• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಂದೇ ಭಾರತ್ ಮಿಷನ್: ಲಂಡನ್ To ಬೆಂಗಳೂರು ಯಶಸ್ವಿ

|

ಬೆಂಗಳೂರು, ಮೇ 11: ಕೊರೊನಾವೈರಸ್ ನಿಂದಾಗಿ ದೇಶ, ವಿದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ನಡುವೆ ವಿವಿಧ ದೇಶಗಳಲ್ಲಿಸಿಲುಕಿರುವ ಭಾರತೀಯರನ್ನು ಕರೆತರಲು ಭಾರತೀಯ ಸರ್ಕಾರವು ವಂದೇ ಭಾರತ್ ಮಿಷನ್ ಹಮ್ಮಿಕೊಂಡಿದೆ. ಇದರ ಭಾಗವಾಗಿ ಲಂಡನ್ನಿಂದ ಕನ್ನಡಿಗರು ಸೇರಿದಂತೆ 323 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ.

ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

ಲಂಡನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ 1803 ಮೇ.11ರ ಮಧ್ಯರಾತ್ರಿ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಿತ್ತು. ಆದರೆ, ಒಂದೂವರೆ ಗಂಟೆ ತಡವಾಗಿ ವಿಮಾನ ನಿಲ್ದಾಣ ತಲುಪಿದೆ.

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

ಮೇ 10ರಂದು ಬೆಳಗ್ಗೆ 9.45 ಕ್ಕೆ ಲಂಡನ್ ವಿಮಾನ ನಿಲ್ದಾಣದಿಂದ ಹೊರಟ ವಿಶೇಷ ವಿಮಾನವು ಸುರಕ್ಷಿತವಾಗಿ ಬೆಂಗಳೂರಿನ ವಿಮಾನ ನಿಲ್ದಾಣ ತಲುಪಿದೆ, ಈ ಕಾರ್ಯಾಚರಣೆಯಲ್ಲಿ ನೆರವು ನೀಡಿದ ಏರ್ ಇಂಡಿಯಾ, ನಾಗರಿಕ ವಿಮಾನಯಾನ ಸಚಿವಾಲಯ, ಕರ್ನಾಟಕ ಸರ್ಕಾರ, ಇಂಗ್ಲೆಂಡಿನ ರಾಯಭಾರ ಕಚೇರಿಗೆ ಧನ್ಯವಾದಗಳು ಎಂದು ಭಾರತೀಯ ವಿದೇಶಾಂಗ ವ್ಯವಹಾರ ಖಾತೆ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಏರ್ ಇಂಡಿಯಾ ವಿಶೇಷ ವಿಮಾನ

ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಪ್ರಯಾಣಿಕರಿಗೆ ನೀಡಿದ ಸೌಲಭ್ಯದ ಬಗ್ಗೆ ಬೆಂಗಳೂರು ನಿವಾಸಿ ಮೇಘನಾ ಟ್ವೀಟ್ ಮಾಡಿ, ಕಾಲಕಾಲಕ್ಕೆ ಅಪ್ಡೇಟ್ ನೀಡುತ್ತಿದ್ದರು. ಥರ್ಮಲ್ ಸ್ಕ್ಯಾನ್, ಪ್ರಯಾಣದ ಬಗ್ಗೆ ಮಾಹಿತಿ, ಪ್ರತಿ ಸೀಟಿನಲ್ಲೂ ಊಟದ ವ್ಯವಸ್ಥೆ ಎಲ್ಲವೂ ಸಮರ್ಪಕವಾಗಿದೆ ಎಂದಿದ್ದರು. ಆದರೆ, ಕೆಲವು ಪ್ರಯಾಣಿಕರಿಗೆ ಮಾಸ್ಕ್ ವಿತರಿಸಿರಲಿಲ್ಲ, ಪ್ರಯಾಣಿಕರೆ ವ್ಯವಸ್ಥೆ ಮಾಡಿಕೊಂಡರು ಎಂದು ತಿಳಿಸಿದ್ದರು.

ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ

ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಕನ್ನಡಿಗರು ಬಂದು ಇಳಿಯುತ್ತಿದ್ದಂತೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಪ್ರಯಾಣಿಕರ ಸಂಪೂರ್ಣ ಪರೀಕ್ಷೆ, ಸ್ಕ್ರೀನಿಂಗ್ ವ್ಯವಸ್ಥೆಯ ಪರಿಶೀಲನೆ ನಂತರ ಹಲವು ಬಿಎಂಟಿಸಿ ಬಸ್ ಗಳ ಮೂಲಕ ಕ್ವಾರಂಟೈನ್ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಏರ್ ಪೋರ್ಟ್ ಗೆ ತೆರಳಬೇಕಾಗಿತ್ತು. ಅನಿವಾರ್ಯ ಕಾರಣದಿಂದ ಸಾಧ್ಯವಾಗಿಲ್ಲ.

ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ

ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ

ಲಂಡನ್ ನಿಂದ ರಾಜ್ಯಕ್ಕೆ ಬಂದಿರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದೆ. ಪ್ರಯಾಣಿಕರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ.

ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರೇ ವೆಚ್ಚವನ್ನು ಭರಿಸಬೇಕು. ಪಾಸ್ ಪೋರ್ಟ್ ದಾಖಲೆ ನೀಡಿ ಸಿಮ್ ಪಡೆಯಲು ಅವಕಾಶ ನೀಡಲಾಗಿದೆ

ತಾಜ್ ವಿವಾಂತಾ, ಲೆಮನ್ ಟ್ರೀ ಹೊಟೆಲ್ ನಲ್ಲಿ ಕ್ವಾರಂಟೈನ್

ಭಾರತಕ್ಕೆ ಆಗಮಿಸಿದ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಒಂದೊಮ್ಮೆ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದರೆ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಬಳಿಕ ನಡೆಸಿದ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗಟಿವ್ ಬಂದಿದ್ದಲ್ಲಿ ಮಾತ್ರ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ.

ಬೆಂಗಳೂರಿಗೆ ಬಂದಿಳಿದ ಪ್ರಯಾಣಿಕರಿಗೆ ತಂಗಲು ತಾಜ್ ವಿವಾಂತಾ, ಲೆಮನ್ ಟ್ರೀ ಸೇರಿದಂತೆ ಫೈವ್ ಸ್ಟಾರ್, ತ್ರೀ ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

ವಿದೇಶದಿಂದ ಭಾರತಕ್ಕೆ ಬರಲು, ಇಲ್ಲಿಂದ ವಿದೇಶಕ್ಕೆ ತೆರಳಲು ಮಾರ್ಗಸೂಚಿ

English summary
Vande Bharat Mission London to Bengaluru: Indians, Kannadigas stranded returned home amid of Covid19 pandemic lockdown. A special AI flight landed in the wee hours on May 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X