ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾರಸುದಾರರಿಲ್ಲದ ವಾಹನ ಹರಾಜಿಗೆ ಪೊಲೀಸರ ನಿರ್ಧಾರ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 4: ನಗರದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಾರಸುದಾರರಿಲ್ಲದ ವಾಹನಗಳನ್ನು ಹರಾಜು ಹಾಕಲು ನಿರ್ಧರಿಸಿದೆ.

ಠಾಣೆ ವ್ಯಾಪ್ತಿಯ ವಿವಿಧೆಡೆ ಅನಾಥ ಸ್ಥಿತಿಯಲ್ಲಿ ಪತ್ತೆಯಾದ ವಾರಸುದಾರರಿಲ್ಲದ ವಾಹನಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಅದರ ಮಾಲೀಕರು ಪತ್ತೆಯಾಗದ ಹಿನ್ನೆಲೆಯಲ್ಲಿ ಹರಾಜು ಹಾಕಲು ನಿರ್ಧರಿಸಿದ್ದಾರೆ.

ಡಿ. 7ರಂದು ಬೆಳಗ್ಗೆ 11 ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಈ ವಾಹನಗಳನ್ನು ಕೊಳ್ಳಬಹುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಹರಾಜಾದ ಸಚಿನ್ ಬ್ಯಾಟು ಕನ್ನಡಿಗನ ಬಳಿ]

car

ಎಂತಹ ವಾಹನಗಳು: ನಗರದಲ್ಲಿ ಆಗಾಗ ವಿವಿಧ ರಸ್ತೆಗಳಲ್ಲಿ ವಾರಸುದಾರರೇ ಇಲ್ಲದ ವಾಹನಗಳು ಪತ್ತೆಯಾಗುತ್ತಿವೆ. ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನಿಸಿದರೂ ಇದರ ಮಾಲೀಕರು ಪತ್ತೆಯಾಗಿರುವುದಿಲ್ಲ. ಇಂತಹ ವಾಹನಗಳ ಕುರಿತು ಪ್ರಕಟಣೆ ನೀಡಿದ್ದರೂ ಯಾರೂ ಇತ್ತ ಸುಳಿದಿರುವುದಿಲ್ಲ. [ಕರೆ ಮಾಡಿ ಟ್ರಾಫಿಕ್ ಪೊಲೀಸರಿಗೆ ಮತ ನೀಡಿ]

ಅನೇಕ ಅಕ್ರಮ ಸಾಗಣೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಮಾಲೀಕರು ಪತ್ತೆಯಾಗಿರುವುದಿಲ್ಲ. ಇಂತಹ ವಾಹನಗಳನ್ನು ಪೊಲೀಸರು ಸಾಮಾನ್ಯವಾಗಿ ಆಗಾಗ ಹರಾಜು ಹಾಕುತ್ತಿರುತ್ತಾರೆ. [ಸಾರ್ವಜನಿಕ ಕಣ್ಣು ಅಂದರೇನು ಗೊತ್ತಾ]

English summary
Unclaimed vehicles in Kamakshipalya police station of Bengaluru will be auctioned on December 7. At 11 am action will be started.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X