'ಪ್ರಜಾಪ್ರಭುತ್ವ ಬಲವರ್ಧನೆಗಾಗಿ ಮತದಾನದ ಅತ್ಯವಶ್ಯಕ'

ಬೆಂ.ಗ್ರಾಮಾಂತರ, ಏಪ್ರಿಲ್ 05: ಪ್ರಜಾಪ್ರಭುತ್ವ ಬಲವರ್ಧನೆಗೆ ಮತದಾನದ ಪಾತ್ರ ಮುಖ್ಯ ಏಪ್ರಿಲ್ 18 ರಂದು ನಡೆಯಲಿರುವ ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಅರ್ಹ ಮತದಾರರು ಪಾಲ್ಗೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಆರ್.ಲತಾ ತಿಳಿಸಿದರು.

ದೇವನಹಳ್ಳಿ ತಾಲ್ಲೂಕು ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಸತಿ ಶಾಲಾ ಮಕ್ಕಳ ಪೋಷಕರಿಗೆ ಹಾಗೂ ಕುಂದಾಣ ಗ್ರಾಮಸ್ಥರಿಗೆ ಏರ್ಪಡಿಸಲಾಗಿದ್ದ "ಮತದಾರರ ಜಾಗೃತಿ" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರು ಯಾವುದೇ ಆಮಿಷಕ್ಕೊಳಗಾಗದೇ ನಿರ್ಭೀತವಾಗಿ ಮತ ಚಲಾಯಿಸಬೇಕು ಹಾಗೂ ಮತದಾನ ನಡೆಯುವ ದಿನದಂದು ಸಾರ್ವತ್ರಿಕ ರಜೆ ಇರುವುದರಿಂದ ಪ್ರವಾಸ ಕೈಗೊಳ್ಳದೆ ಕಡ್ಡಾಯವಾಗಿ ಮತದಾನ ನಡೆಯುವ ದಿನದಂದು ಮತ ಚಲಾಯಿಸಬೇಕೆಂದು ಹೇಳಿದರು.

Voting is necessary to strengthen the democracy: election officer

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಬಿಡಿಸಿದ ಮತ ಜಾಗೃತಿ ಮತ ಚಲಾಯಿಸಲು ಪ್ರೇರಿಪಿಸುವ ಚಿತ್ರಕಲೆ, ಕರಕುಶಲ ವಸ್ತು ಪ್ರದರ್ಶನ ಆಕರ್ಷಿಸಿದವು ಮತ ಜಾಗೃತಿ ಘೋಷವಾಕ್ಯಗಳು ಮೆಹಂದಿ ಕಲೆಯಲ್ಲಿ ಮೂಡಿದವು ಗಿರೀಶ್ ಮತ್ತು ತಂಡದವರು ಮತದಾನದ ಮಹತ್ವ ಸಾರುವ ಗೀತೆಗಳನ್ನು ಪ್ರಸ್ತುತ ಪಡಿಸಿ ಕಿರುನಾಟಕ ಪ್ರದರ್ಶಿಸಿದರು.

1989ರ ಮತದಾನದ ದಾಖಲೆ ಮುರಿಯಲು ಮೈಸೂರು ಸ್ವೀಪ್ ಸಮಿತಿ ಕಸರತ್ತು
ಕಾರ್ಯಕ್ರಮದಲ್ಲಿ ಮುಖ್ಯ ಲೆಕ್ಕಾಧಿಕಾರಿ ಟಿ.ಆರ್ ಶೋಭಾ ಮುಖ್ಯ ಯೋಜನಾಧಿಕಾರಿ ವಿನುತಾರಾಣ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೀಪಶ್ರೀ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ನಾಗರತ್ನ, ಜಿಪಂ ಸಹಾಯಕ ಯೋಜನಾಧಿಕಾರಿ ಅನಿಲ್ ಸೇರಿದಂತೆ ವಸತಿ ಶಾಲಾ ಮಕ್ಕಳ ಪೋಷಕರು, ಕುಂದಾಣ ಗ್ರಾಮಸ್ಥರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+