ಅಮೆರಿಕಾದ ಮಕ್ಕಳ ಬೆಂಗಳೂರು ಶಾಪಿಂಗ್ ಅನುಭವದ ವಿಡಿಯೋ ವೈರಲ್!

ಬೆಂಗಳೂರು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಬೆಂಗಳೂರು ಐಟಿ ಕ್ಷೇತ್ರ ಹಾಗೂ ಸಿಲಿಕಾನ್ ಸಿಟಿ ಹಾಗೂ ಇಲ್ಲಿನ ವಾತಾವರಣ, ಪ್ರತಿಭೆ ಸೇರಿದಂತೆ ಹಲವು ಕಾರಣಗಳಿಗೆ ಪ್ರಸಿದ್ಧಿ ಗಳಿಸಿದೆ. ಬೆಂಗಳೂರಿನಲ್ಲಿ ನಡೆಯುವ ಸಣ್ಣ ಘಟನೆಯೂ ದೇಶದಾದ್ಯಂತ ಹಾಗೂ ವಿದೇಶದಲ್ಲೂ ಸುದ್ದಿ ಮಾಡುವುದು ಇದೆ. ಇಲ್ಲಿನ ಐಟಿ ಕ್ಷೇತ್ರ ಮಾತ್ರವಲ್ಲದೆ ಏರೋಸ್ಪೇಸ್ ಸೇರಿಂತೆ ವಿವಿಧ ಕ್ಷೇತ್ರಗಳಲ್ಲಿ ಬೆಂಗಳೂರು ಗಳಿಸಿರುವ ಜನ ಮನ್ನಣೆಯೂ ಇದಕ್ಕೆ ಕಾರಣವಾಗಿದೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಅಮೆರಿಕಾದ ಮಹಿಳೆ ತನ್ನ ಮಕ್ಕಳನ್ನು ಶಾಪಿಂಗ್ ಮಾಲ್‌ಗೆ ಕಳುಹಿಸಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಮೆರಿಕಾದ ಮಹಿಳೆ ತಮ್ಮ ಇಬ್ಬರು ಮಕ್ಕಳನ್ನು ಬೆಂಗಳೂರಿನ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಕಳುಹಿಸಿದ್ದಾರೆ. ಅಲ್ಲದೇ ಬೆಂಗಳೂರಿನ ಶಾಪಿಂಗ್ ಮಾಲ್‌ನಲ್ಲಿ ಅನುಭವ ಹೇಗಿದೆ, ಇಲ್ಲಿನ ಜನರು ಯಾವ ರೀತಿ ವರ್ತಿಸುತ್ತಾರೆ ಹಾಗೂ ಇಲ್ಲಿನ ಶಾಪಿಂಗ್ ಮಾಲ್‌ಗಳಲ್ಲಿ ಯಾವ ರೀತಿ ಇರುತ್ತದೆ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲದ ಭಾಗವಾಗಿಯೂ ಇದನ್ನು ಮಾಡಲಾಗಿದೆ.

Viral Video American Kids Share Their Fun Shopping Experience in Bengaluru

ಮಕ್ಕಳು ಶಾಪಿಂಗ್ ಮಾಡುವ ಸಂದರ್ಭದಲ್ಲಿ ಕ್ಯಾಮೆರಾ ಬಳಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಈ ಶಾಪಿಂಗ್ ಅನುಭವದ ಬಗ್ಗೆ ಬರೆದುಕೊಂಡಿರುವಂತೆ, ಅಮೆರಿಕಾದಲ್ಲಿ ಬೆಳೆದ ನನ್ನ ಅಮ್ಮ ನನ್ನನ್ನು ಸಮೀಪದ ಮನೆಗೆ ನಡೆದುಕೊಂಡು ಹೋಗಿ ಬೆಣ್ಣೆ, ಒಂದು ಕಪ್ ಸಕ್ಕರೆ, ಮೊಟ್ಟೆ ಇತ್ಯಾದಿಗಳನ್ನು ಎರವಲು/ ಕೈಸಾಲ ಪಡೆಯುತ್ತಿದ್ದರು (ನಾವು ಎಂದಿಗೂ ಅದನ್ನು ಹಿಂತಿರುಗಿಸಲಿಲ್ಲ 🤣). ಈಗ ನಾನು ನನ್ನ ಮಕ್ಕಳನ್ನು ಇಲ್ಲಿನ ಸಮೀಪದ ಅಂಗಡಿಗೆ ಕಳುಹಿಸುತ್ತೇನೆ. ತಡವಾದರೆ ಮತ್ತು ಸಮೀಪದ ಅಂಗಡಿ ಮುಚ್ಚಿದ್ದರೆ, ನಾನು ಬೇಗ ಮನೆಗೆ ವಸ್ತುಗಳನ್ನು ತಂದು ಕೊಡುವ ಅಪ್ಲಿಕೇಶನ್‌ನಲ್ಲಿ ಮತ್ತು 5 ರಿಂದ15 ನಿಮಿಷಗಳಲ್ಲಿ ವಸ್ತುಗಳನ್ನು ಆರ್ಡರ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆ ಪುಟ್ಟ ಮಗುವಿಗೆ 18 ವರ್ಷದ ನನಗಿಂತ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯವಿದೆ. ಅವಳು ಚಾಕೊಲೇಟ್ ಮತ್ತು ಐಸ್ ಕ್ರೀಮ್ ನಡುವೆ ನಿರ್ಧಾರ ತೆಗೆದುಕೊಂಡಳು🔥🔥 ಎಂದು ನೆಟ್ಟಿಗರೊಬ್ಬರು ರಿಯಾಕ್ಟ್‌ ಮಾಡಿದ್ದಾರೆ.

https://www.instagram.com/reel/DO5Igk9kfeI/?utm_source=ig_web_copy_link&igsh=MzRlODBiNWFlZA==

ಮಕ್ಕಳನ್ನು ಶಾಪಿಂಗ್ ಮಾಲ್‌ನ ವ್ಯಕ್ತಿ ನೋಡುತ್ತಿರುವ ವಿಧಾನವು ತುಂನಾ ವಿಚಿತ್ರವಾಗಿದೆ ಎಂದು ನೆಟ್ಟಿಗರೊಬ್ಬರು ರಿಯಾಕ್ಟ್‌ ಮಾಡಿದ್ದಾರೆ. ಜನರು ಭಾರತದಲ್ಲಿ ಬೆಳೆದವರಲ್ಲ ಎಂಬಂತೆ ವರ್ತಿಸಲು ಏಕೆ ಪ್ರಯತ್ನಿಸುತ್ತಿದ್ದಾರೆ? ಇಷ್ಟೊಂದು ಕೃತಕತೆ ಏಕೆ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಜನರು ಏನೂ ತಿಳಿಯದೆ ಬೇರೆ ದೇಶದ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಮತ್ತೊಂದೆಡೆ ಅವರ ಸ್ವಂತ ದೇಶವು ಮಾದಕ ವ್ಯಸನಿಗಳಿಂದ ತುಂಬಿದೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+