ಆರ್‌ಸಿಬಿ ಜೊತೆ ಈ ತಂಡ ಖರೀದಿಗೂ ಪ್ಲ್ಯಾನ್ ಹಾಕಿಕೊಂಡಿದ್ದ ವಿಜಯ್ ಮಲ್ಯ! RC ವಿಸ್ಕಿ ಮತ್ತು RCB
ಮದ್ಯ ದೊರೆ ವಿಜಯ್ ಮಲ್ಯ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ)ಯೊಂದಿಗೆ ಮತ್ತೊಂದು ತಂಡವನ್ನು ಖರೀದಿ ಮಾಡುವುದಕ್ಕೂ ಮುಂದಾಗಿದ್ದರು ಎನ್ನುವ ವಿಷಯ ಈಗ ವೈರಲ್ ಆಗುತ್ತಿದೆ. ಮದ್ಯದ ದೊರೆ ವಿಜಯ್ ಮಲ್ಯ ಅವರು ಆರ್‌ಸಿಬಿ ತಂಡವನ್ನು ಪ್ರಾರಂಭಿಕವಾಗ ಖರೀದಿ ಮಾಡಿದ್ದರು. ಇದಾದ ಮೇಲೆ ಅದು RC ವಿಸ್ಕಿ ಮತ್ತು RCB ಎನ್ನುವಂತೆ ಬದಲಾಗಿ ಹೋಗಿದ್ದೆಲ್ಲವೂ ಈಗ ಇತಿಹಾಸ.
ಆದರೆ ಐಪಿಎಲ್‌ನಲ್ಲಿ ವಿಜಯ್ ಮಲ್ಯ ಅವರು ಎರಡು ತಂಡಗಳನ್ನು ಖರೀದಿ ಮಾಡಬೇಕು ಎಂದು
ಕೊಂಡಿದ್ದರು ಅಂತ ಅವರೇ ಹೇಳಿದ್ದು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಾಜ್ ಶಮಾನಿ ಅವರ ಪಾಡ್‌ಕಾಸ್ಟ್‌ನಲ್ಲಿ ವಿಜಯ್ ಮಲ್ಯ ಅವರು ಹಲವು ವಿಚಾರಗಳನ್ನು ಹೇಳಿದ್ದಾರೆ. ಈ ಪಾಡ್ ಕಾಸ್ಟ್‌ನಲ್ಲಿ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನೀವು ಆರ್ ಸಿಬಿ ತಂಡವನ್ನು ಏಕೆ ಖರೀದಿಸಿದಿರಿ ಎಂಬ ಪ್ರಶ್ನೆಗೆ ವಿಜಯ್ ಮಲ್ಯ ಅವರು, ಯಾವುದೇ ಅಳುಕಿಲ್ಲದೆ ನನ್ನ ರಾಯಲ್ ಚಾಲೆಂಜ್ ವಿಸ್ಕಿ ಪ್ರಮೋಟ್ ಮಾಡೋಕೆ ಅಂತ ಉತ್ತರಿಸುತ್ತಾರೆ. ನೀವು ಶೋಕಿವಾಲ, flamboyant. ತೋರಿಕೆಗಾಗಿಯೋ ಅಥವಾ ಕ್ರೀಡಾಭಿಮಾನದಿಂದಲೋ RCB ತಂಡವನ್ನು ಖರೀದಿಸಲಿಲ್ಲವೆ ಎನ್ನುವ ಪ್ರಶ್ನೆಗೆ, ಇಲ್ಲ ರಾಯಲ್ ಚಾಲೆಂಜ್ ವಿಸ್ಕಿಯ ಮಾರ್ಕೆಟಿಂಗ್ ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಮಲ್ಯ ಹೇಳಿದ್ದಾರೆ.
ಮುಂದುವರಿದು ಕಿಂಗ್ ಫಿಷರ್ ಏರ್ ಲೈನ್ ಪ್ರಮೋಟ್ ಮಾಡಲು ಮತ್ತೊಂದು ತಂಡ ಖರೀದಿ ಮಾಡಬೇಕೆಂದಿದ್ದೆ ಆದರೆ ಅದಕ್ಕೆ ಲಲಿತ್ ಮೋದಿ ಅವಕಾಶ ನೀಡಲಿಲ್ಲ ಎನ್ನುತ್ತಾರೆ ಅಂತಲೂ ಹೇಳಿದ್ದಾರೆ ಮಲ್ಯ. ಮಲ್ಯ ಅಂದುಕೊಂಡಂತೆ ಆಗಿದ್ದರೆ, ಎರಡು ತಂಡಗಳನ್ನು ಖರೀದಿ ಮಾಡಬಹುದಾಗಿತ್ತು. ಆದರೆ ನಿಯಮದಲ್ಲಿ ಅವಕಾಶ ಇಲ್ಲದ್ದರಿಂದ ಅಥವಾ ಫಿಕ್ಸಿಂಗ್ ಇನ್ನೇನಾದರೂ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಅವರಿಗೆ ಎರಡು ತಂಡಗಳನ್ನು ಖರೀದಿ ಮಾಡುವಂತಹ ಅವಕಾಶ ಸಿಕ್ಕಿರಲಿಲ್ಲ.
ಈ ಬಗ್ಗೆ ಬರಹಗಾರ ಹರೀಶ್ ಗಂಗಾಧರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ರಾಜ್ ಶಮಾನಿ ಮತ್ತು ವಿಜಯ್ ಮಲ್ಯ ಅವರ podcast youtube ನಲ್ಲಿದೆ. ಪರದೇಶದಲ್ಲಿರುವ ವಿಜಯ್ ಮಲ್ಯರವರ ಗತಕಾಲದ ಗತ್ತು ಕಿಂಚಿತ್ತೂ ಕಡಿಮೆಯಾಗಿಲ್ಲ. ಅದರ ಸೂಚಕವೆಂಬಂತೆ ಅವರ ಕೋಣೆಯಲ್ಲಿನ ಟಿಪ್ಪು ಹುಲಿ ಮತ್ತು ಟೆಲಿಸ್ಕೋಪ್ ಎದ್ದುಕಾಣುತ್ತದೆ. ಉದ್ಯಮಿ ಮತ್ತು ಸರ್ಕಾರದ ನಡುವಿನ ಸಖ್ಯ ಅರಿಯಲು ಈ podcast ಸಹಾಯಕವಾಗಬಹುದು.
ರಾಜ್ ಶಮಾನಿ ತೀರಾ ಪ್ರೋಬಿಂಗ್ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬ ನಂಬಿಕೆ ನನಗಿಲ್ಲ.ಕೆಲ ಬಾರಿ ಯಾವುದೇ ಸಾಮಾಜಿಕ ಬದ್ಧತೆ ಇಲ್ಲದೆ ಇವರ podcast ನಲ್ಲಿ ಅಪ್ರಾಮಾಣಿಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಕೂಡ. ಆದರೂ ವಿಜಯ್ ಮಲ್ಯ ಎಪಿಸೋಡ್ ಒಮ್ಮೆ ನೋಡಬಹುದು.
ನನಗೆ ಈ ಕ್ಷಣಕ್ಕೆ ಪ್ರಸ್ತುತ ಅನಿಸಿದ್ದು ರಾಜ್ ಕೇಳಿದ RCB ಕುರಿತಾದ ಒಂದು ಪ್ರಶ್ನೆ. "ನೀವು ಆರ್ ಸಿಬಿ ತಂಡವನ್ನು ಏಕೆ ಖರೀದಿಸಿದಿರಿ" ಎಂಬ ಪ್ರಶ್ನೆ ವಿಜಯ್ ಮಲ್ಯ ಯಾವುದೇ ಅಳುಕಿಲ್ಲದೆ ನನ್ನ ರಾಯಲ್ ಚಾಲೆಂಜ್ ವಿಸ್ಕಿ ಪ್ರಮೋಟ್ ಮಾಡೋಕೆ ಅಂತ ಉತ್ತರಿಸುತ್ತಾರೆ. "ನೀವು ಶೋಕಿವಾಲ, flamboyant. ತೋರಿಕೆಗಾಗಿಯೋ ಅಥವಾ ಕ್ರೀಡಾಭಿಮಾನದಿಂದಲೋ RCB ಖರೀದಿಸಲಿಲ್ಲವೆ" ಎಂಬ ಪ್ರಶ್ನೆಗೆ, ಇಲ್ಲ ರಾಯಲ್ ಚಾಲೆಂಜ್ ವಿಸ್ಕಿಯ ಮಾರ್ಕೆಟಿಂಗ್ ಮಾತ್ರ ನನ್ನ ಉದ್ದೇಶವಾಗಿತ್ತು ಎಂದು ಮಲ್ಯ ಹೇಳುತ್ತಾರೆ!
ಮುಂದುವರಿದು ಕಿಂಗ್ ಫಿಷರ್ ಏರ್ ಲೈನ್ ಪ್ರಮೋಟ್ ಮಾಡಲು ಮತ್ತೊಂದು ತಂಡ ಖರೀದಿ ಮಾಡಬೇಕೆಂದಿದ್ದೆ ಆದ್ರೆ ಅದಕ್ಕೆ ಲಲಿತ್ ಮೋದಿ ಅವಕಾಶ ನೀಡಲಿಲ್ಲ ಎನ್ನುತ್ತಾರೆ ಮಲ್ಯ! ಅಂದು ಸುಮಾರು 112ಮಿಲಿಯನ್ ಡಾಲರ್ಸ್ ಗಳಿಗೆ (600-700 ಕೋಟಿ) RCB ತಂಡ ಖರೀದಿಸಿದ ಮೇಲೆ UB Groups ಭಾರಿ ಲಾಭ ಮಾಡಿದೆ. ಇಂದು ರಾಯಲ್ ಚಾಲೆಂಜ್ ವಿಸ್ಕಿ ಒಂದು established brand ಆಗಿದ್ದು RCB ತಂಡದಿಂದ ಎನ್ನುತ್ತಾರೆ ಮಲ್ಯ.
ಒಂದಾನೊಂದು ಕಾಲದಲ್ಲಿ ನಮ್ ಅಣ್ಣಾವ್ರು ತಾವು ನಟಿಸಿದ ಚಿತ್ರಗಳಲ್ಲಿ ಎಂದಿಗೂ ಹೆಂಡ, ಸಿಗರೇಟ್ ಮುಟ್ಟಲಿಲ್ಲ ಎಂದು ಹೇಳಿಕೊಳ್ಳುತ್ತಾ ಇದ್ದ ನಮ್ಮ ನಾಡಿನ ಜನರು, ಕನ್ನಡಿಗರೇ ಇಲ್ಲದ ಹೆಂಡ, ಬಿಕರಿ ಮಾಡುವ ಕಂಪನಿಯೊಂದರ ತಂಡವನ್ನು ಕರ್ನಾಟಕದ ತಂಡವೆಂದು ಅಪ್ಪಿಕೊಂಡು, ರಾಜ್ಯದ ಅತ್ಯುನ್ನತ ವೇದಿಕೆಯಲ್ಲಿ ಸನ್ಮಾನಿಸಿ, ಅದಕ್ಕಾಗಿ ಪ್ರಾಣ ಕಳೆದುಕೊಂಡಿದ್ದು ವಿಪರ್ಯಾಸ.
ಮತ್ತೊಂದು ವಿಷಯ. ನೂಕು ನುಗ್ಗಲಿನಲ್ಲಿ ಕಾಲ್ತುಳಿತಕ್ಕೆ ಹನ್ನೊಂದು ಮಂದಿ ಪ್ರಾಣ ಕಳೆದುಕೊಂಡಿದ್ದರಿಂದ ಐಪಿಎಲ್ ಸುದ್ದಿಯಲ್ಲಿದೆ. ಭಾರತದ ಪ್ರತಿ ಹಳ್ಳಿಯಲ್ಲಿಯೂ ಐಪಿಎಲ್ ಹೆಸರಲ್ಲಿ ಜೂಜು ಆಡಿ ಸಾಲ ಮಾಡಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಬಹುಶಃ ಎಂದಿಗೂ ಸುದ್ದಿಯಾಗುವುದಿಲ್ಲ ಅಂತ ಅವರು ಹೇಳಿದ್ದಾರೆ.
-
ಬೆಂಗಳೂರಲ್ಲಿ RCB ಪಂದ್ಯ: ಏ.15ರಂದು ಸ್ಟೇಡಿಯಂ ಸುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ -
RCB Vs LSG: ಬೆಂಗಳೂರಿನಲ್ಲಿ ಆರ್‌ಸಿಬಿ-ಎಲ್ಎಸ್ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB Playing 11 Prediction: ಎಲ್ಎಸ್ಜಿ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್ 11 ಭವಿಷ್ಯ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು












Click it and Unblock the Notifications