• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಸ್ತೆ ಅಪಘಾತದಿಂದ ನೊಂದವರನ್ನು ನೆನಸಿಕೊಳ್ಳಲು ವಾಕಾಥಾನ್

|

ಬೆಂಗಳೂರು, ನವೆಂಬರ್ 16 : ಪ್ರತಿ ವರ್ಷ ಸುಮಾರು 1.5 ಲಕ್ಷ ಭಾರತೀಯರು ರಸ್ತೆ ಅಪಘಾತದಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಅಲ್ಲದೇ 5 ಲಕ್ಷಕ್ಕೂ ಹೆಚ್ಚಿನ ಜನರು ತೀವ್ರ ತರಹದ ಗಾಯಗಳಿಗೆ ತುತ್ತಾಗುತ್ತಿದ್ದಾರೆ. 6.1 ಕೋಟಿಗೂ ಹೆಚ್ಚಿನ ಜನಸಂಖ್ಯೆಹೊಂದಿರುವ ಕರ್ನಾಟಕ ರಾಜ್ಯವು ರಸ್ತೆ ಅಪಘಾತದಲ್ಲಿ ದೇಶದಲ್ಲಿ 3ನೇ ಸ್ಥಾನದಲ್ಲಿದೆ.

ರಸ್ತೆ ಅಪಘಾತಗಳಿಗೆ ತುತ್ತಾಗಿ ಸಾವನ್ನಪ್ಪಿರುವ, ಗಾಯಗೊಂಡವರ ಹಾಗೂ ಇವುಗಳಿಂದಾಗಿ ನೊಂದವರನ್ನು ನೆನಪಿಸಿಕೊಳ್ಳುವ ಸಲುವಾಗಿ ವಿಶ್ವದಾದ್ಯಂತ ನವೆಂಬರ್ 3ನೇ ಭಾನುವಾರವನ್ನು 'ವಿಶ್ವ ಸ್ಮರಣೆ ದಿನ'ವನ್ನಾಗಿ ಆಚರಿಸಲಾಗುತ್ತದೆ.

ಹೆದ್ದಾರಿ 53ರಲ್ಲಿ ಅಪಘಾತ: ಒಂದೇ ಕುಟುಂಬದ 10 ಮಂದಿ ದುರ್ಮರಣ

ಕಳೆದ ಕೆಲವು ವರ್ಷಗಳಿಂದ ರಸ್ತೆ ಸುರಕ್ಷತೆ ಕುರಿತು ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರು, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜ್ (ಪ್ರೌಢಶಾಲಾ ವಿಭಾಗ)ನ ಸಹಬಾಗಿತ್ವದಲ್ಲಿ ಸೇಫರ್ ರೋಡ್ಸ್ ಬೆಂಗಳೂರು ಅಭಿಯಾನದ ಅಡಿಯಲ್ಲಿ ಈ ವರ್ಷದ 'ವಿಶ್ವ ಸ್ಮರಣೆ ದಿನ' ವನ್ನು ಆಯೋಜಿಸಿದೆ.

ಹೊಸ ವಾಹನಗಳಿಗೆ ದೀರ್ಘಾವಧಿ ವಿಮೆ: ಸೆ. 1ರಿಂದ ಜಾರಿ

ವಿಶ್ವ ಸ್ಮರಣೆ ದಿನದ ಅಂಗವಾಗಿ ನವೆಂಬರ್ 17ರ ಶನಿವಾರ ವಾಕಥಾನ್ ಆಯೋಜಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರಂ ಶಾಸಕ ಡಾ. ಅಶ್ವತ್ ನಾರಾಯಣ್ ಪಾಲ್ಗೊಳ್ಳಲಿದ್ದಾರೆ. ಸಾರಿಗೆ ಇಲಾಖೆಯ ಅಪರ ಆಯುಕ್ತರಾದ ನಾರಾಯಣ ಸ್ವಾಮಿ, ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಉಪ ನಿರ್ದೇಶಕರಾದ ಡಾ. ಉಪೇಂದ್ರ ಭೋಜಾನಿ ಮುಂತಾದವರು ಭಾಗವಹಿಸಲಿದ್ದಾರೆ.

ಅಪಘಾತದಲ್ಲಿ ವಿದ್ಯಾರ್ಥಿನಿ ಸಾವು, ಕಣ್ಣು ದಾನ ಮಾಡಿದ ಪೋಷಕರು

ದಿನಾಂಕ : ಶನಿವಾರ, 17 ನವೆಂಬರ್ 2018

ಸಮಯ : ಬೆಳಗ್ಗೆ 9ಕ್ಕೆ( ವಾಕಥಾನ್‍ಗೆ ಚಾಲನೆ ಬೆಳಿಗ್ಗೆ 10ಕ್ಕೆ)

ಸ್ಥಳ: ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜ್ (ಪ್ರೌಢಶಾಲಾ ವಿಭಾಗ), 13ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು.

English summary
A Walkathon has been organized on Saturday 17th November 2018 to mark World Day of Remembrance for Road Traffic Victims (WDR) by Institute of Public Health, Bengaluru. Karnataka with a population of over 6.1 crore accounts for the third largest number of road injuries and fifth highest number of road traffic deaths in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X