Breaking: ಬೆಂಗಳೂರು: ನಾಳೆ ಫೆ.7ರಂದು ರಾಜಭವನ ಮುತ್ತಿಗೆ

ಬೆಂಗಳೂರು, ಫೆಬ್ರವರಿ 06: ಕನ್ನಡ ನಾಮಫಲಕ ಕಡ್ಡಾಯವು ಶಾಸನಸಭೆಯಲ್ಲಿ ಮಸೂದೆ ಆಗಲೇಬೇಕು. ಈ ಮಸೂದಗೆ ರಾಜ್ಯಪಾಲರು ಅಂಗೀಕಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಸಹಿತ, ರಾಜಭವನ ಮುತ್ತಿಗೆ ಹಾಕಲಿದ್ದಾರೆ.

ಈ ಕುರಿತು ಕನ್ನಡ ಒಕ್ಕೂಟ- ಕರ್ನಾಟಕ ರಾಜ್ಯವು ಮಾಹಿತಿ ನೀಡಿದೆ. ಎಲ್ಲ ವಲಯಗಳಲ್ಲಿ ಕನ್ನಡ ಕಡ್ಡಾಯಗೊಳಿಸುವ ಸಂಬಂಧ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬುಧವಾರ ಫೆಬ್ರವರಿ 7ರಂದು ಮಧ್ಯಾಹ್ನ 12 ಗಂಟೆಗೆ ರಾಭವನ ಮುತ್ತಿಗೆ ಹಾಕಲಾಗುವುದು ಎಂದು ತಿಳಿಸಲಾಗಿದೆ.

Vatal Nagaraj Led Kannada Workers will Siege of Raj Bhavan on Feb 7th Wednesday

ಈ ಮೂಲಕ ವಾಟಾಳ್ ನಾಗಾರಾಜ್ ಅವರು ಕನ್ನಡ ಕಡ್ಡಾಯಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಲಿದ್ದಾರೆ. ಈ ವೇಳೆ ಹಲವು ಬೇಡಿಕಗಳನ್ನು ಅವರು ಸರ್ಕಾರದ ಮುಂದೆ ಇಡಲಿದ್ದಾರೆ. ಅವುಗಳ ಮಾಹಿತಿ ಇಲ್ಲಿದೆ.

ಬೇಡಿಕೆಗಳು ಏನು?

ನಾಮಫಲಕ ಕನ್ನಡದ ದೊಡ್ಡ ಅಕ್ಷರಗಳಲ್ಲಿ ಕಡ್ಡಾಯಗೊಳಿಸುವುದು, ಶಾಲಾ-ಕಾಲೇಜುಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಕಲಿಯಲೇಬೇಕು. ರೈಲ್ವೆಯಲ್ಲಿ ಹಾಗೂ ಬ್ಯಾಂಕುಗಳಲ್ಲಿ ಕನ್ನಡ ಕಡ್ಡಾಯ ಹಾಗೂ ಉದ್ಯೋಗ ಬೇಕೇ ಬೇಕು. ಐಟಿ-ಬಿಟಿಗಳಲ್ಲಿ ಕನ್ನಡ ಬೇಕೇ ಬೇಕು. ಅಂಗಡಿ ಮಾಲ್‌ಗಳಲ್ಲಿ ಕನ್ನಡ ಇರಲೇಬೇಕು.

ಹಿಂದಿ ಹೇರಿಕೆ ಹಾಗೂ ಹಿಂದಿ ನಾಮಫಲಕ ಬೇಡವೇ ಬೇಡ. ಕನ್ನಡಿಗರಿಗೆ ಉದ್ಯೋಗ ಬೇಕೇಬೇಕು. ನ್ಯಾಯಾಲಯಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ಪರಭಾಷಾ ಚಿತ್ರಗಳು ಬೇಡವೇ ಬೇಡ ಎಂಬೆಲ್ಲ ಬೇಡಿಕೆಗಳನ್ನು ಅವರು ಇಟ್ಟಿದ್ದಾರೆ.

ಈ ವೇಳೆ ವಾಟಾಳ್ ನಾಗರಾಜ್ ಅವರಿಗೆ ಕನ್ನಡಪರ ಹೋರಾಟಗಾರರು, ಒಕ್ಕೂಟದ ಮುಖಂಡರು ಆದ, ಸಾ.ರಾ.ಗೋವಿಂದು, ಕೆ.ಆರ್‌ ಕುಮಾರ್, ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಮಂಜುನಾಥ್ ದೇವ್, ಹೆಚ್‌ವಿ ಗಿರೀಶ್ ಗೌಡ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು, ಮುಖಂಡರು, ಕಾರ್ಯಕರ್ತರೆಲ್ಲರು ರಾಜಭವನ ಮುತ್ತಿಗೆ ಹಾಕಲಿದ್ದಾರೆ ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+