ಬೆಂಗಳೂರು ಉದ್ಯಮಿಗಳಿಗೆ ಇಷ್ಟವಾಗುವುದಕ್ಕೆ ಇದೇ ಪ್ರಮುಖ ಕಾರಣವಂತೆ.!; ಇಲ್ಲಿದೆ ಮಾಹಿತಿ
ಬೆಂಗಳೂರು, ನವೆಂಬರ್, 23: ರಾಜ್ಯ ರಾಜಧಾನಿ ಬೆಂಗಳೂರು ಟೆಕ್ ಹಬ್ ಅಂತಲೇ ಹೆಸರುವಾಸಿಯಾಗಿದೆ. ನಗರದತ್ತ ಹೆಚ್ಚೆಚ್ಚು ಉದ್ಯಮಿಗಳು ಮುಖ ಮಾಡುತ್ತಲೇ ಇದ್ದಾರೆ. ಇದಕ್ಕೆ ಪ್ರಮುಖ ಕಾರಣಗಳು ಕೂಡ ಇವೆ. ಸಕ್ಕರೆ ಇದ್ದಲ್ಲಿ ಇರುವೆ ಇರುತ್ತವೆಯೋ ಅದೇ ರೀತಿ ಬೆಂಗಳೂರಿನಲ್ಲಿ ಉದ್ಯಮಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾದರೆ ಇದಕ್ಕೆ ಪ್ರಮುಖ ಕಾರಣ ಏನೆಂದು ಇಲ್ಲಿ ತಿಳಿಯಿರಿ.
ಬೆಂಗಳೂರು ಕಳೆದ 10 ವರ್ಷಗಳ ಅವಧಿಯಲ್ಲಿ ಟೆಕ್ ಹಬ್ ಆಗಿ ರೂಪಾಂತರ ಆಗುವ ಮೂಲಕ ಉದ್ಯಮಿಗಳ ನೆಚ್ಚಿನ ತಾಣವಾಗಿದೆ. ಭಾರತದದಲ್ಲಿ ನವದೆಹಲಿ ಮತ್ತು ಮುಂಬೈ ಕೂಡ ಟೆಕ್ ಹಬ್‌ಗಳಾಗಿವೆ. ಇದೇ ಸಾಲಿಗೆ ಬೆಂಗಳೂರು ಕೂಡ ಸೇರ್ಪಡೆಯಾಗಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಕ್ಯೆ ಏರಿಕೆಯಾಗುತ್ತಲೇ ಇದೆ. ಜೊತೆಗೆ ದೊಡ್ಡ ದೊಡ್ಡ ಕಂಪನಿಗಳು ಕೂಡ ಇಲ್ಲಿ ತಲೆ ಎತ್ತುತ್ತಿದ್ದು, ದೇಶ, ವಿದೇಶಗಳ ಉದ್ಯಮಿಗಳು ಇಲ್ಲಿಯೇ ನೆಲೆಯೂರುತ್ತಿದ್ದಾರೆ. ನಗರ ಆರ್ಥಿಕ ಬೆಳವಣಿಗೆ, ಜೀವನಶೈಲಿಯ ಆಕರ್ಷಣೆ ಮತ್ತು ಜಾಗತಿಕ ಪ್ರಭಾವದ ಸ್ಪೂರ್ತಿದಾಯಕತೆಯನ್ನಯ ಒದಗಿಸುತ್ತಿದೆ.
* ದೇಶದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಂಗಳೂರು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. 2012 ಮತ್ತು 2023ರ ನಡುವೆ, 27,000 ಹೊಸ ಕಂಪನಿಗಳನ್ನು ನೋಂದಾಯಿಸಿಕೊಂಡಿದೆ. ಈ ವಿಷಯದಲ್ಲಿ ಮುಂಬೈ ಮತ್ತು ನದೆಹಲಿಯ ಬಳಿಕ ಬೆಂಗಳೂರು ಮೂರನೇ ಸ್ಥಾನ ಅಲಂಕರಿಸಿದೆ. ಇದು 80 ಮಿಲಿಯನ್ ಚದರ ಅಡಿ ಗ್ರೇಡ್ ಎ ಕಚೇರಿ ಸ್ಥಳವನ್ನು ಹೊಂದಿದ್ದು, ಆ ಮೂಲಕ 8,00,000 ಉದ್ಯೋಗಗಳನ್ನು ಹೊಂದಿದೆ.
* ಕಳೆದ 10 ವರ್ಷಗಳ ಅವಧಿಯಲ್ಲಿ ವರ್ಷಕ್ಕೆ ಸರಾಸರಿ 1,400 ಹೊಸ ನವೋದ್ಯಮಗಳಿಗೆ ಬೆಂಗಳೂರು ನೆಲೆಯಾಗಿದೆ. ಅಲ್ಲದೆ, ಅವುಗಳಿಗೆ ಬೇಕಾದ ಪರಿಸರ, ಆರಂಭಿಕ ಬಂಡವಾಳ ಒದಗಿಸುವಲ್ಲೂ ಮುಂಚೂಣಿಯಲ್ಲಿದೆ.
* ಜೀವನಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಒದಗಿಸುವುದರೊಂದಿಗೆ ಬೆಂಗಳೂರು ಮಹಾನಗರ ಭವಿಷ್ಯದ ನಗರ ಎಂಬಂತೆ ರೂಪಿತವಾಗಿದೆ. ಇಲ್ಲಿನ ವಾತಾವರದ ವಿಚಾರಕ್ಕೆ ಬಂದರೆ, ದೇಶದಲ್ಲಿ ಇದು ಅತ್ಯುತ್ತಮ ಅನುಕೂಲಕರ ವಾತಾವರಣವಾಗಿದೆ. ಮುಂಬೈ, ನವದೆಹಲಿ ನಗರಗಳಿಗೆ ಹೋಲಿಕೆ ಮಾಡಿದ್ರೆ, ಇಲ್ಲಿ ಖರ್ಚು ವೆಚ್ಚ ಕಡಿಮೆ. ಈ ಕಾರಣಕ್ಕೆ ಹೆಚ್ಚೆಚ್ಚು ಉದ್ಯಮಗಳು ಇಲ್ಲಿದೆ ಬಂದು ನೆಲೆಯೂರುತ್ತಾರೆ. ಅಲ್ಲದೆ, ದೇಶದಲ್ಲೇ ಬೆಂಗಳೂರಿನಲ್ಲಿ ಶೇಕಡ 25ರಷ್ಟು ಪಾಸ್‌ಪೋರ್ಟ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
* ಜಗತ್ತಿನ ವಿವಿಧ ರಾಷ್ಟ್ರಗಳ ನಗರಗಳೊಂದಿಗೆ ಬೆಂಗಳೂರಿನ ಸಂಪರ್ಕ ಹೆಚ್ಚಿದೆ. 2017-18ಕ್ಕೆ ಹೋಲಿಕೆ ಮಾಡಿದರೆ, 2022-23ರ ವೇಳೆಗೆ ಹೆಚ್ಚು ಸಂಪರ್ಕ ಸಾಧಿಸಿದೆ. 27 ದೇಶೀಯ ವಿಮಾನ ಮಾರ್ಗ ಸೇರ್ಪಡೆ ಆಗಿದೆ. ಇದು ದೇಶದ ಯಾವುದೆ ನಗರ ಸಂಪರ್ಕಕ್ಕೆ ಹೋಲಿಸಿದರೆ ಹೆಚ್ಚು. ಅಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಟರ್ಮಿನಲ್‌ಗಳು ಸೇರ್ಪಡೆ ಆಗಿವೆ. ಇದರಿಂದ ಹೊರ ರಾಜ್ಯ, ವಿದೇಶಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.
* ಬೆಂಗಳೂರಿನ ಗ್ರಾಹಕ ಮಾರುಕಟ್ಟೆ ದಿನದಿಂದ ದಿನಕಗಕೆ ಬೆಳವಣಿಗೆ ಆಗುತ್ತಲೇ ಇದೆ. ನಾಲ್ಕು ವರ್ಷಗಳಲ್ಲಿ ಬ್ಯಾಂಕ್ ಉಳಿತಾಯ ಠೇವಣಿಗಳು ವಾರ್ಷಿಕ ಸರಾಸರಿ 15.2 ಶೇಕಡ ದರದಲ್ಲಿ ಬೆಳೆದಿದ್ದು, 2023ರ ಮಧ್ಯದ ವೇಳೆಗೆ 2.69 ಲಕ್ಷ ಕೋಟಿ ರೂಪಾಯಿ ತಲುಪಿದೆ. ಅಲ್ಲದೆ, ನಗರವು ಡಿಜಿಟಲ್ ಪಾವತಿಗಳಲ್ಲಿ ಮುಂದಿದೆ. 2023ರ ಕೊನೇ ತ್ರೈಮಾಸಿಕದಲ್ಲಿ 143 ಕೋಟಿ ಫೋನ್ ಪೇ ವಹಿವಾಟುಗಳನ್ನು ಒಳಗೊಂಡಿದೆ ಎನ್ನುವ ಮಾಹಿತಿ ಇದೆ.
* ಬೆಂಗಳೂರು ಸುಸ್ಥಿರ ನಾಯಕತ್ವದ ಪ್ರವೃತ್ತಿಯನ್ನು ಹೊಂದಿದ್ದು, 2023ರಲ್ಲಿ ಬೆಂಗಳೂರು 77,860 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೋಂದಾಯಿಸಿದ್ದು, ಇದು ದೇಶದಲ್ಲೇ ಅತ್ಯಧಿಕವಾಗಿದೆ. 6,811 ವಾಹನಗಳೊಂದಿಗೆ ಎಲೆಕ್ಟ್ರಿಕ್ ಕಾರ್ ನೋಂದಣಿಯಲ್ಲಿ ಎರಡನೇ ಸ್ಥಾನದಲ್ಲಿದೆ.
* ಬೆಂಗಳೂರಿನ ಬೆಳವಣಿಗೆ ಗಮನಾರ್ಹ ಆಗಿದ್ದರೂ, ಸಂಚಾರ ದಟ್ಟಣೆ ವಿಷಾದವಾಗಿ ಉಳಿದುಕೊಂಡಿದೆ. ದೇಶದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತ ಸಂಭವಿಸುವ ಎರಡನೇ ನಗರವಾಗಿ ಬೆಂಗಳೂರು ಮುಂಚೂಣಿಯಲ್ಲಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಅಪಘಾತದಿಂದ ಸಾವು, ನೋವುಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ.
* ಬೆಂಗಳೂರು ಮೂಲಸೌಕರ್ಯ ಯೋಜನೆ ಮತ್ತು ಅದರ ಅನುಷ್ಠಾನದಲ್ಲೂ ಹಿಂದುಳಿದಿದೆ. ಬಜೆಟ್ ಗಾತ್ರದಲ್ಲಿ ಬಿಬಿಎಂಪಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಅದರೂ ಇತರೆ ನಗರಗಳಿಗೆ ಹೋಲಿಕೆ ಮಾಡಿದರೆ, ನಗರದಲ್ಲಿ ತಲಾ ಆದಾಯ ಅತೀ ಕಡಿಮೆಯಿದೆ. ಮೂಲ ಸೌಕರ್ಯಗಳಿಗೆ ಮಾಡಬೇಕಾದಷ್ಟು ನಿಖರ ಯೋಜನೆ ಮತ್ತು ಹೂಡಿಕೆ ಮಾಡದಿರುವ ಕೊರತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
* ನವದೆಹಲಿ ಮತ್ತು ಮುಂಬೈಗಿಂತ ಭಿನ್ನವಾಗಿ ಬೆಂಗಳೂರು ಮಹಾನಗರ ಪವರ್ ಹೌಸ್‌ನಂತೆ ಹೊಸತನ ಮತ್ತು ಅವಕಾಶಗಳೊಂದಿಗೆ ಮುನ್ನಡೆಯುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಆದರೂ ಈ ಬೆಳವಣಿಗೆಯನ್ನು ಉಳಿಸಿಕೊಳ್ಳಲು ಅದರ ನಗರ ಸವಾಲುಗಳನ್ನು ಅಂದರೆ ಮೂಲ ಸೌಕರ್ಯ ಇತ್ಯಾದಿ ಸವಾಲುಗಳನ್ನು ಎದುರಿಸುವ ಅಗತ್ಯ ಇದೆ.
* ಯಾವುದೇ ಭಾಷಿಕರಿದ್ದರೂ ಅವರೆಲ್ಲರನ್ನೂ ತನ್ನವರಂತೆ ಬರಮಾಡಿಕೊಂಡು ಹೊಸ ಅವಕಾಶಗಳನ್ನು ಒದಗಿಸುವ ಮಹಾನಗರ ಬೆಂಗಳೂರು ಆಗಿದೆ. ಬೆಂಗಳೂರು ಹೊಂದುತ್ತಿರುವ ಆರ್ಥಿಕತೆ, ಸಾಟಿಯಿಲ್ಲದ ನವೋದ್ಯಮ ಪರಿಸರ ವ್ಯವಸ್ಥೆ ಹೊಂದಿರುವ ನಗರವಾಗಿದೆ. ಆದ್ದರಿಂದ ಈ ನಗರ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದನ್ನು ಗಮನಿಸಿಯೇ ಹೆಚ್ಚೆಚ್ಚು ಉದ್ಯಮಿಗಳನ್ನು ಇಲ್ಲಿಗೆ ಬಂದು ನೆಲೆಯೂರುತ್ತಿದ್ದಾರೆ.
-
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Rama Navami 2026: ಶ್ರೀರಾಮನವಮಿ ದಿನಾಂಕ, ಮುಹೂರ್ತ, ಮಹತ್ವ, ಪೂಜಾ ವಿಧಾನ ಸೇರಿ ಸಂಪೂರ್ಣ ವಿವರ -
ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion












Click it and Unblock the Notifications