ಕುರುಕ್ಷೇತ್ರ ಶೂಟಿಂಗ್ ಸೆಟ್‌ಗೆ ಬರುತ್ತಿದ್ದ ಪವಿತ್ರಾ ಗೌಡನನ್ನು ದರ್ಶನ್ ಏನೆಂದು ಪರಿಚಯಿಸಿದ್ದರು?- ಆ ನಟ ಹೇಳಿದ್ದೇನು?
Darshan Case: ರೇಣುಕಸ್ವಾಮಿ ಕೊಲೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಹಾಗೆಯೇ ಹಲವರು ಈಗಾಗಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೀಗ ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟನೆ ಮಾಡಿರುವವ ನಟರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ಅಲ್ಲದೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಕುರುಕ್ಷೇತ್ರ ಶೂಟಿಂಗ್ ಸೆಟ್‌ನಲ್ಲಿ ದರ್ಶನ್ ಏನೆಂದು ಪರಿಚಯಿಸಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಟ ದರ್ಶನ್ ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಇನ್ನು ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ ಖಳನಟ ರವಿಚೇತನ್ ಇದೀಗ ರೇಣುಕಾಸ್ವಾಮಿ ಕೊಲೆ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ದರ್ಶನ್ ಪ್ರಕರಣ ವಿಚಾರ ನಂಬುವುದಕ್ಕೆ ಆಗುತ್ತಿಲ್ಲ. ಯಾರೇ ಮಾಡಿದರೂ ತಪ್ಪು ತಪ್ಪೇ. ನನಗೆ ದರ್ಶನ್ 25 ವರ್ಷಗಳಿಂದ ಗೊತ್ತಿದೆ. ಆದರೆ ನಾನು ನೋಡಿರುವ ದರ್ಶನ್ ಇವರಲ್ಲ. ಈಗ ಅವರು ಆರೋಪಿಯಷ್ಟೇ, ಅಪರಾಧಿ ಅಲ್ಲ ಎಂದಿದ್ದಾರೆ. ಅಲ್ಲದೆ, ಮೊದಲಿಗೆ ಈ ವಿಷಯ ಕೇಳುತ್ತಿದ್ದಂತೆ ನನಗೆ ತುಂಬಾ ಶಾಕ್ ಆಯಿತು ಎಂದರು.
ನಟ ದರ್ಶನ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ಅವರು ಶೂಟಿಂಗ್ ಸೆಟ್‌ನಲ್ಲಿ ಹೀಗೆ ಇರುತ್ತಿರಲಿಲ್ಲ. ದರ್ಶನ್ ಸ್ನೇಹ ಜೀವಿಯಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದರು. ಇನ್ನು ಕೊರೊನಾ ಲಾಕ್‌ಡೌನ್ ವೇಳೆ ತುಂಬಾ ಜನರಿಗೆ ಅವರು ಸಹಾಯ ಮಾಡಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಾನು ಅವರ ಜೊತೆ ಫೈಟ್ ಮಾಡಿದಷ್ಟು ಯಾರ ಜೊತೆಯೂ ಮಾಡಿಲ್ಲ. ನನಗೂ ಅದೆಷ್ಟೋ ಬಾರಿ ಪೆಟ್ಟಾದಾಗ ದರ್ಶನ್ ನನ್ನ ಕಡೆ ಹೆಚ್ಚಿನ ಕಾಳಜಿವಹಿಸಿದ್ದಾರೆ ಎಂದು ಹೇಳಿದ್ದಾರೆ.
"ಕುರುಕ್ಷೇತ್ರ ಸಿನಿಮಾ ಸೆಟ್‌ನಲ್ಲೂ ಪವಿತ್ರಾ ಗೌಡ ಬಂದಾಗ ಅವರನ್ನು ಸ್ನೇಹಿತೆ ಅಂತಾ ಪರಿಚಯ ಮಾಡಿಸಿದ್ದರು. ಅವರು ಕೂಡ ನಟಿಯೇ, ಆದರೆ ದರ್ಶನ್ ಅವರ ನಡುವಿನ ವೈಯಕ್ತಿಕ ವಿಚಾರದ ಬಗ್ಗೆ ನಮಗೆ ತಿಳಿದಿಲ್ಲ. ಸೆಟ್‌ನಲ್ಲಿ ಅವರ ಬಗ್ಗೆ ಮಾತನಾಡುತ್ತಿರಲಿಲ್ಲ," ಎಂದರು. ಇನ್ನು "ರೇಣುಕಾಸ್ವಾಮಿ ಹತ್ಯೆ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಈ ಕೃತ್ಯವನ್ನು ಯಾರೇ ಮಾಡಿದರೂ ಅಂತಹವರ ವಿರುದ್ಧ ಕಠಿಣ ಶಿಕ್ಷೆಯಾಗಲಿ ಎಂದು ಎಂದು ರವಿಚೇತನ್ ಹೇಳಿದ್ದಾರೆ.
ಮತ್ತೊಂದು ಸಂಕಷ್ಟ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿರುವ ನಟ ದರ್ಶನ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿಗೂ ಈ ಸಂಕಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಎ2 ಆರೋಪಿಯಾದರೆ, ಇನ್ನು ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ಆದರೆ, ಮತ್ತೊಂದು ಪ್ರಕರಣದಲ್ಲಿ ಮೂಲಗಳ ಪ್ರಕಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಎ1 ಆರೋಪಿಯಾಗಿದ್ದು, ದರ್ಶನ್ ಎ3 ಆರೋಪಿಯಾಗಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ದರ್ಶನ್‌ಗೆ ಸಂಬಂಧಿಸಿದ ಒಂದೊಂದೇ ಪ್ರಕರಣಗಳು ಬಟಾ ಬಯಲಾಗುತ್ತಿವೆ. ದರ್ಶನ್ ಅವರು ಮೈಸೂರಿನ ಬಳಿಯಿರುವ ತಮ್ಮ ತೋಟದ ಮನೆಯಲ್ಲಿ ಕಾನೂನುಬಾಹಿರವಾಗಿ ವಿಶಿಷ್ಟ ಜಾತಿಯ ಬಾರ್ ಹೆಡೆಡ್ ಗೂಸ್ ಬಾತುಕೋಳಿಯನ್ನು ಸಾಕಿದ್ದು, ಈ ಪಕ್ಷಿಯನ್ನು ವಶಕ್ಕೆ ಪಡದಿದ್ದ ಅರಣ್ಯ ಇಲಾಖೆ ಎಫ್‌ಐಆರ್ ದಾಖಲಿಸಿ, ದರ್ಶನ್ ಸೇರಿದಂತೆ ಸಂಬಂಧಪಟ್ಟವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.
ಹೀಗೆ ಅನೇಕ ಬಾರಿ ನೋಟಿಸ್ ನೀಡಿದರೂ ಕೂಡ ದರ್ಶನ್ ವಿಚಾರಣೆಗೆ ಹಾಜರಾಗದಿದ್ದಕ್ಕೆ, ಇದೀಗ ದರ್ಶನ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ಪ್ರಕರಣದಲ್ಲಿ ವಿಜಯಲಕ್ಷ್ಮಿ ಯಾಕೆ ಸಿಲುಕಿಕೊಂಡರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೈಸೂರಿನ ತಿ.ನರಸೀಪುರ ಬಳಿಯಿರುವ ಫಾರ್ಮ್ ಹೌಸ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರಿನಲ್ಲಿರುವ ಹಿನ್ನೆಲೆ ಅವರನ್ನು ಈ ಪ್ರಕರಣದಲ್ಲಿ ಎ1 ಆರೋಪಿಯನ್ನಾಗಿಸಲಾಗಿದೆ. ಅಲ್ಲದೆ, ಫಾರ್ಮ್‌ಹೌನ್‌ನ ಮ್ಯಾನೇಜರ್ ಆಗಿರುವ ನಾಗರಾಜ್ ಅವರನ್ನು ಎ2 ಆರೋಪಿ, ದರ್ಶನ್ ಅವರನ್ನು ಎ3 ಆರೋಪಿಯನ್ನಾಗಿ ಮಾಡಲಾಗಿದೆ.
ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅರಣ್ಯ ಇಲಾಖೆ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಚಾರ್ಜ್‌ಶೀಟ್ ಸಲ್ಲಿಕೆ ಮಾಡಲು ಮುಂದಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದರಿಂದ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಅವರ ಮೇಲಿದ್ದ ಇನ್ನುಳಿದ ಪ್ರಕರಣಗಳು ಒಂದೊಂದೇ ರೀ ಓಪನ್ ಆಗುತ್ತಲಿದ್ದು, ಈ ಮೂಲಕ ದಿನದಿಂದ ದಿನಕ್ಕೆ ದರ್ಶನ್‌ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತಿವೆ.












Click it and Unblock the Notifications