ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಮಧ್ಯೆ ವಿಶೇಷ ಮೈಲಿಗಲ್ಲು ಸಾಧಿಸಿದ ವಾಣಿವಿಲಾಸ ಆಸ್ಪತ್ರೆ

|
Google Oneindia Kannada News

ಬೆಂಗಳೂರು, ಜುಲೈ 17: ಕೊರೊನಾ ವೈರಸ್ ಹಾವಳಿಯಲ್ಲಿ ಇತರೆ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಅನೇಕ ಘಟನೆಗಳು ವರದಿಯಾಗಿವೆ. ಪ್ರಮುಖ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗಳಲ್ಲು ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಇದೆ.

Recommended Video

Bengaluru Lockdown ಮುಂದಿನ ವಾರವೂ ಇರುತ್ತಾ ? | Oneindia Kannada

ಇಂತಹ ಸಂಕಷ್ಟದ ಸನ್ನಿವೇಶದಲ್ಲೂ ಬೆಂಗಳೂರಿನ ವಾಣಿ ವಿಲಾಸ ಮತ್ತು ವಿಕ್ಟೋರಿಯಾ ಆಸ್ಪತ್ರೆ ವಿಶೇಷವಾದ ಮೈಲಿಗಲ್ಲು ಸಾಧಿಸಿದೆ.

ಮಂಗಳೂರು; ಆಸ್ಪತ್ರೆ ಗೇಟ್ ಮುರಿದು ಕೊರೊನಾ ಸೋಂಕಿತ ಪತ್ನಿ, ಮಗು ಕರೆದೊಯ್ದ ಪತಿಮಂಗಳೂರು; ಆಸ್ಪತ್ರೆ ಗೇಟ್ ಮುರಿದು ಕೊರೊನಾ ಸೋಂಕಿತ ಪತ್ನಿ, ಮಗು ಕರೆದೊಯ್ದ ಪತಿ

ಹೌದು, ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವಿಕ್ಟೊರಿಯಾ ಆಸ್ಪತ್ರೆ 100 ಜನ ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿದೆ. 100ನೇ ಸೋಂಕಿತ ಗರ್ಭಿಣಿ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಪೂರೈಸುವ ಮೂಲಕ ಆಸ್ಪತ್ರೆ ವೈದ್ಯರು ಈ ಕ್ಷಣವನ್ನು ಸಂಭ್ರಮಿಸಿದ್ದಾರೆ.

ಈ ಬಗ್ಗೆ ಆಸ್ಪತ್ರೆ ಹಾಗೂ ವೈದ್ಯರನ್ನು ಶ್ಲಾಘಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ''ಕೋವಿಡ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವಿಕ್ಟೊರಿಯಾ ಆಸ್ಪತ್ರೆ ಈ ಸಂದರ್ಭದಲ್ಲಿ 100ನೇ ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಪೂರೈಸುವ ಮೂಲಕ ಇನ್ನೊಂದು ವಿಶೇಷ ಮೈಲಿಗಲ್ಲು ಸಾಧಿಸಿದೆ. ಇದಕ್ಕೆ ಶ್ರಮಿಸಿದ ವಿಕ್ಟೊರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆಯ ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗೆ ನನ್ನ ಅಭಿನಂದನೆಗಳು' ಎಂದಿದ್ದಾರೆ.

'ಮಕ್ಕಳಿಗೆ ಸೋಂಕು ತಗಲದಂತೆ ಎಚ್ಚರ ವಹಿಸಿ ಈವರೆಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಸುಮಾರು 350 ಕೋವಿಡ್ ಸೋಂಕಿತ ಗರ್ಭಿಣಿ ಮಹಿಳೆಯರಿಗೆ ವಿಕ್ಟೊರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ಪ್ರಕರಣಗಳನ್ನು ಹೊರತುಪಡಿಸಿ ಎಲ್ಲಾ ನವಜಾತ ಶಿಶುಗಳಿಗೂ ಕೋವಿಡ್ ನೆಗಟಿವ್ ಬಂದಿದ್ದು ತಾಯಂದಿರು- ಶಿಶುಗಳು ಆರೋಗ್ಯವಾಗಿದ್ದರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಮಾಹಿತಿ ನೀಡಿದ್ದಾರೆ.

Victoria Hospital has successfully delivered 100 Covid-19 infected pregnant women

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಂಪೂರ್ಣವಾಗಿ ಕೊವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚಿಗಷ್ಟೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯ ನಿರ್ವಹಣೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

English summary
Victoria and vani vilas Hospital has successfully delivered 100 Covid-19 infected pregnant women. Minister Dr sudhakar appreciated to the doctors work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X