ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಜಾತಿ ಪ್ರಸ್ತಾಪಿಸಿದ ಶಿವರಾಮೇಗೌಡ ವಿರುದ್ಧ ಕ್ರಮ: ಎಚ್ ವಿಶ್ವನಾಥ್

|
Google Oneindia Kannada News

ಬೆಂಗಳೂರು, ಏ.4: ಸುಮಲತಾ ವಿರುದ್ಧ ಜಾತಿ ರಾಜಕೀಯ ಮಾಡುವುದು ಸರಿಯಲ್ಲ, ಈ ಹಿನ್ನೆಲೆಯಲ್ಲಿ ಜಾತಿ ಪ್ರಸ್ತಾಪ ಮಾಡಿದ ಸಂಸದ ಎಲ್‌ಆರ್ ಶಿವರಾಮೇಗೌಡ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆ 2019ರ ಕುರಿತು ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಡ್ಯ ಕ್ಷೇತ್ರವೂ ಎಲ್ಲಾ ಸಮುದಾಯವನ್ನೂ ಒಳಗೊಂಡಿದೆ.

ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್ಗೌಡ-ನಾಯ್ಡು ಹೇಳಿಕೆ: ಸಂಸದ ಶಿವರಾಮೇಗೌಡ ವಿರುದ್ಧ ಎಫ್‌ಐಆರ್

ರಾಜ್ಯದ ಭೂಪಟದಲ್ಲಿ ತನ್ನದೇ ಆದ ಸ್ಥಾನಮಾನ ಪಡೆದಿದೆ. ಆದರೆ ಸಂಸದ ಶಿವರಾಮೇಗೌಡರ ಹೇಳಿಕೆಯಿಂದ ಮಂಡ್ಯದ ಗೌರವವನ್ನು ಕಡಿಮೆ ಮಾಡಿದ್ದಾರೆ , ಅವರ ಹೇಳಿಕೆ ಸರಿ ಎಂದು ಒಪ್ಪಲು ಸಾಧ್ಯವಿಲ್ಲ, ಇದನ್ನು ಗಂಭೀರವಾಗಿ ಪರಿಗಣಿಸಿ ಪಕ್ಷದ ರಾಜ್ಯಾಧ್ಯಕ್ಷನಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

vishwanath assures action against Shivaramegowda

ಮಂಡ್ಯದಲ್ಲಿ ಬಲಿಜ ಸಮುದಾಯಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಸದ ಶಿವರಾಮೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಹೇಳಿದರು.

ನಾಯಕರ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು

ಮಂಡ್ಯದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿರುವುದರಿಂದ ಈಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಉಳಿದಿಲ್ಲ, ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಸುಮಲತಾ ಅವರು ಮಂಡ್ಯದ ಸೊಸೆ ಚುನಾವಣೆಯ ಕಾರಣಕ್ಕಾಗಿ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ, ವ್ಯಕ್ತಿಯ ಸಂಬಂಧ ಬಹಳ ಮುಖ್ಯವಾಗಿದೆ. ಅವರ ಕುರಿತು ಪಕ್ಷದ ನಾಯಕರು ಮಾತನಾಡಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಇತ್ತೀಚೆಗೆ ಎಲ್ಲಾ ಪಕ್ಷಗಳು ಜಾತಿ ಹಿಡಿದುಕೊಂಡು ಹೋಗುತ್ತಿವೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ, ಅದನ್ನು ಯಾರೂ ಕೂಡ ಕ್ಷಮಿಸುವುದೂ ಇಲ್ಲ. ಇದನ್ನು ಎಲ್ಲಾ ಪಕ್ಷದ ಕಾರ್ಯಕರ್ತರೂ ಪಾಲನೆ ಮಾಡಬೇಕು. ಟೀಕೆಗಳಿದ್ದರೆ ಕೆಲಸದ ಅಥವಾ ಕಾರ್ಯ ವೈಖರಿಯ ಬಗ್ಗೆ ಟೀಕೆಗಳಿರಲಿ ಎಂದು ನುಡಿದರು.

ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ! ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಒಳೇಟು, ಸಿದ್ರಾಮಣ್ಣನೂ ಲೆಕ್ಕಕ್ಕಿಲ್ಲ!

ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದ ಅವರು ಮಂಡ್ಯ ರಾಜಕಾರಣ ಎಲ್ಲಿಲ್ಲ, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕುಟುಂಬ ರಾಜಕಾರಣ ಕಾಣಬಹುದು, 543 ಸಂಸದರ ಪೈಕಿ 165ಕ್ಕೂ ಹೆಚ್ಚು ಸಂಸದರು ಕುಟುಂಬ ರಾಜಕಾರಣದಿಂದ ಬಂದವರು. ಮಗನಿಗೆ ಹಾಸನ ಬಿಟ್ಟುಕೊಟ್ಟ ಕುರಿತು ಮಾತನಾಡಿದ ಅವರು, ಇಡೀ ದೇಶಕ್ಕೆ ಪ್ರಧಾನಿಯಾದವರು ಮಂಡ್ಯ, ಮೈಸೂರು, ಹಾಸನಕ್ಕೆ ಮಾತ್ರ ಸೀಮಿತವಲ್ಲ, ಯಾವುದೇ ಕ್ಷೇತ್ರದಿಂದ ಅವರು ಸ್ಪರ್ಧಿಸಬಹುದು.

English summary
lok sabha elections 2019: State JDS president H VIshwanath stated that the party will take action against MP LR Shivarame Gowda following caste based statement about Sumalatha Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X