Tumakuru Metro: ತುಮಕೂರಿಗೆ ಮೆಟ್ರೋ ವಿಸ್ತರಣೆಯಾದ್ರೆ ಏನೆಲ್ಲಾ ಪ್ರಯೋಜನಗಳಿವೆ?

Tumakuru Metro: ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಈ ಸಾರಿಗೆಯನ್ನೇ ಅವಲಂಬನೆ ಮಾಡಿದ್ದಾರೆ. ಇದರಲ್ಲಿ ಪ್ರತಿನಿತ್ಯ ಏನಿಲ್ಲ ಅಂದರೂ ಲಕ್ಷಾಂತರ ಮಂದಿ ಪ್ರಯಾಣ ಮಾಡುತ್ತಾರೆ. ಇನ್ನು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮಟ್ರೋ ವಿಸ್ತರಣೆಯಾಗುತ್ತಿದ್ದು, ಈ ನಡುವೆ ಬಜೆಟ್‌ ವೇಳೆ ಪ್ರಸ್ತಾಪಿಸಿದ್ದ ವಿಚಾರವೊಂದು ಇದೀಗ ಮುನ್ನೆಲೆಗೆ ಬಂದಿದೆ.

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ವಿಸ್ತರಣೆ ಆಗಬೇಕೆನ್ನುವುದು ಇಲ್ಲಿ ಸುತ್ತಮುತ್ತಲಿನ ಜನರ ಕನಸಾಗಿದೆ. ಬಜೆಟ್‌ ಮಂಡನೆ ವೇಳೆ ಪ್ರಸ್ತಾಪಿಸಿದಂತೆ ಈ ಮಾರ್ಗದಲ್ಲಿ ಮೆಟ್ರೋ ಆದ್ರೆ ಏನೆಲ್ಲ ಪ್ರಯೋಜನೆಗಳಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

What are the benefits if namma metro extended to Tumakuru

ಈ ಹಿಂದೆ ಬಜೆಟ್‌ ಮಂಡನೆ ವೇಳೆ ತುಮಕೂರುವರೆಗೂ ಮೆಟ್ರೋ ವಿಸ್ತರಣೆ ಮಾಡುವುದಾಗಿ ಸರ್ಕಾರ ಪ್ರಸ್ತಾಪ ಮಾಡಿತ್ತು. ಇದೀಗ ನಮ್ಮ ಮೆಟ್ರೋ ಬೆಂಗಳೂರಿನಿಂದ ತುಮಕೂರಿನವರೆಗೂ ವಿಸ್ತರಣೆಯಾಗಬೇಕು ಎನ್ನುವುದು ಸುತ್ತಮುತ್ತಲಿನ ಜಿಲ್ಲೆಗಳ ಜನರ ಆಶಯವಾಗಿದೆ. ಇದಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಫೆಬ್ರವರಿಯಲ್ಲಿ ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿಯು ರಾಜ್ಯದ ಸರ್ಕಾರದ ಕೈ ಸೇರಲಿದೆ ಎಂದು ಹೇಳಲಾಗುತ್ತಿದೆ.

ನಮ್ಮ ಮೆಟ್ರೋ ಹಸಿರು ಮಾರ್ಗ ಇದೀಗ ಬೆಂಗಳೂರಿನ ದಕ್ಷಿಣದಿಂದ ಉತ್ತರಕ್ಕೆ 33 ಕಿಲೋ ಮೀಟರ್‌ ವಿಸ್ತರಿಸಿದೆ. ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೂ ಮೆಟ್ರೋ ರೈಲು ಕಾರ್ಯಾಚರಣೆ ನಡೆಯುತ್ತಿದೆ. ಇದೇ ಹಸಿರು ಮಾರ್ಗವನ್ನೇ ಮಾದಾವರ-ತುಮಕೂರಿಗೆ ವಿಸ್ತರಿಸಬೇಕೆಂದು ಎಂದು ಸರ್ಕಾರ ನಿರ್ಧರಿಸಿ ಈ ಬಗ್ಗೆ 2024-25 ಬಜೆಟ್‌ನಲ್ಲಿಯೂ ಘೋಷಿಸಿದೆ.

ಈ ಹಿಂದೆಯಷ್ಟೇ ಮಾದಾವರದಿಂದ ತುಮಕೂರಿನ ಮಾರ್ಗ ನಿರ್ಮಾಣ ಕಾರ್ಯ ಸಾಧ್ಯತಾ ವರದಿ ನೀಡಲು ಖಾಸಗಿ ಸಂಸ್ಥೆಗೆ ಬಿಎಂಆರ್‌ಸಿಎಲ್‌ ಟೆಂಡರ್‌ ಕೊಟ್ಟಿತ್ತು. ಆ ವರದಿ ಸಿದ್ಧ ಆಗುತ್ತಿದ್ದು, 2025ರ ಫೆಬ್ರವರಿ ಅಂದರೆ ಮುಂದಿನ ತಿಂಗಳ ಅಂತ್ಯದೊಳಗೆ ಸರ್ಕಾರದ ಕೈ ಸೇರಲಿದೆ. ಬಳಿಕ ಸರ್ಕಾರ ಯೋಜನೆಗೆ ಅನುಮತಿ ನೀಡಿ, ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದುಕೊಂಡರೆ ಮಾತ್ರ ಮಾರ್ಗ ನಿರ್ಮಾಣದ ಬಗ್ಗೆ ಅಂತಿಮ ಆಗಲಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ನಮ್ಮ ಮೆಟ್ರೋ ಹಳದಿ, ಗುಲಾಬಿ, ನೀಲಿ ಮಾರ್ಗ ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಇವುಗಳು ಇನ್ನೂ ಪೂರ್ಣ ಆಗಬೇಕಿದೆ. ಕೆಂಪು, ಕಿತ್ತಳೆ ಮಾರ್ಗಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು, ಈ ಯೋಜನೆ ಮಾರ್ಗ ಸಮೀಕ್ಷೆ ಅಂತಿಮ ಹಂತದಲ್ಲಿವೆ. ಅವುಗಳ ಕಾಮಗಾರಿ ನಡೆಯಬೇಕಿದೆ. ಬಳಿಕ ಮಾದಾವರ-ತುಮಕೂರು ಮಾರ್ಗದ ಕಾಮಗಾರಿ ಸರಿಸುಮಾರು 2032ರ ವೇಳೆಗೆ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಮಾದಾವಾರ-ತುಮಕೂರಿಗೆ 52.41 ಕಿಲೋ ಮೀಟರ್‌ ದೂರ ಇದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲೇ ಮೆಟ್ರೋ ಮಾರ್ಗವನ್ನು ನಿರ್ಮಾಣ ಮಾಡಲಿದ್ದು, ಒಟ್ಟು 19 ಎತ್ತರಿಸಿದ ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ ಮಾರ್ಗವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಮಾರ್ಗಗಳ ನಿಲ್ದಾಣಗಳ ವಿವರ: ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಬಸ್‌ ನಿಲ್ದಾಣ, ನೆಲಮಂಗಲ ರಾಷ್ಟರೀಯ ಹೆದ್ದಾರಿ, ಬೂದಿಹಾಳ, ಟಿ.ಬೇಗೂರು, ಕುಲುವನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯ್ಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ, ಕ್ಯಾತ್ಸಂದ್ರ, ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು ಬಸ್ ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.

ಏನೆಲ್ಲ ಪ್ರಯೋಜನಗಳಿವೆ?: ಮಾದವರ-ಬೆಂಗಳೂರು ನಡುವೆ ಮೆಟ್ರೋ ನಿರ್ಮಾಣ ಆದರೆ, ಬೆಂಗಳೂರು ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ತಗ್ಗಲಿದೆ. ತುಮಕೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನ ಸರಾಗವಾಗಿ ಬೆಂಗಳೂರಿಗೆ ಆಗಮಿಸಲು ಅನುಕೂಲವಾಗಲಿದೆ. ಉತ್ತರ ಕರ್ನಾಟಕ ಅಥವಾ ಕರಾವಳಿ ಭಾಗದಿಂದ ಬೆಂಗಳೂರಿಗೆ ಆಗಮಿಸುವವರು ವೇಗವಾಗಿ ಮೆಟ್ರೋ ಮೂಲಕ ಬೆಂಗಳೂರಿಗೆ ಬರಬಹುದಾಗಿದೆ.

ಅಲ್ಲದೆ, ತುಮಕೂರು ನಗರ ಬೆಂಗಳೂರಿಗೆ ಸಮವಾಗಿ ಅಭಿವೃದ್ಧಿಯಾಗಲಿದೆ. ಈ ಮೂಲಕ ಮೆಟ್ರೋ ಮಾರ್ಗದ ಸುತ್ತ ಕಂಪನಿಗಳು ಹೆಚ್ಚಳದಿಂದ ತುಂಬಾ ಜನರಿಗೆ ಉದ್ಯೋಗ ಸಿಕ್ಕಂತಾಗಲಿದೆ. ಇನ್ನು ಮಾದಾವರ - ತುಮಕೂರು ಮಾರ್ಗ ಮೆಟ್ರೋ ಮೊದಲಿಗೆ ಮಾದಾವರ-ನೆಲಮಂಗಲ ನಡುವೆ 11 ಕಿಲೋ ಮೀಟರ್‌ ಆರಂಭವಾಗುವ ಸಾಧ್ಯತೆಯಿದೆ. ಬಳಿಕ ನೆಲಮಂಗಲ- ತುಮಕೂರು 40 ಕಿಲೋ ಮೀಟರ್‌ ಮಾರ್ಗ ಯೋಜನೆಯನ್ನು ಬಿಎಂಆರ್‌ಸಿಎಲ್‌ ಕೈಗೆತ್ತಿಗೊಳ್ಳಲಿದೆ ಎನ್ನುವ ಮಾಹಿತಿ ಇದೆ.

ಅಷ್ಟೇ ಅಲ್ಲದೆ ಈ ಮಾರ್ಗದಲ್ಲಿ ಮೆಟ್ರೋ ವಿಸ್ತರಣೆಯಿಂದ ಭೂಮಿಗೆ ಚಿನ್ನದ ಬೆಲೆ ಬರುವುದರಲ್ಲಿ ಎರಡು ಮಾತಿಲ್ಲ. ಈಗಲೇ ಈ ಭಾಗದಲ್ಲಿ ಕೊಂಡುಕೊಳ್ಳಲಾರದಷ್ಟು ಬಾಡಿಗೆಗಳು ಇವೆ. ಒಂದು ವೇಳೆ ಮೆಟ್ರೋ ಆದರೆ ಈ ಭಾಗದ ಜನ ಕೋಟ್ಯಾಧಿಪತಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+