ಬೆಂಗಳೂರಿಗರಿಗೆ ಗುಡ್‌ನ್ಯೂಸ್: ಆಗಸ್ಟ್‌ 15ಕ್ಕೆ ವಿಧಾನಸೌಧ ನೋಡಲು ಮಕ್ಕಳಿಗೆ ಅವಕಾಶ, ಏನೆಲ್ಲ ಇರಲಿದೆ

80ನೇ ಸ್ವಾತಂತ್ರ್ಯ ದಿನಾಚರಣೆ ಈ ಬಾರಿ ಬೆಂಗಳೂರಿಗರಿಗೆ ವಿಶೇಷವಾಗಿರಲಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ಬೆಂಗಳೂರಿನ ಮಕ್ಕಳಿಗೆ ಫ್ರೀಡಂ ಹಬ್ಬ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ವಿಧಾನಸೌಧದ ಒಳಗೆ ಪ್ರವೇಶಿಸಿ, ಭವ್ಯ ವಿಧಾನಸಭಾ ಸಭಾಂಗಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಸಹ ಮಾಡಿಕೊಂಡಿದೆ. ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಗಳಲ್ಲಿ ಒಂದಾಗಿರುವ ವಿಧಾನಸೌಧದೊಳಗೆ ಪ್ರವೇಶಿಸುವ ಅವಕಾಶ ಬೆಂಗಳೂರಿಗರಿಗೆ ಸಿಗಲಿದೆ.

ಫ್ರೀಡಂ ಹಬ್ಬದಲ್ಲಿ ಭಾಗವಹಿಸುವ ಮಕ್ಕಳಿಗೆ ವಿಶೇಷ ಮಾರ್ಗದರ್ಶಿತ ಪ್ರವಾಸಗಳ ಮೂಲಕ ವಿಧಾನಸೌಧವನ್ನು ವೀಕ್ಷಿಸುವ ಹಾಗೂ ಭವ್ಯ ವಿಧಾನಸಭಾ ಸಭಾಂಗಣಕ್ಕೆ ಭೇಟಿ ನೀಡುವ ಅಪರೂಪದ ಅವಕಾಶ ಸಿಗಲಿದೆ.

Bengaluru

Bengaluru: ಬೆಂಗಳೂರು ನಗರ ಪೊಲೀಸರಿಂದಲೂ ಸಿದ್ಧತೆ

ಇನ್ನು ಬೆಂಗಳೂರಿನಲ್ಲಿ ನಡೆಯಲಿರುವ ಫ್ರೀಡಂ ಹಬ್ಬಕ್ಕೆ ಬೆಂಗಳೂರು ನಗರ ಪೊಲೀಸರು ಸಹ ಸಿದ್ಧತೆ ಮಾಡಿಕೊಂಡಿದ್ದಾರೆ. ಸ್ವತಂತ್ರವೆಂದರೆ ಸಂಭ್ರಮವಷ್ಟೇ ಅಲ್ಲ ಹೊಣೆಗಾರಿಕೆ ಕೂಡ. ಭಾರತದ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು, ಹಿರಿಯರ ತ್ಯಾಗವನ್ನು, ಅವರು ತಂದುಕೊಟ್ಟ ಸ್ವತಂತ್ರದ ಮಹತ್ವವನ್ನು ಯುವ ಸಮುದಾಯಕ್ಕೆ ನೆನಪಿಸುವ ಮೂಲಕ ಹೊಣೆಗಾರಿಕೆಯ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸ್ವಾತಂತ್ರ್ಯ ದಿನಾಚಾರಣೆಯಂದು "ಫ್ರೀಡಂ ಹಬ್ಬ" ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

ಕರ್ನಾಟಕದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿ ಕೇಂದ್ರವೆನಿಸಿರುವ ವಿಧಾನ ಸೌಧದ ಮುಂಬಾಗದಲ್ಲಿ ಫ್ರೀಡಂ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ವಿಧಾನಸೌಧದಲ್ಲಿ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದು, ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸೂಕ್ತ ಭದ್ರತೆ ಒದಗಿಸುವುದು ಅದ್ಯತೆಯಾಗಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭದ್ರತಾ ವ್ಯವಸ್ಥೆಯ ಬಗ್ಗೆ ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.

Bengaluru: ಫ್ರೀಡಂ ಹಬ್ಬ: ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು

ಈ ಬಗ್ಗೆ ಮಾತನಾಡಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ನಮ್ಮ ಮಕ್ಕಳಿಗಾಗಿ ವಿಧಾನಸೌಧದ ಬಾಗಿಲುಗಳನ್ನು ತೆರೆಯಲಿದ್ದೇವೆ. ಆಗಸ್ಟ್ 15ರಂದು ವಿಧಾನಸೌಧದ ಬಾಗಿಲುಗಳ ಮೂಲಕ ಒಳಗೆ ಕಾಲಿಡುವ ಪ್ರತಿಯೊಂದು ಮಗುವಿಗೂ ಅವರ ಜೀವನಪರ್ಯಂತ ಉಳಿಯುವಂತಹ ಒಂದು ಸುಂದರ ನೆನಪು ಇದಾಗಿರಲಿದೆ. ನಮ್ಮ ಮಕ್ಕಳು ಕೇವಲ ನಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸುವುದಷ್ಟೇ ಅಲ್ಲ, ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುವ ಮೌಲ್ಯಗಳು, ಸಂಸ್ಥೆಗಳು ಮತ್ತು ಹಂಚಿಕೊಂಡ ನಾಗರಿಕ ಹೊಣೆಗಾರಿಕೆಯನ್ನು ಅರ್ಥಮಾಡಿಕೊಳ್ಳಬೇಕು ಎನ್ನುವುದು ಈ ಫ್ರೀಡಂ ಹಬ್ಬದ ಉದ್ದೇಶವಾಗಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+