ಬೆಂಗಳೂರಿನಲ್ಲಿ ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್: ನಟಿ ಪ್ರಿಯಾ ಆನಂದ್ ಉದ್ಘಾಟನೆ
ಬೆಂಗಳೂರು: ವಿಕೇರ್ ಭಾರತದ ಮೊದಲ ಒಂದೇ ದಿನದ ಫೇಷಿಯಲ್ ಆರ್ಕಿಟೆಕ್ಚರ್ ಹೊಂದಿರುವ ಸೆಂಟರ್ ಆಫ್ ಎಕ್ಸೆಲೆನ್ಸ್ ಅನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ಭಾರತದಲ್ಲಿ ಸುಧಾರಿತ ಚರ್ಮ ಮತ್ತು ಸೌಂದರ್ಯದ ಆರೈಕೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಈ ಹೊಸ ಕೇಂದ್ರವನ್ನು ಭಾರತಕ್ಕೆ ಅಂತರರಾಷ್ಟ್ರೀಯ ಚರ್ಮದ ಚಿಕಿತ್ಸೆಗಳನ್ನು ತರಲು ವಿನ್ಯಾಸಗೊಳಿಸಿದ್ದು, ಜಾಗತಿಕ ತಂತ್ರಜ್ಞಾನವನ್ನು ವೈಯಕ್ತಿಕಗೊಳಿಸಿದ ಚರ್ಮದ ಆರೈಕೆಯೊಂದಿಗೆ ಸಂಯೋಜಿಸುತ್ತದೆ.
ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ದೃಢೀಕರಿಸಿದ ವಿಸ್ತರಣೆಯ ಯೋಜನೆಗಳನ್ನು ಹೊಂದಿರುವ ವಿಕೇರ್ ದಕ್ಷಿಣ ಭಾರತದಾದ್ಯಂತ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಉಪಸ್ಥಿತಿ ವಿಸ್ತರಿಸಲಿದೆ. ಅಂತರರಾಷ್ಟ್ರೀಯ ಶ್ರೇಷ್ಠತೆಯ ಮಾನದಂಡಗಳಿಗೆ ಅನುಗುಣವಾದ ಸುಧಾರಿತ ಸೌಂದರ್ಯ ಆರೈಕೆಯನ್ನು ನೀಡುತ್ತದೆ. ಬೆಂಗಳೂರಿನಲ್ಲಿ ಆರಂಭಗೊಂಡಿರುವ ಈ ನೂತನ ಕೇಂದ್ರವನ್ನು ಖ್ಯಾತ ನಟಿ ಮತ್ತು ರೂಪದರ್ಶಿ ಪ್ರಿಯಾ ಆನಂದ್ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಂಚೂಣಿಯ ವೈದ್ಯರು, ಆರೋಗ್ಯ ಸೇವಾ ವೃತ್ತಿಪರರು, ಉದ್ಯಮದ ಪರಿಣಿತರು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಿದ್ದರು. ಇದು ವೈದ್ಯಕೀಯ ಮಾರ್ಗದರ್ಶನದ, ನೈತಿಕ ಸೌಂದರ್ಯ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರುತ್ತದೆ. ಬೆಂಗಳೂರಿನ ಸದಾಶಿವನಗರದ ಎಸ್ಟೀಮ್ ಪ್ಲಾಜಾದಲ್ಲಿರುವ ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್ ವಿಶ್ವಮಟ್ಟದ ಹಾಗೂ ಕೊರಿಯಾದಿಂದ ಸ್ಫೂರ್ತಿ ಪಡೆದ ವೈಯಕ್ತಿಕ ಚರ್ಮದ ಗುರಿಗಳನ್ನು ಆಳವಾಗಿ ಅರ್ಥೈಸಿಕೊಂಡ ಸೌಂದರ್ಯ ಆರೈಕೆಯನ್ನು ನೀಡುತ್ತದೆ.
ಈ ಕೇಂದ್ರವು ಭಾರತದ ಮೊದಲ ಒಂದೇ ದಿನದ ಫೇಷಿಯಲ್ ಆರ್ಕಿಟೆಕ್ಚರ್ ಸೇವೆ ಪರಿಚಯಿಸಿದ್ದು, ಇದು ಒಂದು ದಿನದ, ಗ್ಲಾಸ್-ಸ್ಕಿನ್ ಕೇಂದ್ರಿತ ಚಿಕಿತ್ಸೆಯಾಗಿದೆ. ಇದು ಮೂರು ಆಯಾಮಗಳ ವಿಧಾನದೊಂದಿಗೆ ಏಳು ಸುಧಾರಿತ ಲೇಸರ್ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದು, ಮೊದಲ ದಿನದಿಂದಲೇ ಪರಿಣಾಮಕಾರಿ ಫಲಿತಾಂಶಗಳನ್ನು ನೀಡುತ್ತವೆ. ಈ ವಿಧಾನದಿಂದ 90 ದಿನಗಳಲ್ಲೇ ಸುಧಾರಣೆ ಕಾಣುತ್ತದೆ.
ಈ ತತ್ವವನ್ನು ಭಾರತದ ಮೊದಲ ಮಹಿಳಾ ಟ್ರಿಕಾಲಜಿಸ್ಟ್, ದೂರದೃಷ್ಟಿಯ ಉದ್ಯಮಿ ಮತ್ತು ವೆಲ್ ನೆಸ್ ನಾಯಕಿ ವಿಕೇರ್ ಸಮೂಹದ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಇ.ಕರೋಲಿನ್ ಪ್ರಬಾ ಅವರ ತತ್ವದ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಅವರು ಭಾರತದಾದ್ಯಂತ 80ಕ್ಕೂ ಹೆಚ್ಚು ಕ್ಲಿನಿಕ್‌ಗಳ ಜಾಲವನ್ನು ನಿರ್ಮಿಸಿ, ನಿರ್ವಹಿಸುತ್ತಿದ್ದಾರೆ.
"ಜಾಗತಿಕ ಸೌಂದರ್ಯದ ಮಾನದಂಡಗಳು ವಿಕಾಸಗೊಳ್ಳುತ್ತಿವೆ. ಹಾಗೆಯೇ ನಾವೂ ಕೂಡ. ಸೆಂಟರ್ ಆಫ್ ಎಕ್ಸೆಲೆನ್ಸ್ ಮೂಲಕ ನಮ್ಮ ಉದ್ದೇಶ ಮೇಲ್ಮೈ ಮಟ್ಟದ ಚಿಕಿತ್ಸೆಗಳಿಂದ ಆಚೆಗೆ ಮುನ್ನಡೆದು ರಚನಾತ್ಮಕ, ಬಹು ಪದರಗಳ ವಿಧಾನದ ಮೂಲಕ ನಿರ್ವಹಿಸುವುದಾಗಿದ್ದು, ಆಳವಾದ ವೈಯಕ್ತಿಕತೆಯಲ್ಲಿ ಉಳಿದು ಜಾಗತಿಕ ಸೌಂದರ್ಯದ ಶ್ರೇಷ್ಠತೆಗೆ ಪೂರಕವಾಗಿರುವುದಾಗಿದೆ" ಎಂದು ವಿಕೇರ್ ಸಿಇಒ ವಿಕೇರ್ ಗ್ರೂಪ್ ಸಿಇಒ ಮುಕುಂದನ್ ಸತ್ಯನಾರಾಯಣನ್ ಹೇಳುತ್ತಾರೆ.
ಈ ವಿಧಾನದ ಕುರಿತು ವಿಕೇರ್ ಸಮೂಹದ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಇ. ಕರೋಲಿನ್ ಪ್ರಬಾ ಮಾತನಾಡಿ,"ನಾವು ಪರಿಚಯಿಸುವ ಪ್ರತಿ ತಂತ್ರಜ್ಞಾನವನ್ನೂ ಜಾಗತಿಕ ಕ್ಲಿನಿಕಲ್ ಮೌಲ್ಯಮಾಪನ, ಎಫ್.ಡಿ.ಎ. ಅನುಮೋದನೆ ಮತ್ತು ಪೂರ್ವಸಾಧಿತ ಫಲಿತಾಂಶಗಳ ಮೂಲಕ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗುತ್ತದೆ" ಎಂದರು.
ವಿಶ್ವಮಟ್ಟದ ಸೌಂದರ್ಯ ತಂತ್ರಜ್ಞಾನಗಳು
ವಿಕೇರ್ ಸೆಂಟರ್ ಆಫ್ ಎಕ್ಸೆಲೆನ್ಸ್ ವಿಶ್ವದ ಅತ್ಯಂತ ಸುಧಾರಿತ ಎಫ್.ಡಿ.ಎ. ಅನುಮೋದಿತ ಮತ್ತು ಸಿಇ-ಪ್ರಮಾಣೀಕೃತ ಸೌಂದರ್ಯ ಚಿಕಿತ್ಸೆಗಳನ್ನು ಹೊಂದಿದೆ. ಐಸೆಮೆಕೊ 3ಡಿ ಡಿ9 ಎಐ ಸ್ಕಿನ್ ಅನಲೈಸರ್ ಭಾರತದ ಮೊದಲ ಎಐ-ಪವರ್ಸ್ 3ಡಿ ಸ್ಕಿನ್ ಅನಾಲಿಸಿಸ್ ಪ್ಲಾಟ್ ಫಾರಂ ಆಗಿದ್ದು ಬಹು ಪದರಗಳ ಇಮೇಜಿಂಗ್, ಪ್ರಿಡಿಕ್ಟಿವ್ ಅನಾಲಿಸಿಸ್ ಮತ್ತು ಭವಿಷ್ಯದ ಚರ್ಮದ ಸಿಮುಲೇಷನ್ ನೀಡುತ್ತದೆ.
ಕೆ-ಎಕ್ಸೆಲೆನ್ಸ್ ಸ್ಕಿನ್ ಅನಲೈಸರ್ (ಕೊರಿಯಾ), ಡರ್ಮೊಸ್ಕಾನ್ ಡಿ.ಎಸ್.ಎಂ.-4 ಕಲರಿಮೀಟರ್ (ಜರ್ಮನಿ), ಇನ್ಮೋಡ್‌ನಿಂದ ಟ್ರೈಟನ್ ಪ್ಲಾಟ್ ಫಾರಂ, ಆಲ್ಮಾ ಹಾರ್ಮೊನಿ ಎಕ್ಸ್.ಎಲ್. ಪ್ರೊ, ಫ್ರಾಕ್ಷನಲ್ ರಿಸರ್ಫೇಸಿಂಗ್, ಮೊಡವೆ ಗುರುತು ನಿವಾರಣೆ, ರಂಧ್ರ ಸರಿಪಡಿಸುವಿಕೆ, ಜೀಸಿಸ್ ನಿಂದ ಡೆನ್ಸಿಟಿ ಆರ್.ಎಫ್, ಹಾಲಿವುಡ್ ಸ್ಪೆಕ್ಟ್ರಾ ಬೈ ಲುಟ್ರೋನಿಕ್, ಅಲ್ಟ್ರಾಸೆಲ್ ಕ್ಯೂ ಪ್ಲಸ್ ಜೀಸಿಸ್, ಎನರ್ಜೆಟ್ ಬೈ ಪರ್ಫ್ ಆಕ್ಷನ್ ಸೇರಿ ವಿವಿಧ ಆಧುನಿಕ ವಿಶ್ವಮಟ್ಟದ ಸೌಂದರ್ಯ ತಂತ್ರಜ್ಞಾನಗಳು ಇಲ್ಲಿವೆ.
ಸೆಂಟರ್ ಆಫ್ ಎಕ್ಸೆಲೆನ್ಸ್ ಪ್ರಾರಂಭದೊಂದಿಗೆ ವಿಕೇರ್ ಜಾಗತಿಕ ಸೌಂದರ್ಯ ಕ್ಷೇತ್ರದಲ್ಲಿ ಭಾರತದ ಉಪಸ್ಥಿತಿ ಸದೃಢಗೊಳಿಸಿದ್ದು ಜಾಣ್ಮೆಯ, ಕಸ್ಟಮೈಸ್ಡ್ ಮತ್ತು ಫಲಿತಾಂಶಗಳ-ಪ್ರೇರಿತ ಸ್ಕಿನ್ ಆರ್ಕಿಟೆಕ್ಚರ್‌ನಲ್ಲಿ ಹೊಸ ಮಾನದಂಡ ನಿಗದಿಪಡಿಸಿದೆ. ವಿಕೇರ್ ಭಾರತದ ಮುಂಚೂಣಿಯ ಸೌಂದರ್ಯ ಮತ್ತು ಟ್ರಿಕಾಲಜಿ ಬ್ರಾಂಡ್ ಆಗಿದ್ದು ವೈದ್ಯಕೀಯ ಪರಿಣಿತಿ, ಸುಧಾರಿತ ಅಂತಾರಾಷ್ಟ್ರೀಯ ತಂತ್ರಜ್ಞಾನಗಳು ಮತ್ತು ಚರ್ಮ, ಕೂದಲು ಮತ್ತು ಸೌಂದರ್ಯ ಚಿಕಿತ್ಸೆಗಳಿಗೆ ಆರೈಕೆ ನೀಡುತ್ತದೆ.












Click it and Unblock the Notifications