ಬೆಂಗಳೂರು ರೈಲು ನಿಲ್ದಾಣದ ವೆಬ್‌ಸೈಟ್, ಅಪ್ಲಿಕೇಶನ್ ನೋಡಿ

ಬೆಂಗಳೂರು, ಜುಲೈ 24 : ಬೆಂಗಳೂರು ನಗರ ಕೇಂದ್ರ ರೈಲು ನಿಲ್ದಾಣದ ನೂತನ ವೆಬ್‌ಸೈಟ್‌ ಮತ್ತು ಮೊಬೈಲ್ ಅಪ್ಲಿಕೇಶನ್ ಬಿಡುಗಡೆಗೊಂಡಿದೆ. ನಿಲ್ದಾಣದಲ್ಲಿ ಲಭ್ಯವಿರುವ ಪ್ರತಿ ಸೌಲಭ್ಯಗಳನ್ನು ಈ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಪ್ರಯಾಣಿಕರಿಗೆ ನೀಡಲಿವೆ.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಸುನಂದಾ ಅರುಳ್‌ ಅವರು, ರೈಲು ನಿಲ್ದಾಣದಲ್ಲಿನ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಹಾಯ ಕೇಂದ್ರ ಮತ್ತು ವೆಬ್‌ ಸೈಟ್, ಮೊಬೈಲ್ ಅಪ್ಲಿಕೇಶನ್‌ಗೆ ಚಾಲನೆ ನೀಡಿದರು. [ಫೇಸ್ ಬುಕ್, ಟ್ವಿಟರ್ ಗೆ ಬಂತು ನೈಋತ್ಯ ರೈಲ್ವೆ]

 railway station

ಹೊಸ ಅಪ್ಲಿಕೇಶನ್ : RailNav ಎಂಬ ಮೊಬೈಲ್‌ ಆ್ಯಪ್ಲಿಕೇಶನ್ ಪ್ರಯಾಣಿಕರಿಗೆ ರೈಲು ನಿಲ್ದಾಣದ ಸಮಗ್ರ ಚಿತ್ರಣವನ್ನು ನೀಡಲಿದೆ. ಪ್ರಯಾಣಿಕರು ಇದರ ಸಹಾಯದಿಂದ ನಿಲ್ದಾಣದಲ್ಲಿನ ಸೇವೆಗಳನ್ನು ಬಳಸಿಕೊಳ್ಳಲು ಸಹಾಯಕವಾಗಲಿದೆ. [ಮೈಸೂರು-ವಾರಣಾಸಿ-ಮೈಸೂರು ರೈಲು ವೇಳಾಪಟ್ಟಿ]

ಕೇಂದ್ರ ರೈಲು ನಿಲ್ದಾಣದಲ್ಲಿರುವ ಟಿಕೆಟ್‌ ಕೌಂಟರ್‌, ತುರ್ತು ಸೇವೆ, ಹೊಟೇಲ್‌, ವಿಶ್ರಾಂತಿ ಕೊಠಡಿ, ಶೌಚಾಲಯ, ಸೇರಿದಂತೆ ವಿವಿಧ ಸ್ಥಳಗಳಿಗೆ ಹೋಗುವ ಮಾರ್ಗವನ್ನು ಈ ಅಪ್ಲಿಕೇಶನ್ ಪ್ರಯಾಣಿಕರಿಗೆ ನೀಡಲಿದೆ.

ವೆಬ್‌ಸೈಟ್‌ಗೆ ಚಾಲನೆ : www.bengalururailwaystation.com ಹೆಸರಿನ ವೆಬ್‌ಸೈಟ್‌ ಅನ್ನು ಆರಂಭಿಸಲಾಗಿದೆ. ನಗರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಎಲ್ಲ ಬಗೆಯ ಸೇವೆ ಮತ್ತು ಸೌಲಭ್ಯಗಳ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.

ಆನ್‌ಲೈನ್‌ ಮೂಲಕ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ, ವಿಶ್ರಾಂತಿ ಕೊಠಡಿಗಳ ಮಾಹಿತಿ, ಪಿಎನ್‌ಆರ್‌ ಸ್ಟೇಟಸ್, ನಗರದ ಪ್ರವಾಸಿ ತಾಣಗಳ ಮಾಹಿತಿ, ನಿಲ್ದಾಣದಲ್ಲಿ ಸಂಚರಿಸುವ ರೈಲುಗಳ ಕ್ಷಣ ಕ್ಷಣದ ವೇಳಾಪಟ್ಟಿ, ಸಹಾಯವಾಣಿ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ವೆಬ್‌ಸೈಟ್‌ನಲ್ಲಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+