• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆರ್. ಅಶೋಕ ಸಭೆಯಲ್ಲಿದ್ದ ವೈದ್ಯರಿಗೆ ಕೋವಿಡ್ - 19 ಸೋಂಕು

|
Google Oneindia Kannada News

ಬೆಂಗಳೂರು, ಜುಲೈ 01 : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 11 ನರ್ಸ್, ಐವರು ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ ಒಬ್ಬರು ವೈದ್ಯರು ಸಚಿವ ಆರ್. ಅಶೋಕ ಜತೆ ಜೂನ್ 27ರಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಂದಾಯ ಸಚಿವ ಆರ್. ಅಶೋಕ, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾಥ್ ಜೂನ್ 27ರಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ವೈದ್ಯರ ಜೊತೆ ಸಭೆ ನಡೆಸಿದ್ದರು, ಒಟ್ಟಿಗೆ ಊಟ ಸವಿದಿದ್ದರು.

ವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ; ಆರ್. ಅಶೋಕ ದಿಢೀರ್ ಭೇಟಿವಿಕ್ಟೋರಿಯಾ ಆಸ್ಪತ್ರೆ ಅವ್ಯವಸ್ಥೆ; ಆರ್. ಅಶೋಕ ದಿಢೀರ್ ಭೇಟಿ

ವಿಕ್ಟೋರಿಯಾ ಆಸ್ಪತ್ರೆ ವ್ಯವಸ್ಥೆಗಳ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಆರ್. ಅಶೋಕ ದಿಢೀರ್ ಭೇಟಿ ಕೊಟ್ಟಿದ್ದರು. ಕೊರೊನಾ ವೈರಸ್ ಸೋಂಕಿತ ರೋಗಿಗಳಿಗೆ ನೀಡುವ ಮಧ್ಯಾಹ್ನದ ಊಟವನ್ನು ಪರಿಶೀಲಿಸಿ, ಅದನ್ನು ಸೇವಿಸಿದ್ದರು.

ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್ ಬೆಂಗಳೂರು; ಮಲ್ಲೇಶ್ವರದಲ್ಲಿ ವ್ಯಾಪಾರಿಗಳಿಂದ ಲಾಕ್ ಡೌನ್

ಆಸ್ಪತ್ರೆಯ 11 ನರ್ಸ್, 5 ಸ್ನಾತಕೋತ್ತರ ಪಧವೀಧರ ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದನ್ನು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಇಬ್ಬರು ವೈದ್ಯರು ಈಗಾಗಲೇ ಕ್ವಾರಂಟೈನ್‌ನಲ್ಲಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ರೋಗಿ ಆತ್ಮಹತ್ಯೆ

ಸಚಿವ ಆರ್. ಅಶೋಕ ಮಂಗಳವಾರ ಹಾಸನಕ್ಕೆ ಭೇಟಿ ನೀಡಿದ್ದರು. ಜಿಲ್ಲಾಡಳಿತದ ಜೊತೆ ಸಭೆ ನಡೆಸಿದ್ದರು. ಸದ್ಯದ ಮಾಹಿತಿ ಪ್ರಕಾರ ಅವರು ಜುಲೈ 3ರ ತನಕ ಬೆಂಗಳೂರಿಗೆ ಆಗಮಿಸುವುದಿಲ್ಲ. ಪರೀಕ್ಷಾ ವರದಿ ಬರುವ ತನಕ ಐಸೋಲೇಷನ್‌ನಲ್ಲಿ ಇರಲಿದ್ದಾರೆ.

ಯಲಹಂಕ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್. ಆರ್. ವಿಶ್ವನಾತ್ ಸ್ವ್ಯಾಬ್ ಪರೀಕ್ಷೆಗೆ ಒಳಗಾಗಲಿದ್ದಾರೆ. ವರದಿ ಬರುವ ತನಕ ಹೋಂ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ದಿನವೇ ಆರ್. ಅಶೋಕ ಮತ್ತು ಎಸ್. ಆರ್. ವಿಶ್ವನಾಥ್ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರ ಯಡಿಯೂರಪ್ಪ ಯಾವುದೇ ಸಭೆಗಳನ್ನು ನಡೆಸುವುದಿಲ್ಲ.

English summary
Revenue minister of Karnataka R. Ashok visited the Victoria hospital, Bengaluru on June 27, 2020. Minister chaired meeting with doctors. One of the doctor now tested positive for Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X