Get Updates
Get notified of breaking news, exclusive insights, and must-see stories!

Bengaluru Rains : ಮಳೆಯಿಂದ ಹಲವು ಪ್ರದೇಶ ಜಲಾವೃತ, ವಿದ್ಯುತ್ ಕಡಿತ, ಟ್ರಾಫಿಕ್ ಜಾಮ್- ಮತ್ತೆ ಸಾರ್ವಜನಿಕರ ಆಕ್ರೋಶ

ಬೆಂಗಳೂರು ನಗರದಲ್ಲಿ ಮೊದಲ ಬಾರಿಗೆ ( ಈ ವರ್ಷದಲ್ಲಿ ) ಭಾರಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ, ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಬೆಂಗಳೂರು, ಮಾರ್ಚ್ 18: ರಾಜಧಾನಿ ಬೆಂಗಳೂರಿನ ಹಲವೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದೆ. ಕೆಲವೆಡೆ ಶನಿವಾರ ಬೆಳಗಿನ ಜಾವದವರೆಗೂ ಮುಂದುವರಿದಿದೆ. ದಕ್ಷಿಣ ತಮಿಳುನಾಡು-ಕೊಂಕಣ ಕರಾವಳಿ ಪ್ರದೇಶದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇದು ಭಾನುವಾರದವರೆಗೆ ಮುಂದುವರೆಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ನಗರದಲ್ಲಿ ಮೊದಲ ಬಾರಿಗೆ ( ಈ ವರ್ಷದಲ್ಲಿ ) ಭಾರಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ಸಂಚಾರ ದಟ್ಟಣೆ, ನೀರು ಮತ್ತು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru: Waterlogging, power cut, traffic jams hit city- furious residents react

ನಗರದ ಹಲವಾರು ನಿವಾಸಿಗಳು ತಮ್ಮ ಕೋಪವನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಟ್ವಿಟರ್‌ ಮೊರೆ ಹೋಗಿದ್ದಾರೆ. ವಿದ್ಯುತ್ ಅಧಿಕಾರಿಗಳು ತಮ್ಮ ಸಂಕಷ್ಟದ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

'ಬಿಟಿಎಂ 1 ನೇ ಹಂತದಲ್ಲಿ ಇಷ್ಟೊಂದು ಸಣ್ಣ ಮಳೆಗೂ ಗಂಟೆಗಟ್ಟಲೆ ವಿದ್ಯುತ್ ಸ್ಥಗಿತಗೊಂಡಿದೆ. ನಾನು ಹಳ್ಳಿಯಲ್ಲಿ ವಾಸಿಸುತ್ತಿದ್ದೆ. ಈಗ ಬೆಂಗಳೂರಿಗಿಂತ ಹಳ್ಳಿಯಲ್ಲಿ ಉತ್ತಮ ವಿದ್ಯುತ್ ಇದೆ ಎಂದು ತೋರುತ್ತದೆ. ಕೆಟ್ಟ ವಿದ್ಯುತ್ ಪೂರೈಕೆದಾರರ ಹೆಸರು ನಮ್ಮ ಬೆಸ್ಕಾಂ' ಎಂದು ನಗರ ನಿವಾಸಿ ಅನೀಶ್ ಬರೆದು ಕೊಂಡಿದ್ದಾರೆ.

ಮಳೆ ನಿಂತಿದ್ದರೂ ನಗರದ ಹಲವು ಪ್ರದೇಶಗಳಲ್ಲಿ ಗಂಟೆಗಟ್ಟಲೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹಲವಾರು ನೆಟ್ಟಿಗರು ವಿದ್ಯುತ್ ವೈಫಲ್ಯ ಮತ್ತು ನೀರಿನ ವ್ಯತ್ಯಯದ ಬಗ್ಗೆ ಅಧಿಕಾರಿಗಳನ್ನು ತೀವ್ರವಾಗಿ ಟೀಕಿಸಿದ್ದಾರೆ.

ಮಳೆ ಸುರಿದ ಕೆಲವೇ ಗಂಟೆಗಳಲ್ಲಿ ನಗರದ ಹಲವು ರಸ್ತೆಗಳು ಮುಳುಗಡೆಯಾಗಿ ಸಂಚಾರಕ್ಕೆ ತೊಂದರೆಯಾಯಿತು. ಬೆಳ್ಳಂದೂರು, ಕಾಡುಬೀಸನಹಳ್ಳಿ, ಹೊರವರ್ತುಲ ರಸ್ತೆ ಸೇರಿದಂತೆ ಹಲವೆಡೆ ಜಲಾವೃತವಾಗಿತ್ತು.

Bengaluru: Waterlogging, power cut, traffic jams hit city- furious residents react

ಮುಂಗಾರು ಮಳೆಯ ಅನಾಹುತದಿಂದ ನಮ್ಮ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂಬುದಕ್ಕೆ ಇದು ಸಾಕ್ಷಿ. ಬೆಂಗಳೂರಿನ ಜನರು ಮೂಲಸೌಕರ್ಯಕ್ಕಾಗಿ ವ್ಯಯಿಸಿದ ಕೋಟ್ಯಂತರ ರೂಪಾಯಿಗಳಿಗೆ ಸರ್ಕಾರ ಉತ್ತರ ನೀಡಬೇಕು ಎಂದು ಮತ್ತೊಬ್ಬ ನಗರದ ನಿವಾಸಿ ಜಿತೇಶ್ ಎರಂಚೇರಿ ಅವರು ಜಲಾವೃತ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಅತಿವೃಷ್ಟಿಯಿಂದ ಮಳೆನೀರು ಚರಂಡಿ ಒತ್ತುವರಿ ತೆರವು ಮಾಡದ ಪೌರಾಡಳಿತ ಹಾಗೂ ರಾಜ್ಯ ಸರಕಾರ ತೀವ್ರ ಟೀಕೆಗೆ ಗುರಿಯಾಗಿತ್ತು. ಐಟಿ ಕೇಂದ್ರಗಳು ಸೇರಿದಂತೆ ನಗರದ ಹಲವೆಡೆ ಮಳೆಯಿಂದಾಗಿ ಜಲಾವೃತವಾಗಿತ್ತು.

ಭಾರತೀಯ ಹವಾಮಾನ ಇಲಾಖೆಯು ಶನಿವಾರ ಮತ್ತು ಭಾನುವಾರದಂದು ಪ್ರತ್ಯೇಕವಾಗಿ ಲಘು ಮಳೆಯಾಗುವ ಮುನ್ಸೂಚನೆ ನೀಡಿದೆ.

ಇದೇ ರೀತಿಯ ಅವಘಡ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಒಂದು ವಾರದ ನಂತರ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸುರಿದ ಸಣ್ಣ ಮಳೆಯ ನಂತರ ಜಲಾವೃತಗೊಂಡಿತು. ಇದು ಟ್ರಾಫಿಕ್ ಅಸ್ತವ್ಯಸ್ತತೆಗೆ ಕಾರಣವಾಯಿತು. ರಾಮನಗರ ಮತ್ತು ಬಿಡದಿ ನಡುವಿನ ಸಂಗಬಸವನ ದೊಡ್ಡಿ ಬಳಿಯ ಅಂಡರ್‌ಪಾಸ್ ಬಳಿ ಶನಿವಾರ ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅವ್ಯವಸ್ಥೆ ಉಂಟಾಗಿತ್ತು.

'ನಾವು ಚರಂಡಿಗಾಗಿ ಜಾಗವನ್ನು ಬಿಟ್ಟಿದ್ದೇವೆ. ಆದರೆ ಕೆಲವು ಗ್ರಾಮಸ್ಥರು ಚರಂಡಿಯನ್ನು ಮಣ್ಣಿನಿಂದ ಮುಚ್ಚಿದ್ದಾರೆ. ಇದು ಪ್ರವಾಹಕ್ಕೆ ಕಾರಣವಾಗಿದೆ. ನಾವು ಅದನ್ನು ತೆರವುಗೊಳಿಸುತ್ತಿದ್ದೇವೆ. ರಸ್ತೆ ಎಂದಿನಂತೆ ತೆರೆದಿರುತ್ತದೆ' ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಬಿ ಟಿ ಶ್ರೀಧರ್ 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ, ಭಾರೀ ಮಳೆಯ ನಂತರ ಇದೇ ಪ್ರದೇಶವು ಜಲಾವೃತವಾಗಿತ್ತು. ಈ ವರ್ಷದ ಜನವರಿಯಲ್ಲಿ ರಸ್ತೆಗೆ ಭೇಟಿ ನೀಡಿದ್ದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿದ್ದರು. ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+