Bengaluru Road Rage: ಕಾರು ಅಡ್ಡಗಟ್ಟಿ ದುಷ್ಕರ್ಮಿಗಳ ದಾಳಿ, ಮಗು ಆಸ್ಪತ್ರೆಗೆ ದಾಖಲು: ಸುರಕ್ಷತೆ ಬಗ್ಗೆ ಪ್ರಶ್ನೆ
ಬೆಂಗಳೂರು, ನವೆಂಬರ್ 01: ರಾಜ್ಯ ರಾಜಧಾನಿ ಬೆಂಗಳೂರು ರಾತ್ರಿ ಒಬ್ಬಂಟಿ ಓಡಾಡುವವರಿಗೆ, ಕುಟುಂಬಗಳಿಗೆ ಎಷ್ಟು ಸುರಕ್ಷತೆ ಎಂಬುದಕ್ಕೆ ಇಲ್ಲಿ ಉತ್ತರವಿಲ್ಲ. ಕಾರಣ ದಿನದಿಂದ ದಿನಕ್ಕೆ ರಸ್ತೆಯಲ್ಲಿ ಅಡ್ಡಗಟ್ಟಿ, ಪುಂಡಾಟಿಕೆ ಮೆರೆಯುವುದು, ದಾಳಿ, ಹಿಂಸೆ, ದೌರ್ಜನ್ಯ ಹಾಗೂ ಹಲ್ಲೆಯಂತಹ ಘಟನೆಗಳು ಮರುಕಳುಹಿಸುತ್ತಲೇ. ಇದೀಗ ಎಲ್ಲರೂ ದೀಪಾವಳಿ ಸಡಗರದಲ್ಲಿದ್ದರೆ, ಇತ್ತ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬದ ಮೇಲೆ ಹಲ್ಲೆ ನಡೆದಿದ್ದು, ಮಗು ಆಸ್ಪತ್ರೆಗೆ ದಾಖಲಾಗಿದೆ. ಮಹಿಳೆ ಚೀರಾಟದ ವಿಡಿಯೋ ವೈರಲ್ ಆಗಿದ್ದು, ಇದು ಎಂತಹವರ ಎದೆಯನ್ನು ನಡುಗಿಸಿಬಿಡುವಂತಿದೆ.
ಹೌದು, ಬುಧವಾರ ರಾತ್ರಿ ಬೆಂಗಳೂರಿನ ಕಸವನಹಳ್ಳಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬವೊಂದನ್ನು ದುಷ್ಕರ್ಮಿಗಳ ಗುಂಪು ಅಡ್ಡಗಟ್ಟಿ ತಡೆದಿದೆ. ಚಾಲಕನನ್ನು ಕೆಳಗೆ ಇಳಿಯುವಂತೆ ಅವರು ಒತ್ತಾಯಿಸಿದ್ದಾರೆ. ಕಿಟಕಿ ಗ್ಲಾಜು ಇಳಿಸದೇ, ಅವರ ಮಾತಿಗೆ ತಲೆ ಕೆಡಿಸಿಕೊಳ್ಳದೇ ತೆರಳಲು ಮುಂದಾದಾಗ ಕಾರಿನ ಕಿಟಕಿ ಗ್ಲಾಜು ಒಡೆದು ದರ್ಪ ಮರೆದಿದ್ದಾರೆ.

ಈ ಆಘಾತಕಾರಿ ಘಟನೆಯ ವಿಡಿಯೋವನ್ನು ಅನೂಪ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.
ಸ್ಥಳದಲ್ಲಿ ನಡೆದಿದ್ದೇನು? ಕಾರಣವೇನು?
ರಾತ್ರಿ ವೇಳೆ ಕಾರನ್ನು ಅಡ್ಡಗಟ್ಟಿ ಬೈಯುತ್ತಲೇ ಕಾರಿನ ಎದುರಿಗೆ ಬಂದ ಕಿಡಿಗೇಡಿಗಳು ಕಾರಿನಿಂದ ಇಳಿಯುವಂತೆ ಆವಾಜ್ ಹಾಕಿದ್ದಾರೆ. ಅಷ್ಟೋತ್ತಿಗಾಗಲೇ ಒಳಗಿದ್ದ ಮಹಿಳೆಗೆ ಭಯ ಶುರುವಾಗಿದೆ. ಕೂಡಲೇ ಅವರು ನಮ್ಮಿಂದ ತಪ್ಪಾಗಿಲ್ಲ ಎನ್ನುತ್ತಲೇ ಕಾರು ಚಲಾಯಿಲು ಮುಂದಾಗಿದ್ದಾರೆ. ಬೇಡಿಕೆಯಂತೆ ಕಾರು ನಿಲ್ಲಿಸದ ಕಾರಣಕ್ಕೆ ದುಷ್ಕರ್ಮಿಗಳು ಕಾರಿಗೆ ಕಲ್ಲು ಎಸೆದಿದ್ದಾರೆ. ಕಾರಿನ ಗ್ಲಾಜು ಒಡೆದಿದೆ. ಒಳಗಿದ್ದ ಮಗು ಗಾಯಗೊಂಡಿದೆ. ಕಾರಿನ ಗ್ಲಾಜು ಒಡೆದ ಶಬ್ದ ಮಹಿಳೆ ಹೆದರಿ ಕಿರುಚಾಡುವ , ಆಡಿಯೋ, ಘಟನೆಯ ದೃಶ್ಯಗಳನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.

ಅನೂಪ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಕಸವನಹಳ್ಳಿ ಬಳಿ ರೌಡಿಗಳು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಹೆದರಿಸಿದ್ದಲ್ಲದೇ, ನನ್ನ ಕಾರಿಗೆ ಕಲ್ಲು ಎಸೆದರು ಕಿಟಕಿ ಒಡೆದು ಹಲ್ಲೆಗೆ ಮುಂದಾಗಿದ್ದಾರೆ. ನನ್ನ ಮಗುಗೆ ಗಾಯವಾಗಿ, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಕಾರಿನೊಳಗಿರುವ ಕುಟುಂಬಸ್ಥರಿಗೂ, ಹೊರಗಿದ್ದ ದುಷ್ಕಮಿಗಳ ಮಧ್ಯೆ ನಡೆದ ವಾಗ್ವಾದ ಗೊತ್ತಾಗುತ್ತದೆ. ಆದರೆ ಏಕೆ ದುಷ್ಕಮಿಗಳು ದಾಳಿ ನಡೆಸಿದ್ದು ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
— Anoop (@AnoopKalekattil) October 30, 2024
ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ, ಬೆಂಗಳೂರಿನಲ್ಲಿ ನಾಗರಿಕರ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ನೆಟ್ಟಿಗರು ಇಂತಹ ಕಿಡಿಗೇಡಿಗಳು, ರೌಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಬಳಕೆದಾರರು ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಒಬ್ಬ ಬಳಕೆದಾರನು ಹೇಳಿದನು, 'ದೇವರೇ! ನಾನು ಈ ಪ್ರದೇಶದ ಹತ್ತಿರ ಓಡಾಡುತ್ತಿರುತ್ತೇನೆ. ರಾತ್ರಿಯಲ್ಲಿ ಪೊಲೀಸರು ಈ ಭಾಗದಲ್ಲಿ ಗಸ್ತು ತಿರುಗುವುದನ್ನೇ ಇಲ್ಲಿನವರು ನೋಡಿಯೇ ಇಲ್ಲ. ಆದಷ್ಟು ಇಂತಹ ಘಟನೆಗಳು ಆಗದಂತೆ ಕ್ರಮವಹಿಸುವುದು ಅಗತ್ಯವಿದೆ' ಎಂದು ಕಾಮೆಂಟ್ ಹಾಕಿದ್ದಾರೆ.
ನಗರದಲ್ಲಿ ಇಂತಹ ಘಟನೆಗಳು ಆಗಾಗ ವರದಿ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸರ್ಜಾಪುರ ರಸ್ತೆಯಲ್ಲಿ ಇಂತಹ ಘಟನೆಗಳು ಆಗಿದ್ದಾಗ್ಗೆ ನಡೆಯುತ್ತಿವೆ. ಕಸವನಹಳ್ಳಿ, ದೊಡ್ಡಕನ್ನೇಲಿ ಮತ್ತು ಕೈಕೊಂಡ್ರಹಳ್ಳಿ ಸುತ್ತಮುತ್ತಲಿನ ಪ್ರದೇಶಳಲ್ಲಿ ನಡೆಯುತ್ತಿವೆ. ಈ ಕುರಿತು ನಗರದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.












Click it and Unblock the Notifications