ಕರ್ನಾಟಕದಲ್ಲಿ ವೊಡಾಫೋನ್ ನಿಂದ ಭರ್ಜರಿ ಹೂಡಿಕೆ

ಬೆಂಗಳೂರು, ಜೂ, 25 : ವೊಡಾಫೋನ್ ಬಳಕೆದಾರರಿಗೊಂದು ಸಂತಸದ ಸುದ್ದಿ. ವೊಡಾಪೋನ್ ಟೆಲಿಕಾಂ ಕಂಪನಿಯು ಕರ್ನಾಟಕದಲ್ಲಿ ತಮ್ಮ ನೆಟ್ ವರ್ಕ್ ಜಾಲವನ್ನು ವಿಸ್ತರಣೆ ಮಾಡಲು 300 ಕೋಟಿ ರೂ. ಹೂಡಿಕೆ ಮಾಡುವುದಾಗಿ ನಿರ್ಧಾರ ತೆಗೆದುಕೊಂಡಿದೆ.

ಈಗಾಗಲೇ 400 ಹೊಸತಾಣಗಳನ್ನು ಆರಂಭಿಸಿದ್ದು, 6,850 ಕಿ.ಮೀ ವರೆಗೆ ಆಪ್ಟಿಕ್ ಫೈಬರ್ ಅಳವಡಿಸಿದೆ. ಕರ್ನಾಟಕದ ನಗರ ಹಾಗು ಗ್ರಾಮಗಳು ಸೇರಿದಂತೆ 13,850 ಪ್ರದೇಶಗಳಿಗೆ ನೆಟ್ವರ್ಕ್ ಸೇವೆಯನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ. , ಇದರ ಮೂಲಕ ಗ್ರಾಹಕರಿಗೆ ಅತ್ಯುತ್ತಮ ನೆಟ್ ವರ್ಕ್ ವ್ಯವಸ್ಥೆ ಕಲ್ಪಿಸಿ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಭಾರತೀಯ ವೋಡಾಫೋನ್ ಕಂಪನಿಯ ವಾಣಿಜ್ಯ ಮುಖ್ಯಸ್ಥರಾದ ಅತನು ಬಟಬ್ಯಾಲ್ ತಿಳಿಸಿದ್ದಾರೆ.

Vodafone makes huge investments in Karnataka

ಕಳೆದ ವರ್ಷ 2G ಸೇವೆಯನ್ನು 9,250 ಪ್ರದೇಶಗಳಿಗೆ ವಿಸ್ತರಿಸಿದ್ದು, ಜನಸಂಖ್ಯೆಯ 76% ಜನರನ್ನು ಸುಲಭವಾಗಿ ತಲುಪಿತ್ತು. ವಾರ್ಷಿಕವಾಗಿ ಕಂಪನಿಯ ಡಾಟಾ ಸೇವೆ ಆದಾಯದಲ್ಲಿ 86% ಹಾಗೂ ಕಂಪನಿ ಆದಾಯ 17% ನಷ್ಟು ಹೆಚ್ಚಳಗೊಂಡಿದ್ದು, ಹೆಜ್ಜೆ ಹೆಜ್ಜೆಗೂ ಕಂಪನಿ ಉತ್ತಮ ಬೆಳವಣಿಗೆ ಕಾಣುತ್ತಿದೆ.

ಈಗಾಗಲೇ ಕರ್ನಾಟಕದಲ್ಲಿ 67 ಲಕ್ಷ ಜನರಿಗೆ ತನ್ನ ವೊಡಾಫೋನ್ ಸೇವೆಯನ್ನು ನೀಡುತ್ತಿದೆ. ಇದರ ಜೊತೆಗೆ 60 ವೋಡಾಪೋನ್ ಸ್ಟೋರ್ಸ್ ಮತ್ತು ಹಳ್ಳಿಗಳಲ್ಲಿ 633 ಮಿನಿ ಸ್ಟೋರ್ಸ್ ತೆರೆಯಲಾಗಿದೆ. ಅಲ್ಲದೆ ಕೊನೆಯ ವರ್ಷದಲ್ಲಿ 60 ಕ್ಕೂ ಹೆಚ್ಚು ವೊಡಾಫೋನ್ ಸೇವಾ ಶಾಪ್ ಆರಂಭಿಸಿದ್ದು, ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸುರಕ್ಷತೆ, ಹಣ ವರ್ಗಾವಣೆಯಲ್ಲಿ ಸರಳತೆ ಮತ್ತು ವೇಗವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆಯನ್ನು ನೀಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+