• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಆರ್‌ ಮಾರ್ಕೆಟ್ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ

|

ಬೆಂಗಳೂರು, ಡಿಸೆಂಬರ್ 18: ಮೈಸೂರು ರಸ್ತೆಯ ಕೆಆರ್‌ ಮಾರ್ಕೆಟ್ ಮೇಲ್ಸೇತುವೆಯಲ್ಲಿ ಡಾಂಬರೀಕರಣ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮೈಸೂರು ರಸ್ತೆಯ ಬಾಲಗಂಗಾಧರನಾಥಸ್ವಾಮೀಜಿ ಮೇಲ್ಸೇತುವೆ ಮೇಲೆ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ಪಡೆಯಲು ಬಿಬಿಎಂಪಿ ಟೆಕ್ಕಿಟಾರ್ ಮೊರೆ ಹೋಗಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ

ಬೆಂಗಳೂರಿನ ಪ್ರಥಮ ಮೇಲ್ಸೇತುವೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಮೇಲ್ಸೇತುವೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿರುವ ಪರಿಣಾಮ, ನಿರಂತರವಾಗಿ ಗುಂಡಿ ಸಮಸ್ಯೆ ಕಾಡುತ್ತಿದ್ದು, ಸಾವು-ನೋವು ಪ್ರಕರಣಗಳಿಗೆ ಸಾಕ್ಷಿಯಾಗಿದೆ.

ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ

ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ

ಈಗಾಗಲೇ ಮೇಲ್ಸೇತುವೆ ಕಾಮಗಾರಿಯನ್ನು 2014ರಲ್ಲಿ ಆರ್‌ಟ್ರೆ ಇನ್‌ಫ್ರಾ ಸ್ಟ್ರಕ್ಚರ್ ಸಂಸ್ಥೆಗೆ ವಹಿಸಲಾಗಿತ್ತು. ಈ ವೇಳೆ ಮೇಲ್ಸೇತುವೆಯನ್ನು 5 ವರ್ಷ ನಿರ್ವಹಿಸುತ್ತಿರುವ ಜವಾಬ್ದಾರಿಯನ್ನು ಕೂಡ ಸಂಸ್ಥೆಗೆ ನೀಡಲಾಗಿತ್ತು. ಆದರೆ ಸಂಸ್ಥೆ ಟೆಂಡರ್ ಷರತ್ತುಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಟೆಂಡರ್ ರದ್ದುಪಡಿಸಿರುವ ಅಧಿಕಾರಿಗಳು 11.13 ಲಕ್ಷ ರೂ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಕಾಮಗಾರಿ ಎಲ್ಲಿಂದ ಆರಂಭ?

ಕಾಮಗಾರಿ ಎಲ್ಲಿಂದ ಆರಂಭ?

ಕಾಮಗಾರಿ ಮೊದಲು ಕೆಆರ್ ಮಾರುಕಟ್ಟೆಯಿಂದ ಮೈಸೂರು ರಸ್ತೆಯ ಕಡೆಗೆ ಹೋಗುವ ಪಥದಲ್ಲಿ ದುರಸ್ತಿ ನಡೆಯಲಿದೆ. ಅದರಂತೆ ರಾಯನ್ ವೃತ್ತದವರೆಗಿನ ಮೇಲ್ಸೇತುವೆಯ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ನಂತರದಲ್ಲಿ ಮುಚ್ಚಲಾಗುತ್ತದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಮೇಲ್ಸೇತುವೆ ಒಂದು ಭಾಗದಲ್ಲಿ ಸಂಚಾರ ನಿಷೇಧ

ಮೇಲ್ಸೇತುವೆ ಒಂದು ಭಾಗದಲ್ಲಿ ಸಂಚಾರ ನಿಷೇಧ

ಮುಂದಿನ 10 ತಿಂಗಳಲ್ಲಿ ಮುಂಬೈನಿಂದ ಟೆಕ್ಕಿಕಾರ್ ಶೀಟ್‌ಗಳು ಗುತ್ತಿಗೆದಾರರಿಗೆ ಲಭ್ಯವಾಗಲಿದ್ದು ಕಾಮಗಾರಿ ಆರಂಭವಾಗಲಿದೆ. ಕಾಮಗಾರಿಗಾಗಿ ಮೇಲ್ಸೇತುವೆ ಒಂದು ಭಾಗದಲ್ಲಿ ಸಂಚಾರ ನಿಷೇಧಿಸುವುದರಿಂದ ತೊಂದರೆ ಅನುಭವಿಸಬೇಕಾಗುತ್ತದೆ.

ಯಾವ್ಯಾವ ಭಾಗಕ್ಕೆ ತೊಂದರೆ

ಯಾವ್ಯಾವ ಭಾಗಕ್ಕೆ ತೊಂದರೆ

ಒಂದು ಭಾಗದಲ್ಲಿ ಸಂಚಾರ ನಿಷೇಧಿಸುವುದರಿಂದ ಕೆಆರ್ ಮಾರುಕಟ್ಟೆ, ರಾಯನ್ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ಬದಲಾವಣೆ ಮಾಡಲಾಗುತ್ತದೆ. ಇನ್ನು ಎರಡು ಬದಿಯ ನಾಲ್ಕು ಪಥದ 2.65 ಕಿ.ಮೀಟರ್ ರಸ್ತೆಗೆ ಮರು ಡಾಮಬರು ಮಾಡಲಾಗುತ್ತದೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಕಾಮಗಾರಿಗೆ ಡಾಂಬರು ಇನ್ನೂ ಬಂದಿಲ್ಲ

ಕಾಮಗಾರಿಗೆ ಡಾಂಬರು ಇನ್ನೂ ಬಂದಿಲ್ಲ

ಮೇಲ್ಸೇತುವೆಯ ಎರಡು ಬದಿಯ ರಸ್ತೆಗಳ ಮರುಡಾಂಬರೀಕರಣ ಕಾಮಗಾರಿ ನವೆಂಬರ್ ತಿಂಗಳಲ್ಲಿಯೇ ನಗರ ಸಂಚಾರ ಪೊಲೀಸರು ಅನುಮತಿ ನೀಡಿದ್ದು, ಪಾಲಿಕೆಯಿಂದ ಕಾರ್ಯಾದೇಶ ನೀಡಲಾಗಿದೆ. ಮುಂಬೈನಿಂದ ಬರಬೇಕಿದ್ದ ಟೆಕ್ಕಿಕಾರ್ ಗುತ್ತಿಗೆದಾರರ ಕೈಸೇರದ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

English summary
BBMP is planning for re dambering for market flyover. So one lane remain closed for some days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X