ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ನಿಲ್ದಾಣದಿಂದ ಕೆಐಎಲ್‌ಗೆ ವೊಲ್ವೋ ಬಸ್ ಸೇವೆ

|
Google Oneindia Kannada News

ಬೆಂಗಳೂರು, ನ.19 : ಬೆಂಗಳೂರಿನ ರೈಲು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಇನ್ನು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುವ ಬಸ್ ಹತ್ತಲು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ. ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ನೇರವಾಗಿ ವೋಲ್ವೋ ಬಸ್ ಸಂಚಾರವನ್ನು ಬಿಎಂಟಿಸಿ ಆರಂಭಿಸಿದೆ.

ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಅವರಿಗೆ 24 ಗಂಟೆಗಳ ಸೇವೆ ಒದಗಿಸುವ ಉದ್ದೇಶದಿಂದ ಬಿಎಂಟಿಸಿ ಮತ್ತು ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡು ಈ ಬಸ್ ಸೇವೆಯನ್ನು ಆರಂಭಿಸಿವೆ.

ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅನಿಲ್‌ ಕುಮಾರ್‌ ಅಗರ್‌ವಾಲ್‌ ವೋಲ್ವೋ ಬಸ್‌ಗಳ ಸೇವೆಗೆ ಚಾಲನೆ ನೀಡಿದ್ದಾರೆ. ದಿನಕ್ಕೆ 14 ಬಸ್‌ಗಳು ಸಂಚಾರ ನಡೆಸಲಿದ್ದು, 52 ಟ್ರಿಪ್‌ಗಳು ಇರಲಿವೆ. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಹೋಗಿ]

10 ರೂ. ದರ ಹೆಚ್ಚು : ಸದ್ಯ ಮೆಜೆಸ್ಟಿಕ್‌ ಬಿಎಂಟಿಸಿ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್‌ಗಳಲ್ಲಿ 210 ರೂ. ಪ್ರಯಾಣ ದರವಿದೆ. ರೈಲ್ವೆ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರು 220 ರೂ. ಅಂದರೆ 10 ರೂ. ಹೆಚ್ಚು ಪಾವತಿ ಮಾಡಬೇಕಾಗಿದೆ.[ಬಿಎಂಟಿಸಿ ಪಾಸ್ ಪಡೆಯುವುದು ಹೇಗೆ?]

ಮಾರ್ಕೋಪೋಲೋ ಸಂಚಾರ ಬಂದ್ : ಇನ್ನು ಮುಂದೆ ಮಾರ್ಕೋಪೋಲೋ ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ. ಹೌದು, ಈ ಬಸ್ಸುಗಳು ಹೆಚ್ಚು ಹೊಗೆ ಉಗುಳುತ್ತಿರುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ. ಇವುಗಳಿಂದ ಪ್ರತಿ ಕಿ.ಮೀಗೆ 27 ರೂ.ನಷ್ಟವಾಗುತ್ತಿದೆ ಆದ್ದರಿಂದ ಈ ಬಸ್ಸುಗಳನ್ನು ವಾಪಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

BMTC

ರಾಜ್ಯದ ನಗರಗಳಲ್ಲಿ ಸಂಚರಿಸುತ್ತಿರುವ ಮಾರ್ಕೋಪೋಲೋ ಬಸ್ಸುಗಳನ್ನು ಶೀಘ್ರವೇ ವಾಪಸ್‌ ಪಡೆಯುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಅಂದಾಜು 200 ಮಾರ್ಕೋಪೋಲೋ ಬಸ್ಸುಗಳಿದ್ದು, ಅವುಗಳನ್ನು ನಿಷೇಧ ಮಾಡಿದ ಬಳಿಕ ಪರ್ಯಾಯವಾಗಿ ಬಸ್‌ಗಳನ್ನು ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

English summary
Bangalore Metropolitan Transport Corporation (BMTC) begins Vayu vajra bus service for kempegowda international airport form Bengaluru city railway station. Bus service available in 24 hours and 220 fare fixed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X