ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರಮಹಾಲಕ್ಷ್ಮೀ ಹಬ್ಬ; ಬೆಲೆ ಏರಿಕೆಯಿಂದ ಜನರ ಜೇಬಿಗೆ ದೊಡ್ಡ ಕತ್ತರಿ

|
Google Oneindia Kannada News

ಬೆಂಗಳೂರು,ಆಗಸ್ಟ್‌.4: ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ. ಬೆಂಗಳೂರು ನಗರ ಹಬ್ಬಕ್ಕೆ ಸಿದ್ಧವಾಗುತ್ತಿದ್ದು, ಖರೀದಿ ಭರಾಟೆಯೂ ಜೋರಾಗಿದೆ. ಇದರ ಜೊತೆಗೆ ಜನರ ಜೇಬಿಗೆ ಸಹ ಕತ್ತರಿ ಬೀಳುವಂತಿದೆ. ಎಂದಿನಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗಿದೆ.

ವರಮಹಾಲಕ್ಷ್ಮೀ ಹಬ್ಬದಲ್ಲಿ ಲಕ್ಷ್ಮೀ ದೇವಿ ಪೂಜಿಸಿದರೆ ವರ ದೇವಿ ಕರುಣಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಹಾಗಾಗಿ ಈ ಹಬ್ಬ, ವ್ರತ ಆಚರಿಸಲು ಜನ ಸಡಗರದಿಂದ ಎಲ್ಲ ತಯಾರಿ ಮಾಡಿಕೊಳ್ಳುತ್ತಾರೆ. ಹಬ್ಬದಲ್ಲಿ ಲಕ್ಷ್ಮೀಯ ಅನುಗ್ರಹಕ್ಕೆ ಜನರು ಸಂಭ್ರಮದಿಂದ ತಯಾರಿ ಮಾಡಿಕೊಳ್ಳುತ್ತಾರೆ. ಹೀಗಾಗಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆಯುತ್ತದೆ.

ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ?ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಎಷ್ಟಿದೆ ಪೆಟ್ರೋಲ್, ಡೀಸೆಲ್ ದರ?

ಇನ್ನೂ ವರಮಹಾಲಕ್ಷ್ಮೀ ಹಬ್ಬ ಹೆಣ್ಣು ಮಕ್ಕಳಿಗೆ ನೆಚ್ಚಿನ ಹಬ್ಬ. ಹಬ್ಬಕಾಗಿಯೇ ಅವರು ತುಂಬಾ ಅಂದವಾಗಿ ತಯಾರಾಗುತ್ತಾರೆ. ಹಬ್ಬಕ್ಕಾಗಿ ಮನೆ ಎರಡು ವಾರಗಳ ಮುಂಚೆಯೇ ಸಿದ್ಧತೆ ಶುರುವಾಗುತ್ತದೆ. ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ತಯಾರಿಗಳು ಜೋತಾಗಿವೆ.

 ರಸ್ತೆಗಳಲ್ಲಿ ವಾಹನ ದಟ್ಟಣೆ

ರಸ್ತೆಗಳಲ್ಲಿ ವಾಹನ ದಟ್ಟಣೆ

ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ. ಆರ್. ಮಾರ್ಕೆಟ್​ನಲ್ಲಿ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆದಿದೆ. ಮಾರುಕಟ್ಟೆಯಲ್ಲಿ ಜನಜಾತ್ರೆ ನೆರೆದಿದ್ದು, ಬೆಂಗಳೂರಿನ ಇತರ ಚಿಕ್ಕ ಚಿಕ್ಕ ಮಾರುಕಟ್ಟೆಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಖರೀದಿ ಅಬ್ಬರ ಶುರುವಾಗಿದೆ. ಕೆ. ಆರ್. ಮಾರ್ಕೆಟ್ ಸುತ್ತಮುತ್ತ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ಹಬ್ಬಕ್ಕಾಗಿ ವಸ್ತುಗಳನ್ನು ಕೊಳ್ಳಲು ಜನ ತರಾತುರಿಯಲ್ಲಿ ಸಿಟಿ ಮಾಕೆರ್ಟ್‌ ಕಡೆಗೆ ಬರತೊಡಗಿದ್ದಾರೆ. ಈ ಬಾರಿಯೂ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದ್ದಾರೆ.

ಸಿಲಿಂಡರ್‌ ಅಗ್ಗ; 1100 ರೂ ಸಿಲಿಂಡರ್‌ ಕೇವಲ 587 ರೂ.ಗೆ ಸಿಗುತ್ತಾ?ಸಿಲಿಂಡರ್‌ ಅಗ್ಗ; 1100 ರೂ ಸಿಲಿಂಡರ್‌ ಕೇವಲ 587 ರೂ.ಗೆ ಸಿಗುತ್ತಾ?

 ಹೂವುಗಳಲ್ಲಿ 50 ರಿಂದ 60 ರು.ವರೆಗೆ ಏರಿಕೆ

ಹೂವುಗಳಲ್ಲಿ 50 ರಿಂದ 60 ರು.ವರೆಗೆ ಏರಿಕೆ

ಹಬ್ಬದ ಸೀಸನ್‌ ಎಂದಿನಂತೆ ಕಳೆದ ಮೂರು ದಿನಕ್ಕೆ ಹೋಲಿಸಿದರೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಏರಿಕೆಯಾಗಿದೆ. ಹಣ್ಣುಗಳಲ್ಲಿ 30 ರಿಂದ 40 ಏರಿಕೆಯಾದರೆ, ಹೂವುಗಳಲ್ಲಿ 50ರಿಂದ 60 ರೂಪಾಯಿವರೆಗೆ ಏರಿಕೆ ಕಂಡು ಬಂದಿದೆ. ದರ ಎಷ್ಟೇ ಏರಿಕೆಯಾದರೂ ಸಹ ಹಬ್ಬದ ಖರೀದಿಗೆ ಸಿಲಿಕಾನ್ ಸಿಟಿ ಜನ ಮುಂದಾಗಿದ್ದಾರೆ. ಕೋವಿಡ್ ಹಿನ್ನಲೆ ಕಳೆದೆರಡು ವರ್ಷದಿಂದ ಸರಿಯಾಗಿ ಹಬ್ಬ ಆಚರಿಸದ ಜನರಿಗೆ ಈ ಬಾರಿ ಜೋರಾಗಿಯೇ ಹಬ್ಬ ಮಾಡುವ ಉತ್ಸಾಹದಲ್ಲಿದ್ದಾರೆ.

 ಸೇಬು ಕೆಜಿಗೆ 200 ರುಪಾಯಿ ರೌಂಡ್‌ ಫಿಗರ್‌

ಸೇಬು ಕೆಜಿಗೆ 200 ರುಪಾಯಿ ರೌಂಡ್‌ ಫಿಗರ್‌

ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆಗಳು ಇಂತಿವೆ. ಮಲ್ಲಿಗೆ ಮಾರಿಗೆ 180ರಿಂದ 200ರವರೆಗೆ ಇದೆ. ಕನಕಾಂಬರ ಕೆಜಿಗೆ 300 ರು., ಸೇವಂತಿಗೆ ಕೆಜಿಗೆ 400 ರು., ಗುಲಾಬಿ ಕೆಜಿಗೆ 410 ರು., ಸುಗಂಧರಾಜ ಕೆಜಿಗೆ 110 ರು., ಚೆಂಡು ಹೂ ಕೆಜಿಗೆ 80 ರುಪಾಯಿಯಷ್ಟು ಇದೆ.

ಹಣ್ಣುಗಳ ಬೆಲೆ ಕೂಡ ಏರಿಕೆ ಕಂಡಿದೆ. ಸೇಬು ಕೆಜಿಗೆ 200 ರುಪಾಯಿ ರೌಂಡ್‌ ಫಿಗರ್‌ನಲ್ಲಿದೆ. ಇನ್ನೂ ದಾಳಿಂಬೆ ಕೆಜಿಗೆ 180 ರು., ಮೂಸಂಬಿ ಕೆಜಿಗೆ 100 ರು. ಕಿತ್ತಲೆ ಕೆಜಿಗೆ 220 ರು., ಸಪೋಟ ಕೆಜಿಗೆ 210 ರು., ಸೀಬೆ ಹಣ್ಣು ಕೆಜಿಗೆ 100 ರು., ಪೂಜೆ ಬಳಸುವ ಏಲಕ್ಕಿ ಬಾಳೆ ಹಣ್ಣು ಕೆಜಿಗೆ 90 ರು., ದ್ರಾಕ್ಷಿ ಕೆಜಿಗೆ 200 ರುಪಾಯಿ ವರೆಗೂ ಇದೆ.

 ಬಾಳೆ ಕಂದು 50 ರುಪಾಯಿ ಬೆಲೆ

ಬಾಳೆ ಕಂದು 50 ರುಪಾಯಿ ಬೆಲೆ

ಇದಲ್ಲದೆ ಹಬ್ಬಕ್ಕೆ ಕಡ್ಡಾಯವಾಗಿ ಬೇಕಾಗಿರುವ ಮಾವಿನ ಎಲೆ ಕೆ. ಆರ್‌. ಮಾರುಕಟ್ಟೆಯಲ್ಲಿ ಕಟ್ಟಿಗೆ 40 ರು. ಬೇರೆ ಏರಿಯಾಗಳಲ್ಲಿ 80ರವರೆಗೂ ಇದೆ. ಇನ್ನೂ ದೇವರ ಮಂಟಪದ ಮುಂದೆ ಕಟ್ಟುವ ಬಾಳೆ ಕಂದು 50 ರು., ಬೇವಿನ ಸೊಪ್ಪು ಕಟ್ಟಿಗೆ 30 ರು., ತುಳಸಿ ತೋರಣ ಮಾರಿಗೆ 50, ಅಚ್ಚು ಬೆಲ್ಲ 80 ರು. ಕೆಜಿಗೆ ಇದೆ.

Recommended Video

Nancy Pelosi ಅವರ ತೈವಾನ್ ಭೇಟಿಯಿಂದ ಕೆಂಡಾಮಂಡಲವಾದ ಚೀನಾ !! *World | OneIndia Kannada

English summary
Bengaluru city getting ready for Varamahalakshmi festival. People busy in shopping price rice burden for people pocket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X