ಸೆ.12, 13ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ
ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರಿನ ಕಾವೇರಿ 3ನೇ ಹಂತದಲ್ಲಿ ನೀರು ಪೂರೈಸಲಾಗುವ ಸ್ಥಳಗಳಲ್ಲಿ ದಿನಾಂಕ ಸೆಪ್ಟೆಂಬರ್ 12, 2021 ಮತ್ತು ಸೆಪ್ಟೆಂಬರ್ 13, 2021ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ತಿಳಿಸಿದೆ.
ಕಾವೇರಿ 3ನೇ ಹಂತದ ಪಂಪಿಂಗ್ ಸ್ಟೇಶನ್ಗೆ ಸಂಬಂಧಪಟ್ಟ ಲೈನ್ನಲ್ಲಿ ಲೀಕೇಜ್ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.
ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ?
ಗಾಂಧಿನಗರ, ಕುಮಾರಪಾರ್ಕ್ ಈಸ್ಟ್, ವಸಂತನಗರ, ಹೈ ಗ್ರೌಂಡ್ಸ್, ಸಂಪಂಗಿ ರಾಮನಗರ, ಸಿಕೆಸಿ ಗಾರ್ಡನ್, ಕೆ.ಎಸ್. ಗಾರ್ಡನ್, ಟೌನ್‌ಹಾಲ್, ಲಾಲ್‌ಬಾಗ್ ರಸ್ತೆಯ 1ರಿಂದ 4ನೇ ಕ್ರಾಸ್, ಲಾಲ್‌ಬಾಗ್ ರಸ್ತೆ, ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್, ಕಬ್ಬನ್ ಪೇಟೆ, ನಗರ್ತಪೇಟೆ, ಕುಂಬಾರಪೇಟೆ, ಕಾಟನ್ಪೇಟೆ, ಚಿಕ್ಕಪೇಟೆ, ಬಕ್ಷಿ ಗಾರ್ಡನ್, ಭಾರತಿ ನಗರ, ಸೇಂಟ್ ಜಾನ್ಸ್ ರೋಡ್, ಹೈನ್ಸ್ ರೋಡ್, ನಾರಾಯಣ ಪಿಳ್ಳೈ ಸ್ಟ್ರೀಟ್, ಸಂಗಮ್ ರೋಡ್, ಕಾಮರಾಜ್ ರೋಡ್, ವೀರ ಪಿಳ್ಳೈ ಸ್ಟರೀಟ್, ಇನ್ಫೆಂಟ್ರಿ ರೋಡ್, ಶಿವಾಜಿ ನಗರ, ಲಾವೆಲ್ಲೆ ರೋಡ್, ಫ್ರೇಜರ್ ಟೌನ್- ಬ್ಯಾಡರಹಳ್ಳಿ, ವಿಲಿಯಮ್ಸ್ ಟೌನ್, ಸಿಂಡ್ಲಿ ಕಾಲೋನಿ, ಎನ್.ಸಿ. ಕಾಲೋನಿಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಇದಲ್ಲದೆ ಕೋಲ್ಸ್ ರಸ್ತೆ, ಮಚಲಿಬೆಟ್ಟ, ಕಾಕ್ಸ್ ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ದೇವಿಸ್ ರಸ್ತೆ, ಕುಕ್ಸ್ ಟೌನ್, ಹಳೆಯ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ, ಮಾರುತಿ ನಗರ, ಮುಸ್ಲಿಂ ಕಾಲೊನಿ, ಕುಶಾಲ್ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ನಾಗವಾರ, ಸಮಾಧಾನ ನಗರ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ, ಚಾಮರಾಜ ಪೇಟೆ, ಬ್ಯಾಂಕ್ ಕಾಲೊನಿ, ಶ್ರೀನಿವಾಸ ನಗರ, ಗವಿಪುರ, ಹನುಮಂತ ನಗರ, ಗಿರಿನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಬಡಾವಣೆ, ಶ್ರೀನಗರ, ಬನಶಂಕರಿ ಮೊದಲನೇ ಹಂತ, ಯಶವಂತಪುರ, ಮಲ್ಲೇಶ್ವರ, ಕುಮಾರ ಪಾರ್ಕ್, ಜಯಮಹಲ್, ಶೇಷಾದ್ರಿಪುರಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.
ಇನ್ನು ನಂದಿ ದುರ್ಗ ರಸ್ತೆ, ಜೆ.ಸಿ. ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಬಿ.ಇ.ಎಲ್ ರಸ್ತೆ, ಸಂಜಯ್ ನಗರ, ಡಾಲರ್ಸ್ ಕಾಲೊನಿ, ಆರ್.ಎಂ.ವಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್ ಬೈರಸಂದ್ರ, ಗಂಗಾನಗರ, ಆರ್.ಟಿ. ನಗರ, ಮನೋರಾಯನಪಾಳ್ಯ, ಆನಂದನಗರ, ವಿ. ನಾಗೇನಹಳ್ಳಿ, ಸುಲ್ತಾನ್ ಪಾಳ್ಯ, ಶಾಂತಲಾ ನಗರ, ಅಶೋಕ ನಗರ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಎಚ್ಎಎಲ್ 2ನೇ ಹಂತದ ಭಾಗ, ದೂಪನಹಳ್ಳಿ, ಇಂದಿರಾನಗರ, ಕದಿರಯ್ಯನ ಪಾಳ್ಯ, ಕಲ್ಹಳ್ಳಿ, ಆಂಧ್ರ ಕಾಲೊನಿ, ಎಚ್‌ಎಎಲ್ 3ನೇ ಹಂತ, ಜೀವನ್ ಬಿಮಾ ನಗರ, ಕೋಡಿಹಳ್ಳಿ, ಎಂ.ಜಿ. ರಸ್ತೆ, ಹನುಮಂತಪ್ಪ ಬಡಾವಣೆ, ಬಜಾರ್ ಸ್ಟ್ರೀಟ್, ಹಲಸೂರು, ಎಂ. ವಿ. ಗಾರ್ಡನ್, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಜ್ ಬಡಾವಣೆ, ದೀನಬಂಧು ನಗರ, ಲಿಂಗರಾಜಪುರ, ಜಾನಕಿರಾಮ್ ಬಡಾವಣೆ, ಸಿದ್ದರಾಮಪ್ಪ ಗಾರ್ಡನ್ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದು, ವ್ಯತ್ಯಯಕ್ಕೆ ನಾಗರಿಕರು ಸಹಕರಿಸಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮನವಿ ಮಾಡಿಕೊಂಡಿದೆ.
ನಗರದಲ್ಲಿ ನೀರು ಪೂರೈಕೆ ವ್ಯತ್ಯಯದ ಕುರಿತು ಬೆಂಗಳೂರು ಜಲಮಂಡಳಿ ಸುತ್ತೋಲೆ ಹೊರಡಿಸಿದೆ.
Recommended Video
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Water Tank Vastu: ಮನೆಯಲ್ಲಿ ನೀರಿನ ಟ್ಯಾಂಕ್ ಇದೆಯೇ? ವಾಸ್ತು ನಿಯಮಗಳು ತಿಳಿದುಕೊಳ್ಳಿ












Click it and Unblock the Notifications