ಕತ್ತೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟ ವಾಟಾಳ್ ನಾಗರಾಜ್!

ಬೆಂಗಳೂರು, ಜ.6 : ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡುವುದೇ ಹಾಗೆ. ಕತ್ತೆ, ಎಮ್ಮೆ, ಎತ್ತು, ಕೋಣ ಅವರ ಪ್ರತಿಭಟನೆಯಲ್ಲಿರಲೇಬೇಕು. ಇಂದು ಕತ್ತೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ ವಾಟಾಳ್ ನಾಗರಾಜ್, ರಾಜಕಾರಣಿಗಳನ್ನು ಓಲೈಸಿ ಪ್ರಶಸ್ತಿ ಪಡೆಯುವುದು ನಾಚಿಗೇಡಿನ ವಿಷಯ ಎಂದು ಪ್ರತಿಪಾದಿಸಿದರು.

ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಮಂಗಳವಾರ ಬೆಳಗ್ಗೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕತ್ತೆಗೆ 'ಕನ್ನಡ ರಾಜ್ಯೋತ್ಸವ ಆದರ್ಶ ಪ್ರಶಸ್ತಿ' ನೀಡಿ ಗೌರವಿಸಿದರು. ರಾಜಕಾರಣಿಗಳನ್ನು ಓಲೈಸಿ ಪ್ರಶಸ್ತಿ ಪಡೆಯುವುದಕ್ಕಿಂತ ಕತ್ತೆಗೆ ಪ್ರಶಸ್ತಿ ನೀಡುವುದು ಉತ್ತಮ ಎಂಬ ಸಂದೇಶ ಸಾರಿದರು. [ವಾಟಾಳ್ ಜೊತೆ ಪ್ರತಿಭಟನೆಗೆ ಮರಾಠಿ ಎಮ್ಮೆಗಳ ಹಿಂದೇಟು?]

Vatal Nagaraj

ಸಮಾಜದ ಹಿತಕ್ಕಾಗಿ ಸದಾ ಅತ್ತಿತ್ತ ತಿರುಗಿ ನೋಡದೆ ಕತ್ತೆಯಂತೆ ದುಡಿಯುವ ವ್ಯಕ್ತಿಗಳನ್ನು ಸರ್ಕಾರ ಮತ್ತು ಸಮಾಜಗಳು ಖುದ್ದಾಗಿ ಗಮನಿಸಿ ಪ್ರಶಸ್ತಿ ನೀಡಬೇಕು ಎಂಬುದನ್ನು ಸಾಬೀತುಪಡಿಸಿ ತೋರಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. [ವಾಟಾಳ್ ಸಂಗಡಿಗ ಗೋಪಿ ಇಡೀ ಕುಟುಂಬ ನೇಣಿಗೆ]

ಕತ್ತೆಗಳು ಅತ್ಯಂತ ಸೌಜನ್ಯಯುತವಾದ ಮತ್ತು ತಲೆ ತಗ್ಗಿಸಿಕೊಂಡು ದುಡಿಯುವ ಪ್ರಾಣಿಗಳು. ಮನುಷ್ಯ ಸಮಾಜಕ್ಕೆ ಕತ್ತೆಯಿಂದ ಆಗುವ ಪ್ರಯೋಜನಗಳು ಹಲವು. ಆದ್ದರಿಂದ ಕತ್ತೆಗೆ ಪ್ರಶಸ್ತಿ ನೀಡುವುದು ಉತ್ತಮ ಎಂದ ವಾಟಾಳ್, ಇನ್ನು ಮುಂದೆಯೂ ತಮ್ಮ ಈ ವಿನೂತನ ಪ್ರತಿಭಟನೆಯನ್ನು ಮುಂದುವರೆಸುತ್ತಿದ್ದು, ಕತ್ತೆಯಂತೆಯೇ ಇನ್ನು ಹಲವು ಪ್ರಾಣಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+