ಮೆಡಿಕಲ್ ಬಿಲ್ ತಗ್ಗಿಸಲಿದೆ ವಾಸವಿ ಆಸ್ಪತ್ರೆ ಮತ್ತು ಅಫರ್ಡ್‍ಪ್ಲಾನ್ ಸ್ವಸ್ಥ್
ಬೆಂಗಳೂರು, ಅಕ್ಟೋಬರ್ 5: ಅಫರ್ಡ್‍ಪ್ಲಾನ್ ಸ್ವಸ್ಥ್ ಮತ್ತು ವಾಸವಿ ಆಸ್ಪತ್ರೆ ಸಹಯೋಗದಲ್ಲಿ ಹೆಲ್ತ್ ಕೇರ್ ಸೇವಿಂಗ್ಸ್ ಕಾರ್ಡ್ ಪ್ರಾರಂಭಿಸಿದ್ದು ಇದು ಆಸ್ಪತ್ರೆ ಸೌಲಭ್ಯಗಳನ್ನು ರೋಗಿಗಳಿಗೆ ಹೆಚ್ಚು ಲಭ್ಯ ಮತ್ತು ಕೈಗೆಟುಕುವಂತೆ ಮಾಡುತ್ತದೆ. ಈ ಅಫರ್ಡ್‍ಪ್ಲಾನ್ ಸ್ವಸ್ಥ್ ಕಾರ್ಡ್ ಗ್ರಾಹಕರಿಗೆ ವಾಸವಿ ಆಸ್ಪತ್ರೆಯ ಎಲ್ಲ ಆಸ್ಪತ್ರೆಯ ಸೇವೆಗಳಿಗೆ ಸಂಪೂರ್ಣ ಲಭ್ಯತೆ ನೀಡುವುದಲ್ಲದೆ ಹಣಕಾಸು ಅನುಕೂಲಗಳು ಹಾಗೂ ಪೂರ್ಣ ಶ್ರೇಣಿಯ ಆರೋಗ್ಯಸೇವಾ ಆಯ್ಕೆಗಳನ್ನು ಇಡೀ ಕುಟುಂಬಕ್ಕೆ ನೀಡುತ್ತದೆ.
ಅಫರ್ಡ್‍ಪ್ಲಾನ್ ಸ್ವಸ್ಥ್ ಯೆಸ್ ಬ್ಯಾಂಕ್ ಪ್ರಿಪೇಯ್ಡ್ ಕಾರ್ಡ್ ಆಗಿದ್ದು ಡಿಜಿಟಲ್ ವ್ಯಾಲೆಟ್‍ನೊಂದಿಗೆ ಒಪಿಡಿ(ಹೊರರೋಗಿ ವಿಭಾಗ) ಸೇವೆಗಳು, ಲ್ಯಾಬ್ ಟೆಸ್ಟ್‍ಗಳು, ಔಷಧಗಳ ಕೊಳ್ಳುವುದು ಮತ್ತು ಎಲ್ಲ ಐಪಿಡಿ(ಒಳರೋಗಿ ವಿಭಾಗ) ಚಿಕಿತ್ಸೆಗಳಿಗೆ ಅನ್ವಯಿಸುತ್ತದೆ. ಚಿಪ್-ಸನ್ನದ್ಧ ಕಾರ್ಡ್‍ನಿಂದ ಗ್ರಾಹಕರು ಇನ್ಸ್‍ಟಂಟ್ ಕ್ಯಾಶ್‍ಬ್ಯಾಕ್, ವಿಶೇಷ ಆಸ್ಪತ್ರೆ ಕೊಡುಗೆಗಳು ಮತ್ತು ಆಯ್ದ ಬ್ರಾಂಡ್‍ಗಳ ಮೇಲೆ ಅಫರ್ಡ್‍ಪ್ಲಾನ್ ಸ್ವಸ್ಥ್ ಪಾರ್ಟ್‍ನರ್ ಸಹಯೋಗಗಳ ಮೂಲಕ ವಿಶೇಷ ರಿಯಾಯಿತಿಗಳ ಅನುಕೂಲ ಪಡೆಯಬಹುದು. ಅಫರ್ಡ್‍ಪ್ಲಾನ್ ಸ್ವಸ್ಥ್ ಈಗಾಗಲೇ ದಕ್ಷಿಣ ಭಾರತದ ಹಲವು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು ರೋಗಿಗಳಿಗೆ ತನ್ನ ಪ್ಲಾಟ್‍ಫಾರಂ ಮೂಲಕ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಹಣಕಾಸು ಅನುಕೂಲಗಳನ್ನು ಪೂರೈಸುತ್ತದೆ.
ಅಫರ್ಡ್‍ಪ್ಲಾನ್ ಸಿಇಒ ಆದಿತ್ಯ ಶರ್ಮಾ, "ನಾವು ಗುಣಮಟ್ಟದ ಆರೋಗ್ಯಸೇವೆ ಲಭ್ಯ ಮತ್ತು ಕೈಗೆಟುಕುವಂತೆ ಮಾಡಲು ವಾಸವಿ ಆಸ್ಪತ್ರೆಯೊಂದಿಗೆ ಸಹಯೋಗಕ್ಕೆ ಹೆಮ್ಮೆ ಪಡುತ್ತೇವೆ. ಬೆಂಗಳೂರಿನಲ್ಲಿ ಹೆಚ್ಚು ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ವೈದ್ಯಕೀಯ ಆರೈಕೆ ಹೆಚ್ಚು ಒಳಗೊಳ್ಳುವಂತೆ ವಾಸವಿಯೊಂದಿಗೆ ಸೇವೆ ಒದಗಿಸುವ ಭರವಸೆ ಹೊಂದಿದ್ದೇವೆ" ಎಂದರು.

ವಾಸವಿ ಆಸ್ಪತ್ರೆಯ ಸಿಇಒ ಶ್ರೀವತ್ಸನ್ ಎಚ್.ಎ. "ವಾಸವಿಯಲ್ಲಿ ನಮ್ಮ ಉದ್ದೇಶ ರೋಗಿಯ ಆರೈಕೆಗೆ ಚಿಕಿತ್ಸೆ ಶ್ರೇಷ್ಠತೆಯನ್ನು ಸಾಧಿಸುವುದು ಅದಕ್ಕೆ ಕೈಗೆಟುಕುವ ಬೆಲೆಯಲ್ಲಿ ರಾಜಿಯಿರದೆ ರೋಗಿಯ ಆರೈಕೆ ಪ್ರಾಮುಖ್ಯತೆ ನೀಡುತ್ತೇವೆ. ಅಫರ್ಡ್‍ಪ್ಲಾನ್ ಸಹಯೋಗವು ನಮ್ಮ ಮೌಲ್ಯಗಳೊಂದಿಗೆ ಪೂರಕವಾಗಿದೆ ಮತ್ತು ನಮ್ಮ ರೋಗಿ ಸಮುದಾಯಕ್ಕೆ ಸೇವೆ ಒದಗಿಸಲು ನಾವು ಅತ್ಯಂತ ಸಜ್ಜಾಗಿದ್ದೇವೆ ಎಂಬ ಭರವಸೆ ಹೊಂದಿದ್ದೇವೆ" ಎಂದರು.
ಅಫರ್ಡ್‍ಪ್ಲಾನ್ 11 ನಗರಗಳಲ್ಲಿ ನೂರಾರು ಆಸ್ಪತ್ರೆಗಳೊಂದಿಗೆ ಸಹಯೋಗ ಹೊಂದಿದ್ದು 5,00,000 ರೋಗಿಗಳ ಜೀವನವನ್ನು ಅವರ ಉತ್ಪನ್ನದ ಮೂಲಕ ಸ್ಪರ್ಶಿಸಿದೆ. ಅವರಿಗೆ ಈಗಾಗಲೇ ದೆಹಲಿ/ಎನ್‍ಸಿಆರ್, ಬೆಂಗಳೂರು, ಜೈಪುರ, ಮುಂಬೈ ಮತ್ತು ಕೊಲ್ಕತಾ ಮಾರುಕಟ್ಟೆಗಳಲ್ಲಿ ಆಸ್ಪತ್ರೆ ಜಾಲ ಹೊಂದಿದ್ದು ದಕ್ಷಿಣ ಭಾರತಕ್ಕೆ ವಿಸ್ತರಿಸುತ್ತಿದೆ.
Recommended Video
-
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications