Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಬೆತ್ತಲೆ ಓಡಾಡಿದ ಯುವತಿ ವಿಡಿಯೋ ವೈರಲ್: ಬಿಬಿಎಂಪಿಯಿಂದ ಪಿಜಿಗಳಿಗೆ ಮಹತ್ವದ ಸೂಚನೆ!

ಬೆಂಗಳೂರು ಮೇ 09: ಬೆಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆಯೇ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡಿದ ಘಟನೆ ಈಚೆಗೆ ಇಲ್ಲಿನ HSR ಬಡಾವಣೆಯಲ್ಲಿ ನಡೆದಿತ್ತು. ಇದೀಗ ಈ ಘಟನೆಯ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ ದೇಶ - ವಿದೇಶದಿಂದ ಬರುವ ಕೆಲವು ಯುವತಿಯರು ಮನಸೋಇಚ್ಛೆ ವರ್ತಿಸುತ್ತಿದ್ದು. ಇದಕ್ಕೆ ಕಡಿವಾಣ ಹಾಕುವುದಕ್ಕೆ ಬಿಬಿಎಂಪಿಯು ಮುಂದಾಗಿದೆ.

ಹೌದು ಮಹಿಳೆ ಬೆತ್ತಲೆಯಾಗಿ ಓಡಾಡಿದ ಘಟನೆಯ ನಂತರ ಬೆಂಗಳೂರಿನಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗಿವೆ.

Video of a young woman walking naked in Bengaluru goes viral BBMP issues important warning to PGs

ಬೆಂಗಳೂರಿನಲ್ಲಿ ಈಚೆಗೆ ಯುವತಿಯೊಬ್ಬಳು ವಿಚಿತ್ರವಾಗಿ ವರ್ತಿಸಿದ್ದು ವರದಿಯಾಗಿತ್ತು. ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮಹಿಳೆ ಬೆತ್ತಲೆಯಾಗಿ ಓಡಾಡಿದ್ದಳು. ಇದನ್ನು ನೋಡಿದ್ದ ಜನ ಏನ್ರಿ ಇದು ಬೆಂಗಳೂರಿನಲ್ಲಿ ಈ ರೀತಿ ನಡೆಯುತ್ತಿದೆ ಎಂದು ಶಾಕ್‌ಗೆ ಒಳಗಾಗಿದ್ದರು. ಇದೀಗ ಈ ರೀತಿಯ ಅಸಭ್ಯ ವರ್ತನೆಗೆ ಬ್ರೇಕ್‌ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಪಿಜಿಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದು ಅವುಗಳಿಗೆ ಬ್ರೇಕ್‌ ಹಾಕುವುದಕ್ಕೆ ಹಾಗೂ ಡ್ರೆಸ್ ನಿಗದಿ ಮಾಡುವುದಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿರುವ ಅನಧಿಕೃತ ಪಿಜಿಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಈಗಾಗಲೇ ಬೆಂಗಳೂರಿನ 200ಕ್ಕೂ ಹೆಚ್ಚು ಪಿಜಿಗಳಿಗೆ ಅಂತಿಮ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಈ ಪಿಜಿಗಳಿಗೆ ಡ್ರೆಸ್ ಕೋಡ್‌ ನಿಗದಿ ಮಾಡುವುದಕ್ಕೂ ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ನಗರದಲ್ಲಿ ಈಚೆಗೆ ಯುವತಿಯೊಬ್ಬಳು ಬೆತ್ತಲೆಯಾಗಿ ಓಡಾಡಿದ್ದಳು. ಇದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಈ ಭಾಗದಲ್ಲಿ ಯುವತಿ ಅಸಭ್ಯವಾಗಿ ವರ್ತಿಸುತ್ತಿದ್ದಾಳೆ ಎನ್ನುವ ದೂರು ಸಹ ಇದೇ ಸಂದರ್ಭದಲ್ಲಿ ಕೇಳಿ ಬಂದಿತ್ತು. ಈ ವಿಡಿಯೋ ಹಳೆಯದು ಎಂದು ಹೇಳಲಾಗಿತ್ತು. ಆದರೆ, ಆ ಯುವತಿ ಅಸಭ್ಯವಾಗಿ ವರ್ತಿಸುವುದು ಕಡಿಮೆಯಾಗಿರಲಿಲ್ಲ. ಜನ ದೂರು ನೀಡಿದ್ದು ಇದೀಗ ಪಿಜಿಗಳಲ್ಲಿರುವವರಿಗೆ ಕೆಲವೊಂದು ರೂಲ್ಸ್‌ ಜಾರಿ ಮಾಡಲು ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ News 18 ವರದಿ ಮಾಡಿದೆ.

ಈ ರೀತಿಯ ಪಿ.ಜಿಗಳಿಗೆ ಎಚ್ಚರಿಕೆ: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪಿಜಿಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಕೆಲವೊಂದು ಕಠಿಣ ನಿಯಮಗಳನ್ನು ಅನುಸರಿಸುವಂತೆ ಸೂಚನೆ ನೀಡಿತ್ತು. ಇದೀಗ ಬೆಂಗಳೂರಿನಲ್ಲಿ ಅನಧಿಕೃತ ಪಿಜಿಗಳು ಹಾಗೂ ನಿಯಮಗಳನ್ನು ಅನುಸರಿಸದೆ ಇರುವವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಪಾಲಿಕೆ ಮುಂದಾಗಿದೆ.

ಬೆಂಗಳೂರಿನಲ್ಲಿ 10,000 ಸಾವಿರಕ್ಕೂ ಹೆಚ್ಚು ಪಿಜಿಗಳಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಕಾರ ಬೆಂಗಳೂರಿನಲ್ಲಿ 4456 ಪಿಜಿಗಳಿವೆ. ಇದರಲ್ಲಿ 1800 ಅನಧಿಕೃತ ಪಿಜಿಗಳು ಎಂದು ಪರಿಗಣಿಸಲಾಗಿದೆ. ಇನ್ನು ನೂರಾರು ಪಿಜಿಗಳ ಮಾಲೀಕರು ಪರವಾನಗಿ ಪಡೆದಿಲ್ಲ. ಮಹಿಳಾ ಪಿಜಿಗಳಿಗೆ ಭದ್ರತೆ ಇಲ್ಲ ಹಾಗೂ ಯುವತಿಯರಿಗೆ ಡ್ರೆಸ್‌ ಕೋಡ್ ಇಲ್ಲ. ಹೀಗಾಗಿ ಡ್ರೆಸ್ ಕೋಡ್‌ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+