ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ: ಮಳೆಯ ನಡುವೆ ಮತದಾನ
ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ.
ಶ್ರೀನಗರದ ಪಿಇಎಸ್ ಕಾಲೇಜು, ಜಯನಗರದ ಎನ್ಎಂಕೆಆರ್‌ವಿ ಸೇರಿದಂತೆ ನಗರದ ವಿವಿಧೆಡೆ ಮತದಾನಕ್ಕೆ ಮತಗಟ್ಟೆಗಳನ್ನು ತೆರೆಯಲಾಗಿದೆ. ಸಂಜೆ 5ರವರೆಗೂ ಮತದಾನ ನಡೆಯಲಿದೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಅದರ ನಡುವೆಯೇ ಪದವೀಧರರು ಮತ ಚಲಾಯಿಸಲು ಮತಗಟ್ಟೆಗೆ ತೆರಳುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ, ಬಿಜೆಪಿಯಿಂದ ದೇವೇಗೌಡ ಮತ್ತು ಜೆಡಿಎಸ್‌ನಿಂದ ಅಚ್ಚೇಗೌಡ ಶಿವಣ್ಣ
ಸ್ಪರ್ಧಿಸುತ್ತಿದ್ದಾರೆ. ಅವರಲ್ಲದೆ, ಸಿಪಿಐ ಅಭ್ಯರ್ಥಿ ಕೆ. ಪ್ರಕಾಶ, ಭಾರತೀಯ ಜನತಾದಳದಿಂದ ವಿ.ಸುರೇಶ್ ಬಾಬು ಮತ್ತು 17 ಮಂದಿ ಪಕ್ಷೇತರರು ಸೇರಿದಂತೆ 22 ಮಂದಿ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದೆ.
ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 65,354 ಮತದಾರರಿದ್ದಾರೆ. ಅದರಲ್ಲಿ ಗಂಡು 38,451 ಪುರುಷರು, 26,891 ಮಹಿಳೆಯರು ಮತ್ತು 12 ಇತರೆ ಮತದಾರರು ಸೇರಿದ್ದಾರೆ.
ಈ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಮುಖ್ಯ ಮತಗಟ್ಟೆಗಳು, 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 82 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.
ಅರಮನೆ ರಸ್ತೆಯಲ್ಲಿರುವ ರಾಮನಾರಾಯಣ್ ಚಲ್ಲಾರಾಮ್ ಕಾಲೇಜಿನಲ್ಲಿ ಜೂನ್ 12 ರಂದು ಬೆಳಿಗ್ಗೆ 8.00 ಗಂಟೆಯಿಂದ 14 ಎಣಿಕೆ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ.











Click it and Unblock the Notifications