ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಐಎಡಿಬಿಗೆ 1.5 ಕೋಟಿ ದಂಡ ಹಾಕಿದ ಎನ್‌ಜಿಟಿ!

|
Google Oneindia Kannada News

ಬೆಂಗಳೂರು,ಆಗಸ್ಟ್‌. 4: ತಿಪ್ಪಗೊಂಡನಹಳ್ಳಿ ಜಲಾಶಯದ (ಟಿಜಿಆರ್) ಜಲಾನಯನ ಪ್ರದೇಶದಲ್ಲಿರುವ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೆಐಎಡಿಬಿಗೆ 1.5 ಕೋಟಿ ರೂಪಾಯಿ ದಂಡ ವಿಧಿಸಿದೆ.

ನ್ಯಾಯಮಂಡಳಿ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕಿನ ಆರು ಗ್ರಾಮಗಳಲ್ಲಿ ಹರಡಿರುವ 696.45 ಎಕರೆಯನ್ನು ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ 3ನೇ ಹಂತಕ್ಕಾಗಿ ಅಭಿವೃದ್ಧಿಪಡಿಸಿದೆ.

Breaking: ಬಿಬಿಎಂಪಿ ಚುನಾವಣೆ: ಎಲ್ಲಾ 243 ವಾರ್ಡ್‌ಗಳ ಮೀಸಲಾತಿ ಪಟ್ಟಿ ಬಿಡುಗಡೆBreaking: ಬಿಬಿಎಂಪಿ ಚುನಾವಣೆ: ಎಲ್ಲಾ 243 ವಾರ್ಡ್‌ಗಳ ಮೀಸಲಾತಿ ಪಟ್ಟಿ ಬಿಡುಗಡೆ

'ಹಸಿರು' ಮತ್ತು 'ಕಿತ್ತಳೆ' ವರ್ಗದ ಕೈಗಾರಿಕೆಗಳನ್ನು ಸ್ಥಾಪಿಸಲು ಅಧಿಕಾರಿಗಳು ಮಾರ್ಚ್ 2016 ರಲ್ಲಿ ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದಿಂದ ಪರಿಸರ ಅನುಮತಿಯನ್ನು ಪಡೆದಿದ್ದರು. 2017ರಲ್ಲಿ ಅರ್ಜಿದಾರರು ಪರಿಸರ ಸೂಕ್ಷ್ಮವಾಗಿರುವ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶಕ್ಕೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ್ದರು.

 ಷರತ್ತುಗಳನ್ನು ಉಲ್ಲಂಘಿಸಿದ ಕೆಐಎಡಿಬಿ

ಷರತ್ತುಗಳನ್ನು ಉಲ್ಲಂಘಿಸಿದ ಕೆಐಎಡಿಬಿ

ತಮ್ಮ ಅರ್ಜಿಯಲ್ಲಿ, ಎಸ್‌ಇಐಎಎ ಮತ್ತು ಕೆಎಸ್‌ಪಿಸಿಬಿಯಂತಹ ಇತರ ಸಂಸ್ಥೆಗಳ ಕ್ಲಿಯರೆನ್ಸ್ ಕಾನೂನುಬಾಹಿರ ಎಂದು ಅವರು ವಾದಿಸಿದ್ದಾರೆ. ಕ್ಲಿಯರೆನ್ಸ್ ನೀಡಲು ನಿಗದಿಪಡಿಸಿದ ಷರತ್ತುಗಳನ್ನು ಕೆಐಎಡಿಬಿ ಉಲ್ಲಂಘಿಸಿದೆ ಎಂದು ಅವರು ಹೇಳಿದ್ದರು. 10 ಎಕರೆ ಕೈಗಾರಿಕಾ ಪ್ರದೇಶದಲ್ಲಿ ಕೆಂಪು ವರ್ಗದ ಕೈಗಾರಿಕೆ ಸ್ಥಾಪನೆಗೆ ಬಳಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ಕಾರ್ಯಕರ್ತರು 2019ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Breaking; ಬೆಂಗಳೂರಿಗೆ ಅಮಿತ್ ಶಾ, ಬರಮಾಡಿಕೊಂಡ ಕಟೀಲ್Breaking; ಬೆಂಗಳೂರಿಗೆ ಅಮಿತ್ ಶಾ, ಬರಮಾಡಿಕೊಂಡ ಕಟೀಲ್

 ಆರೋಪ ಪರಿಶೀಲಿಸಲು ಎರಡು ವರದಿ

ಆರೋಪ ಪರಿಶೀಲಿಸಲು ಎರಡು ವರದಿ

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಇತ್ತೀಚೆಗೆ ಎಸ್. ಕೆ. ವಿಜಯಕುಮಾರ್ ಅವರ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ಆರೋಪಗಳನ್ನು ಪರಿಶೀಲಿಸಲು ರಚಿಸಲಾದ ಜಂಟಿ ಸಮಿತಿಯ ಸಂಶೋಧನೆಗಳನ್ನು ಎತ್ತಿಹಿಡಿದಿದೆ. ಎನ್‌ಜಿಟಿ ಆದೇಶದ ನಂತರ ರಚಿಸಲಾದ ಜಂಟಿ ಸಮಿತಿಯು ಅರ್ಜಿದಾರರ ಆರೋಪಗಳನ್ನು ಪರಿಶೀಲಿಸಲು ಎರಡು ವರದಿಗಳನ್ನು ಸಲ್ಲಿಸಿದೆ. ಇದು ಹಲವಾರು ಉಲ್ಲಂಘನೆಗಳನ್ನು ಕಂಡುಹಿಡಿದಿದೆ. ಆದರೆ ರಾಜ್ಯ ಸರ್ಕಾರದ 2003 ರ ಅಧಿಸೂಚನೆಯು ತಿಪ್ಪಗೊಂಡನಹಳ್ಳಿ ಜಲಾಶಯ ಕ್ಯಾಚ್‌ಮೆಂಟ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗೊತ್ತುಪಡಿಸಿಲ್ಲ ಎಂದು ಹೇಳಿದೆ.

 ಪರಿಸರ ಪರಿಹಾರ ನೀಡಲು ಸೂಚನೆ

ಪರಿಸರ ಪರಿಹಾರ ನೀಡಲು ಸೂಚನೆ

ನಿಯಮ ಉಲ್ಲಂಘನೆಗಳಲ್ಲಿ ಪರಿಸರ ತೆರವು ಮಾಡುವ ಮೊದಲು ಕೈಗೊಳ್ಳಲಾದ ನಿರ್ಮಾಣ ಚಟುವಟಿಕೆಗಳು, ಹಸಿರು ವಲಯ ಸ್ಥಾಪನೆಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸದಿರುವುದು ಕಂಡುಬಂದಿದೆ. ಇತರ ಕಡತಗಳ ವರದಿಗಳು ನಿಯಮ ಉಲ್ಲಂಘಿಸಿರುವುದು ಸೇರಿಸಿವೆ. ಮಾಲಿನ್ಯಕಾರರು ಪಾಲಿಸುವ ತತ್ವದ ಅಡಿಯಲ್ಲಿ ಸಮಿತಿಯು ಪರಿಸರ ಪರಿಹಾರವನ್ನು 1.53 ಕೋಟಿ ರೂ. ನೀಡುವಂತೆ ತಿಳಿಸಿದೆ.

 ನಾಲ್ಕು ಸದಸ್ಯರ ಜಂಟಿ ಸಮಿತಿ

ನಾಲ್ಕು ಸದಸ್ಯರ ಜಂಟಿ ಸಮಿತಿ

ಸರ್ಕಾರದ ಅಧಿಸೂಚನೆಯು ತಿಪ್ಪಗೊಂಡನಹಳ್ಳಿ ಜಲಾಶಯ ಕ್ಯಾಚ್‌ಮೆಂಟ್ ಪ್ರದೇಶವು ಪರಿಸರ ಸೂಕ್ಷ ಪ್ರದೇಶ ಅಲ್ಲ. ಕೈಗಾರಿಕೆಗಳನ್ನು ಸ್ಥಾಪಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿರುವುದರಿಂದ ಸಮಿತಿಯ ವರದಿಯನ್ನು ಹಸಿರು ನ್ಯಾಯ ಮಂಡಳಿ ಎತ್ತಿಹಿಡಿದಿದೆ. ಇದು ಉಲ್ಲಂಘನೆಗಳಿಗೆ ಪರಿಹಾರದ ಸಮಿತಿಯ ಲೆಕ್ಕಾಚಾರವನ್ನು ಎತ್ತಿಹಿಡಿದಿದೆ. ಜಲಾನಯನ ಪ್ರದೇಶದ ಜಲಮೂಲಗಳು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಎನ್‌ಜಿಟಿ, ಷರತ್ತುಗಳ ಮೇಲ್ವಿಚಾರಣೆಗಾಗಿ ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ನಾಲ್ಕು ಸದಸ್ಯರ ಜಂಟಿ ಸಮಿತಿಯನ್ನು ರಚಿಸಿದೆ.

Recommended Video

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಂಜು ಸ್ಯಾಮ್ಸನ್ ಗೆ ಮಾಡಿದ್ದು ಸರೀನಾ? *Cricket | OneIndia Kannada

English summary
The National Green Tribunal has fined KIADB Rs 1.5 crore for violating environmental norms at the Doddaballapur industrial area in the Thippagondanahalli Reservoir (TGR) catchment area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X