Vatal Nagaraj: ಊಟ-ತಿಂಡಿ ದರ ಏರಿಕೆ: ಆಗಸ್ಟ್ 4ರಂದು 1ರೂ.ಗೆ ರಾಗಿ ಮುದ್ದೆ-ಸಾರು ಮಾರಾಟ
ಬೆಂಗಳೂರು, ಆಗಸ್ಟ್ 03: ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದಾಗಿ ಒಂದು ಕಡೆಗೆ ಹೋಟೆಲ್ ತಿಂಡಿ-ತಿನಿಸು ಹೆಚ್ಚಾಗಿದೆ. ಇತ್ತ ನಾಳೆ ಶುಕ್ರವಾರ ಆಗಸ್ಟ್ 04ರಂದು ಬೆಂಗಳೂರಿನಲ್ಲಿ ಒಂದು ರೂಪಾಯಿಗೆ ರಾಗಿ ಮುದ್ದೆ-ಸಾರು ಸಿಗಲಿದೆ.
ಹೌದು, ಬೆಲೆ ಏರಿಕೆ ವಿರುದ್ಧ 'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಅಧ್ಯಕ್ಷ ಮತ್ತು ಕನ್ನಡಪರ ಚಳವಳಿಗಾರ ವಾಟಾಳ್ ನಾಗರಾಜ್ ಅವರು ಹೋಟೆಲ್ ಊಟ-ತಿಂಡಿ ಬೆಲೆ ಏರಿಕೆ ವಿರುದ್ಧ ಶುಕ್ರವಾರ ವಿನೂತನ ಪ್ರತಿಭಟನೆ ಮಾಡಲಿದ್ದಾರೆ.

ಶುಕ್ರವಾರದಂದ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಬಳಿ ಮಧ್ಯಾಹ್ನ 12 ಗಂಟೆಗೆ ದರ ಏರಿಸಿರುವ ಹೋಟೆಲ್ ಗಳ ವಿರುದ್ಧ 1 ರೂಪಾಯಿಗೆ ಒಂದು ರಾಗಿ ಮುದ್ದೆ- ಸಾರು ಮಾರಾಟ ಮಾಡಲಿದ್ದಾರೆ. ಈ ವೇಳೆ ಮೆಜೆಸ್ಟಿಕ್ ಸುತ್ತಮುತ್ತಲಿನ ಜನರು ಜಮಾಯಿಸುವ ಸಾಧ್ಯತೆ ಇದೆ.
ಏಕಾಎಕಿ ವೈಜ್ಞಾನಿಕವಾಗಿಯೂ ಚಿಂತನೆ ಮಾಡದೇ ಹೋಟೆಲ್‌ಗಳ ತಿಂಡಿ ತಿನಿಸು, ಟಿ ಕಾಪಿ ದರ ಏರಿಕೆ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ದಿಢೀರನೇ ಹೋಟೆಲ್ ಆಹಾರ ಪದಾರ್ಥಗಳ ದರ ಹೆಚ್ಚಳ ಅವೈಜ್ಞಾನಿಕ ಎಂದು ವಾಟಾಳ್ ನಾಗರಾಜ್ ಅವರು ದೂರಿದರು.

ಶೇ. 60 ಮಂದಿ ಹೋಟೆಲ್ ಮೇಲೆ ಅವಲಂಬನೆ
ಅಲ್ಲದೇ ಬೆಂಗಳೂರಿನಲ್ಲಿ ಶೇಕಡಾ 60 ರಷ್ಟು ಮಂದಿ ಹೋಟೆಲ್ ಆಹಾರದ ಮೇಲೆಯೆ ಅವಲಂಬಿತವಾಗಿದ್ದಾರೆ. ಆದ್ದರಿಂದ ಹೋಟೆಲ್‌ಗಳ ಊಟ ತಿಂಡಿ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿನೂತನವಾದ ಪ್ರತಿಭಟನೆ ನಡೆಯಲಿದೆ ಎಂದು 'ಕನ್ನಡ ಚಳವಳಿ ವಾಟಾಳ್ ಪಕ್ಷ'ದ ಪ್ರಕಟಣೆ ತಿಳಿಸಿದೆ.
ಕಳೆದ ಎರಡು ವರ್ಷಗಳಿಂದ ಇಂಧನ, ಅಡುಗೆ ಅನಿಲ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ದರದಲ್ಲಿ ಭಾರಿ ಏರಿಕೆ ಆಗಿದೆ. ಇತ್ತೀಚೆಗೆ ಟೊಮೆಟೊ ಸೇರಿದಂತೆ ತರಕಾರಿಗಳ ದರ ಹೆಚ್ಚಾಗಿದೆ. ಗುರುವಾರ ಬೆಂಗಳೂರಿನಲ್ಲಿ ಕೆ.ಜಿ. ಟೊಮೆಟೊ ಬೆಲೆ 250 ಗೂ ಅಧಿಕ ಬೆಲೆಗೆ ಮಾರಾಟವಾಗಿದೆ. ಅಲ್ಲದೇ ಇತ್ತೀಚೆಗೆ ಹಾಲಿನ ದರದಲ್ಲಿ ಸಹ ಪರಿಷ್ಕರಣೆ ಆಗಿದೆ.ಈ ಎಲ್ಲ ಕಾಣದಿಂದ ಹೋಟೆಲ್ ತಿಂಡಿ ತಿನಿಸುಗಳ ದರದಲ್ಲಿ ಏರಿಕೆ ಆಗಿದೆ. ಇದರ ಹೊರೆಯನ್ನು ಅನಿವಾರ್ಯವಾಗಿ ಗ್ರಾಹಕರು ಹೊರಬೇಕಾದ ಸ್ಥಿತಿ ಇದೆ.












Click it and Unblock the Notifications