Viral Video: ಬೆಂಗಳೂರು ರಾಷ್ಟ್ರ ರಾಜಧಾನಿ ಆಗಲಿ ಎಂದ ದೆಹಲಿ ಯುವತಿ: ಈ ಕಾರಣಕ್ಕೆ ಬೇಡ ಎಂದ ಕನ್ನಡಿಗರು
ಬೆಂಗಳೂರು: ಬೆಂಗಳೂರಿನ ಬಗ್ಗೆ ಈಚೆಗೆ ಹೈದರಾಬಾದ್ ಯುವತಿಯೊಬ್ಬರು ತೀರ ಕೆಟ್ಟದಾಗಿ ಕಮೆಂಟ್ ಮಾಡಿದ ಬೆನ್ನಲ್ಲೇ ದೆಹಲಿ ಯುವತಿಯೊಬ್ಬರು ಬೆಂಗಳೂರಿನ ಬಗ್ಗೆ ಮೆಚ್ಚುಗೆ ಸೂಚಿಸಿ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ಮುಂದೆ ರಾಷ್ಟ್ರ ರಾಜಧಾನಿ ದೆಹಲಿ ಬದಲಿಗೆ, ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಮಾಡಬೇಕು ಎಂದು ಯುವತಿ ಆಗ್ರಹಿಸಿದ್ದಾರೆ. ಆದರೆ ಕನ್ನಡಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದು ಟ್ರೋಲ್‌ಗೂ ಕಾರಣವಾಗಿದೆ.
ಬೆಂಗಳೂರಿನ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಮೃದ್ಧಿ ಮಖಿಜಾ ಎನ್ನುವವರು ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಹಿಂದೆಯೂ ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಮೆಚ್ಚುಗೆ ಸೂಚಿಸಿ ಸಮೃದ್ಧಿ ಅವರು ವಿಡಿಯೋ ಮಾಡಿದ್ದರು. ದೆಹಲಿ ಯುವತಿ ಮಾಡಿರುವ ವಿಡಿಯೋ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ವಲಸೆಯ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಗಿಂತಲೂ ಬೆಂಗಳೂರು ಅತ್ಯಂತ ಉತ್ತಮ ಆಯ್ಕೆಯಾಗಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಮೃದ್ಧಿ ಅವರು ತಮ್ಮ ವಿಡಿಯೋದಲ್ಲಿ ಬೆಂಗಳೂರು ಹಾಗೂ ದೆಹಲಿಯನ್ನು ಹೋಲಿಕೆ ಮಾಡಿ ವಿಡಿಯೋ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಗಿಂತ ಬೆಂಗಳೂರು ಉತ್ತಮ ಆಯ್ಕೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಡೆಸುವುದು ದೆಹಲಿಗಿಂತಲೂ ಹೆಚ್ಚು ಆರಾಮದಾಯಕ ಮಾತ್ರವಲ್ಲ ಸುರಕ್ಷಿತವಾಗಿದೆ. ದೆಹಲಿಯು ವಾಯು ಮಾಲಿನ್ಯ ಹಾಗೂ ಸುರಕ್ಷತೆ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದಿದ್ದಾರೆ.
ದೆಹಲಿ ಗ್ಯಾಸ್ ಚೇಂಬರ್
ಇನ್ನು ವೈರಲ್ ವಿಡಿಯೋದಲ್ಲಿ ಯುವತಿಯು ದೆಹಲಿ ಗ್ಯಾಸ್ ಚೇಂಬರ್ ಮಾದರಿಯಲ್ಲಿ ಬದಲಾಗಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗಿದೆ. ಗಾಳಿಯ ಗುಣಮಟ್ಟವು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಉಸಿರಾಡುವುದಕ್ಕೂ ಸಮಸ್ಯೆ ಆಗುತ್ತಿದೆ. ರಾಜಧಾನಿಯಲ್ಲೇ ಈ ರೀತಿಯ ಸಮಸ್ಯೆಗಳಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗಾಳಿಯು ಶುದ್ಧವಾಗಿದೆ. ಅಲ್ಲದೇ ಜೀವನವು ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ದೆಹಲಿಗೆ ಹೋಲಿಕೆ ಮಾಡಿದರೆ ಬೆಂಗಳೂರು ಅತ್ಯಂತ ಸುರಕ್ಷಿತ ನಗರವಾಗಿದೆ. ರಾತ್ರಿ ಸಮಯದಲ್ಲೂ ಒಂಟಿಯಾಗಿ ಓಡಾಡಬಹುದು. ಇದು ದೆಹಲಿಗೆ ಹೋಲಿಸಿದರೆ ತುಂಬಾ ಬೆಸ್ಟ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೇಡವೇ ಬೇಡ ಎಂದ ಕನ್ನಡಿಗರು
ಇನ್ನು ಕನ್ನಡಿಗರು ಯುವತಿಯ ಅಭಿಪ್ರಾಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರೇಷ್ಮಾ ಎನ್ನುವವರು ದಯವಿಟ್ಟು ಬೇಡ ನಮ್ಮಲ್ಲಿ ಈಗಾಗಲೇ ನೀವು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಸಾಕಷ್ಟು ಜನರಿದ್ದಾರೆ. ಪರಿಸ್ಥಿತಿ ಈಗಾಗಲೇ ಕೆಟ್ಟದಾಗಿದೆ. ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ.
ರಾಜಾ ಎನ್ನುವವರು ಹಳೆಯ ನಗರವನ್ನು ಹಾಳು ಮಾಡಿದ ನಂತರ ಹೊಸ ನಗರಕ್ಕೆ ಬದಲಾಯಿಸುವ ಪ್ರವೃತ್ತಿ ಹೇಗಿದೆ ನೋಡಿ. ದೆಹಲಿ ಯಾವಾಗಲೂ ಇಷ್ಟು ವಿಷಕಾರಿಯಾಗಿತ್ತು ಎಂದು ನೀವು ಭಾವಿಸುತ್ತೀರಾ. ಎಲ್ಲವೂ ತಪ್ಪಾಗುವ ಮೊದಲು ಅದು ಸುಂದರ ಸ್ಥಳವಾಗಿತ್ತು. ಬೆಂಗಳೂರು ರಾಜಧಾನಿಯಾದರೆ ಅದೇ ಆಗುತ್ತದೆ ಮತ್ತು 25 ವರ್ಷಗಳ ನಂತರ ನೀವು ಮತ್ತೆ ಹೊಸ ನಗರವನ್ನು ನಿರ್ಮಿಸುತ್ತೀರಿ. ನೀವು ಸಮಸ್ಯೆಯನ್ನು ಪರಿಹರಿಸುತ್ತಿಲ್ಲ, ನೀವು ಅದರಿಂದ ಓಡಿಹೋಗುತ್ತಿದ್ದೀರಿ.
ಸರ್ಕಾರದ ನಿಷ್ಕ್ರಿಯತೆಯಿಂದಾಗಿ ದೆಹಲಿ ವಿಷಕಾರಿಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ನಗರವನ್ನು ಮಾಲಿನ್ಯಗೊಳಿಸುವುದು ಎಲ್ಲಾ ನಿವಾಸಿಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಜನರು ಈಗಾಗಲೇ ಬೆಂಗಳೂರು ಮತ್ತು ಅದರ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳಲು ಪ್ರಾರಂಭಿಸಿದ್ದಾರೆ, ರಾಷ್ಟ್ರೀಯ ರಾಜಧಾನಿಯೊಂದಿಗೆ ನಾವು ಇನ್ನು ಮುಂದೆ ಅದನ್ನು ಬಯಸುವುದಿಲ್ಲ.
ನಿಮ್ಮ ಸಮಸ್ಯೆಗಳಿಂದ ನಮ್ಮ ನಗರವನ್ನು ಇನ್ನಷ್ಟು ನಾಶ ಮಾಡುವ ಮೊದಲು, ನಿಮ್ಮ ಸ್ವಂತ ನಗರವನ್ನು ಸ್ವಚ್ಛಗೊಳಿಸುವ ಮಾರ್ಗವನ್ನು ಕಂಡುಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.












Click it and Unblock the Notifications