Video Viral: ಬೆಂಗಳೂರು ಲಾಲ್‌ಬಾಗ್‌ನಲ್ಲಿ ನೇಪಾಳಿ ಗುಂಪುಗಳ ಘರ್ಷಣೆ! ಕನ್ನಡಿಗರು ಆಕ್ರೋಶ
ಬೆಂಗಳೂರು, ಮಾರ್ಚ್ 16: ಬೆಂಗಳೂರಿನಾದ್ಯಂತ ಕಳೆದ ಶುಕ್ರವಾರ (ಮಾರ್ಚ್ 14) ಹೋಳಿ ಆಚರಿಸಲಾಯಿತು. ಈ ವೇಳೆ ಲಾಲ್‌ಬಾಗ್‌ನಲ್ಲಿ ನೇಪಾಳಿ ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ ಉಂಟಾಗಿದೆ. ಹಬ್ಬದ ಗುಂಗಿನಲ್ಲಿದ್ದ ಅಸಂಖ್ಯಾತ ಜನರು ಲಾಲ್‌ಬಾಗ್ ಉದ್ಯಾನದಲ್ಲಿ ಸೇರಿದ್ದರು. ಈ ಘರ್ಷಣೆಯಿಂದಾಗಿ ಉದ್ಯಾನದಲ್ಲಿ ಸಾರ್ವಜನಿಕರಿಗೆ ಭದ್ರತೆ, ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಜಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಲಾಲ್‌ಬಾಗ್ ಉದ್ಯಾನದಲ್ಲಿ ಶುಕ್ರವಾರ ಸಂಜೆ ಹೋಳಿ ಆಚರಣೆ ನಡೆದಿತ್ತು. ಈ ವೇಳೆ ನೇಪಾಳಿ ಮೂಲದವರು ಎರಡು ಗುಂಪುಗಳು ಹಿಂಸಾತ್ಮಕವಾಗಿ ಘರ್ಷಣೆ ನಡೆದರು.ಇದು ಉದ್ಯಾನಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರಲ್ಲಿ ಭಯ ಉಂಟಾಗಲು ಕಾರಣವಾಯಿತು.

ಉದ್ಯಾನದ ಬಂಡೆ ಮೇಲೆ ಕ್ಷುಲ್ಲಕ ಕಾರಣಕ್ಕೇ ನೇಪಾಳಿ ಮೂಲಕ ಎರಡು ಗುಂಪುಗಳ ಮಧ್ಯೆ ಜಗಳ, ಮಾತಿನ ಚಕಮಕಿ ನಡೆಯಿತು. ಒಂದು ರೀತಿಯಲ್ಲಿ ಪೂರ್ಣ ಪ್ರಮಾಣದ ಗ್ಯಾಂಗ್ ಜಗಳಕ್ಕೆ ಕಂಡು ಬಂದಿದೆ. ಕೂಡಲೇ ಪೊಲೀಸರು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಹತೋಟಿಗೆ ತಂದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಆಗಿದೆ.
ಹೋಳಿ ಹಬ್ಬಕ್ಕೆಂದು ಸೇರಿದವರ ಮಧ್ಯೆ ಘರ್ಷಣೆ
ಸ್ಥಳದಲ್ಲಿದ್ದವರ ಪ್ರಕಾರ, ಹೋಳಿ ಹಬ್ಬದಾಚರಣೆಗೆ ಈ ಎರಡು ಗುಂಪುಗಳು ಜೊತೆಗೂಡಿದ್ದಾರೆ. ಲಾಲ್‌ಬಾಗ್ ಬಂಡೆಯ ಮೇಲೆ ಅವರು ಸೇರಿದ್ದ ವೇಳೆ ದಿಢೀರ್ ಘರ್ಷಣೆ ನಡೆದಿದೆ. ಬಣ್ಣಗಳನ್ನು ವಿನಿಯಮ ಮಾಡಿಕೊಂಡು ಪರಸ್ಪರ ಶುಭ ಕೋರಿದ್ದಾರೆ. ನಂತರ ಕೋಲು, ದೊಣ್ಣೆಗಳಿಂದ ಒಬ್ಬರನ್ನೊಬ್ಬರು ಬೆನ್ನಟ್ಟಿ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಬಾಟಲಿಗಳನ್ನು ಎಸೆದಿದ್ದು ಕಂಡು ಬಂದಿದೆ ಎಂದು ಅಲ್ಲಿದ್ದವರು ತಿಳಿಸಿದ್ದಾರೆ. ಇದರ ವಿಡಿಯೋ ಅನ್ನು ಎಕ್ಸ್‌ಖಾತೆಯಲ್ಲಿ @PrishaSargam ಎಂಬುವವರು ಹಂಚಿಕೊಂಡಿದ್ದಾರೆ.
This isn’t Bihar or UP—this is Namma Bengaluru, and we’re doomed. Once a garden city, now turned into a city of gangsters. Immigrants have disturbed its peace. The only solution?
— Dr Prisha Sargam (@PrishaSargam) March 15, 2025
Inner Line Permit. pic.twitter.com/6n2MO6eLTe
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದ ಓಡೋಡಿ ಬಂದ ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿ ಕೂಡಲೇ ಕರೆ ಮಾಡಿ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಕೂಡಲೇ ಹತ್ತಿರದಲ್ಲೇ ಇದ್ದ ಕೆಎಸ್‌ಆರ್‌ಪಿ ಘಟಕದ ಸದಸ್ಯರು ಜೊತೆಗೆ ಧಾವಿಸಿದರು. ಎರಡು ಗುಂಪುಗಳ ಮಾರಾಮಾರಿಯನ್ನು ಹತೋಟಿಗೆ ತಂದರು. ಪ್ರಕರಣ ಠಾಣೆಯಲ್ಲಿ ದಾಖಲಾದ ಬಗ್ಗೆ ಮಾಹಿತಿ ಇಲ್ಲ.
ಘಟನೆ ಬಗ್ಗೆ ನೆಟ್ಟಿಗರ ಆಕ್ರೋಶ
ಸದ್ಯ ಘಟನೆಯಲ್ಲಿ ಯಾವುದೇ ಹಿಂಸಾತ್ಮಕ ಕೃತ್ಯಗಳು ನಡೆದಿಲ್ಲ ಎಂದು ವರದಿ ಆಗಿದೆ. ಯಾರಿಗೂ ಗಾಯಗಳು ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಡಿಯೋದಲ್ಲಿ ಇದೊಂದು ಹಿಂಸಾತ್ಮಕ ಘರ್ಷಣೆ ಎಂದು ಭಾಸವಾಗುತ್ತದೆ. ಈ ವಿಡಿಯೋ ನೋಡಿದ ಬೆಂಗಳೂರಿಗರು, ಕನ್ನಡಿಗರು ಘರ್ಷಣೆ ಕುರಿತು ಕೆಂಡವಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದರಿಂದ ಉದ್ಯಾನಕ್ಕೆ, ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದಾಗ 'ಲಾಲ್‌ಬಾಗ್ ಸಿಬ್ಬಂದಿ ಏನು ಮಾಡುತ್ತಿದ್ದರು?. ಜನರು ಪೊಲೀಸರಿಗೆ ಕರೆ ಮಾಡುವ ಬದಲು ವಿಡಿಯೋ ಮಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications