ಪತ್ನಿ ಹತ್ಯೆಗೆ 15 ಲಕ್ಷಕ್ಕೆ ಸುಪಾರಿ ನೀಡಿದ್ದ ಪತಿರಾಯ ಪೊಲೀಸರ ಅತಿಥಿ
ಬೆಂಗಳೂರು, ನವೆಂಬರ್ 30: ತನ್ನ ಪತ್ನಿಯನ್ನೇ ಕೊಲ್ಲಲು 15 ಲಕ್ಷ ರೂಪಾಯಿಗೆ ಸೂಪಾರಿ ಕೊಟ್ಟಿದ್ದ ಪತಿರಾಯನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಶ್ರೀಧರ್ ಎನ್ನುವಾತ ತನ್ನ ಪತ್ನಿ ವಿನುತಾಳನ್ನು ಹತ್ಯೆ ಮಾಡಲು 15 ಲಕ್ಷ ರು. ಸುಪಾರಿ ನೀಡಿದ್ದ. ಸುಪಾರಿಯಂತೆ ತಂಡವೊಂದು ವಿನುತಾಳ ಹತ್ಯೆಗೆ ಹೊಂಚು ಹಾಕುತಿದೆ ಎನ್ನುವ ಖಚಿತ ಮಾಹಿತಿ ಪಡೆದುಕೊಂಡ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಶ್ರೀಧರ್ ತನ್ನ ಪತ್ನಿ ವಿನುತಾಳನ್ನು ಕೊಲ್ಲಲು 15 ಲಕ್ಷ ರು. ಸುಪಾರಿ ನೀಡಿದ್ದ. ಈ ಪೈಕಿ 2 ಲಕ್ಷ ರು. ಹಣ ಮುಂಗಡವನ್ನೂ ಸಹ ನೀಡಿದ್ದ.
ಸುಪಾರಿ ನೀಡಿದ್ದ ಶ್ರೀಧರ್ ಹಾಗೂ ಆತನ ಸ್ನೇಹಿತನನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications