ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ದೀಪ ಬೆಳಗಿಸಲು ಬಿಬಿಎಂಪಿ ಹೊಸ ಐಡ್ಯಾ

By Mahesh
|
Google Oneindia Kannada News

ಬೆಂಗಳೂರು, ನ.11: ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಐದಾರು ತಿಂಗಳಲ್ಲಿ ವಿದ್ಯುತ್ ಇಲ್ಲದೆ ನಗರದ ರಸ್ತೆ ದೀಪಗಳು ಜಗಮಗಿಸಲಿವೆ. ಸೌರಶಕ್ತಿ ದೀಪಗಳ ನಂತರ ಈಗ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಪರಿಸರ ಸ್ನೇಹಿ ಯೋಜನೆಯೊಂದನ್ನು ಹಾಕಿಕೊಂಡಿದೆ.

ನಗರದ ಸುಮಾರು 16 ಕಡೆಗಳಲ್ಲಿ ಜೈವಿಕ ಇಂಧನ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಬಿಬಿಎಂಪಿ ಉದ್ದೇಶಿಸಿದೆ. ಈ ಘಟಕಗಳಿಂದ ಸುಮಾರು 800 ಕಿಲೋವ್ಯಾಟ್ ಶಕ್ತಿ ಉತ್ಪಾದನೆಯಾಗಲಿದೆ. ಇಂಧನ ಉತ್ಪಾದನೆಗೆ ಜೈವಿಕ ತ್ಯಾಜ್ಯ ಬಳಸಲಾಗುತ್ತಿದ್ದು, ಇದರಿಂದ ಬರುವ ಶಕ್ತಿಯನ್ನು ರಸ್ತೆ ದೀಪಗಳನ್ನು ಉರಿಸಲು ಬಳಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಇಂಜಿನಿಯರ್ ಎಂಆರ್ ವೆಂಕಟೇಶ್ ಹೇಳಿದ್ದಾರೆ.

ಪುಣೆ ಮೂಲದ ಮೇಲ್ಹೆಮ್(Mailhem) ಇಂಜೀನಿಯರ್ಸ್ ಪ್ರೈ.ಲಿ ಸಂಸ್ಥೆ ಬೆಂಗಳೂರಿನ ಕುವೆಂಪು ನಗರ ವಾರ್ಡಿನ ಸಿಂಗಪುರ ಲೇಔಟ್ ನಲ್ಲಿ ಬಯೋಗ್ಯಾಸ್ ಘಟಕವನ್ನು ಆರಂಭಿಸಿದೆ. ಇಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ತಿನಿಂದ ಸುಮಾರು 25 ರಸ್ತೆ ದೀಪಗಳು ನಿರಂತರವಾಗಿ ನಾಲ್ಕೈದು ಗಂಟೆಗಳ ಕಾಲ ಪ್ರಕಾಶಿಸುವಂತೆ ಮಾಡಲಾಗಿದೆ.

ಸುಮಾರು ಐದು ಟನ್ ಗಳಷ್ಟು ಜೈವಿಕ ತ್ಯಾಜ್ಯ ಮಾತ್ರ ಈ ಘಟಕದಲ್ಲಿ ಕಚ್ಚಾವಸ್ತುವಾಗಿ ಬಳಸಬಹುದಾಗಿದೆ. ಸದ್ಯಕ್ಕೆ 2 ಟನ್ ಗೊಬ್ಬರ ಮಾತ್ರ ಬಳಸಲಾಗುತ್ತಿದೆ. 5 ಟನ್ ತ್ಯಾಜ್ಯ ಸಿಕ್ಕರೆ ಪ್ರತಿದಿನ ಸುಮಾರು 8-10 ಗಂಟೆಗಳ ಕಾಲ ರಸ್ತೆ ದೀಪಗಳನ್ನು ಉರಿಸಬಹುದು ಎಂದು ಮೇಲ್ಹೆಮ್ ಸಂಸ್ಥೆಯ ನಿಖಿಲ್ ಪಿಂಟೋ ವಿವರಿಸಿದ್ದಾರೆ. ಮುಂದಿನ ಘಟಕಗಳನ್ನು ಮತ್ತಿಕೆರೆ, ಗಾಂಧಿನಗರ ಹಾಗೂ ಶ್ರೀರಮಣ ಮಹರ್ಷಿ ರಸ್ತೆಯ ಕೆಂಪೇಗೌಡ ಪಾರ್ಕ್ ಬಳಿ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು. ಇನ್ನಷ್ಟು ವಿವರ ಮುಂದೆ ಓದಿ...

ಎಲ್ಲೆಲ್ಲಿ ಈ ವ್ಯವಸ್ಥೆ

ಎಲ್ಲೆಲ್ಲಿ ಈ ವ್ಯವಸ್ಥೆ

ಮತ್ತಿಕೆರೆ, ಗಾಂಧಿನಗರಗಳಲ್ಲಿ ವಿದ್ಯುತ್ ಕಾರ್ಯ ಮಾತ್ರ ಬಾಕಿ ಇದ್ದು, ಇನ್ನೆರಡು ತಿಂಗಳಿನಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ ಬಿಬಿಎಂಪಿ ಕ್ಲಿಯರೆನ್ಸ್ ಗೆ ಕಾಯುತ್ತಿದ್ದೇವೆ ಎಂದು ಮೇಲ್ಹೆಮ್ ಸಂಸ್ಥೆ ಹೇಳಿದೆ.

ಚಿತ್ರದಲ್ಲಿ : ಮೇಲ್ಹೆಮ್ ಸಂಸ್ಥೆ ಕೆವಿವಿ ಸಂಸ್ಥೆ ನಿರ್ಮಿಸಿರುವ ಬಯೋಗ್ಯಾಸ್ ಘಟಕ
ಖರ್ಚು ವೆಚ್ಚ ವಿವರ

ಖರ್ಚು ವೆಚ್ಚ ವಿವರ

ಬಿಬಿಎಂಪಿ ಸುಮಾರು 102.24 ಲಕ್ಷ(79 ಲಕ್ಷ ನಿರ್ಮಾಣ ಹಾಗೂ ಯಂತ್ರಗಳಿಗೆ ಹಾಗೂ 23.24 ಲಕ್ಷ ರು ಬಯೋಗ್ಯಾಸ್ ಘಟಕ ನಿರ್ವಹಣೆಗೆ) ವೆಚ್ಚ ಮಾಡುತ್ತಿದೆ ಎಂದು ಬಿಬಿಎಂಪಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಮುಖ್ಯ ಇಂಜಿನಿಯರ್ ಎಂಆರ್ ವೆಂಕಟೇಶ್ ಹೇಳಿದ್ದಾರೆ.

ಎಲ್ಲಾ ಘಟಕಗಳು ಮಾರ್ಚ್ 14, 2014ರೊಳಗೆ ಪೂರ್ಣಗೊಂಡು ಕಾರ್ಯ ನಿರ್ವಹಿಸುವ ಗುರಿ ಹೊಂದಲಾಗಿದೆ ಎಂದರು.
ಚಿತ್ರದಲ್ಲಿ : ಮೇಲ್ಹೆಮ್ ಸಂಸ್ಥೆ ಕೆಎಸ್ ಸಿಎ ಸಂಸ್ಥೆಗೆ ನಿರ್ಮಿಸಿರುವ ಘಟಕ
ಬಯೋಗ್ಯಾಸ್ ಏಕೆ

ಬಯೋಗ್ಯಾಸ್ ಏಕೆ

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬಯೋ ಗ್ಯಾಸ್ ಘಟಕಗಳು ನಗರಕ್ಕೆ ಹೊಸತೇನಲ್ಲ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(KVIC) ಅಡಿಯಲ್ಲಿ 30 ಲಕ್ಷಕ್ಕೂ ಅಧಿಕ ಘಟಕಗಳು ಸ್ಥಾಪನೆಗೊಂಡಿವೆ.

ಜಾನುವಾರುಗಳ ಸಂಖ್ಯೆ ಇಳಿಮುಖ, ಯಂತ್ರೋಪಕರಣಗಳ ತೊಂದರೆಯಿಂದ ಘಟಕಗಳು ಜನಪ್ರಿಯತೆ ಗಳಿಸಲಿಲ್ಲ. ಮಾನವನ ತ್ಯಾಜ್ಯವನ್ನು ಬಳಸಲು ಕೆಲವೆಡೆ ಸಲಹೆ ಬಂದಿದ್ದು ಇಡೀ ಯೋಜನೆಗೆ ಮುಳುವಾಯಿತು.ಚಿತ್ರದಲ್ಲಿ : ಮೇಲ್ಹೆಮ್ ಸಂಸ್ಥೆ ಎಂಟಿಆರ್ ಫುಡ್ಸ್ ಲಿ. ಗೆ ಮಾಡಿಕೊಟ್ಟಿರುವ ಘಟಕ
ಬಿಬಿಎಂಪಿ ಯೋಜನೆ

ಬಿಬಿಎಂಪಿ ಯೋಜನೆ

ಮೇಲ್ಹೆಮ್ ಸಂಸ್ಥೆಗೆ ನಾಲ್ಕು ಘಟಕ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಅಶೋಕ ಬಯೋಗ್ಯಾಸಿಗೆ ಸುಮಾರು 12 ಕಡೆ ಘಟಕ ನಿರ್ಮಾಣಕ್ಕೆ ಕ್ಲಿಯರೆನ್ಸ್ ಇದೆ.

ಈಗ ಒಂದೇ ಏಟಿನಲ್ಲಿ ಎರಡು ಹಕ್ಕಿ ಹೊಡೆಯಲು ಬಿಬಿಎಂಪಿ ಯೋಜನೆ ಹಾಕಿಕೊಂಡಿದ್ದು ಕಸದ ಸಮಸ್ಯೆ ಹಾಗೂ ವಿದ್ಯುತ್ ಕೊರತೆಯನ್ನು ನೀಗಿಸಲು ಜೈವಿಕ ಇಂಧನ, ಬಯೋ ಗ್ಯಾಸ್ ಗೆ ಬಿಬಿಎಂಪಿ ಮೊರೆ ಹೋಗಿದೆ
ಇ ಶೌಚಾಲಯ

ಇ ಶೌಚಾಲಯ

ಬೆಂಗಳೂರಿನಲ್ಲಿ ಸಾರ್ವಜನಿಕರ ಅನುಕೂಲಕಕ್ಕಾಗಿ 'ಇ-ಶೌಚಾಲಯ' ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕೇರಳ ಮೂಲದ ಇರಮ್ ಸೈಂಟಿಫಿಕ್ ಸಲೂಷನ್ಸ್ ಸಂಸ್ಥೆಯು ಇ-ಶೌಚಾಲಯ ನಿರ್ಮಿಸುತ್ತಿದೆ.

ಒಂದು ರೂ. ನಾಣ್ಯ ಹಾಕಿದರೆ ಬಾಗಿಲು ತೆರೆಯುತ್ತದೆ. ಒಳಭಾಗದಲ್ಲಿ ಸೆನ್ಸಾರ್ ಸೌಲಭ್ಯ ಅಳವಡಿಸಲಾಗಿದ್ದು, ದೀಪ ಹಾಗೂ ಫ್ಯಾನ್ ಯಾಂತ್ರಿಕವಾಗಿ ಚಾಲನೆಯಾಗಲಿದೆ. ಶೌಚಾಲಯ ಬಳಸಿದ ತರುವಾಯ ಸೆನ್ಸಾರ್ ವ್ಯವಸ್ಥೆ ಮೂಲಕವೇ ನೀರು ಪೂರೈಕೆಯಾಗಲಿದೆ. ನಂತರ ಒಳಗಿನ ಗುಂಡಿ ಒತ್ತಿದರೆ ಬಾಗಿಲು ತೆರೆಯುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿ ಓದಿ

English summary
BBMP plan to set up 16 biogas plants in various locations in the city, to produce 800 kilowatt of power from segregated organic waste, enough to power street lights in the areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X