷ್ಟು ಕುತೂಹಲಕರ ಘಟನೆಗಳು ನಡೆಯುವ ಮುನ್ಸೂಚನೆ ಕಾಂಗ್ರೆಸ್ ನೀಡಿದೆ. ಹಾಗೆಯೇ ಈ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, ಬಿಜೆಪಿಯು ಅತೃಪ್ತ ಶಾಸಕರನ್ನು ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಅರಿತಿದ್ದಾರೆ.

ಹಾಗೆಯೇ ತಾವು ಸಂಕಷ್ಟಕ್ಕೆ ಸಿಲುಕಿದರೆ ಯಾವತ್ತೂ ಬಿಜೆಪಿ ತಮ್ಮ ಕೈ ಹಿಡಿಯುವುದಿಲ್ಲ ಎನ್ನುವುದೂ ಗೊತ್ತಿದೆ. ಅವರಿಗೆ ಹೊಸ ಸರ್ಕಾರದ ಒಂದು ಭಾಗವಾಗಿ ನಿಲ್ಲುವುದು ಕೂಡ ಕಷ್ಟವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಆರ್ ಶಂಕರ್ ಅವರನ್ನು ಅನರ್ಹಗೊಳಿಸಲಾಗಿದೆ.

English summary
Siddaramaiah Followers tweets signaling something more interesting political senario of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X