Valentine's Day: ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಕತ್ತೆಗಳಿಗೆ ವಿವಾಹ ಮಾಡಿಸಿದ ವಾಟಾಳ್ ನಾಗರಾಜ್
Valentine's Day 2025: ವಾಟಾಳ್ ನಾಗರಾಜ್ ಅವರ ಕನ್ನಡ ಪರ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಪ್ರತಿ ವರ್ಷದಂತೆ ಇಂದು (ಪೆಬ್ರವರಿ 14) ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಕನ್ನಡ ಕತ್ತೆಗಳಿಗೆ ವಿವಾಹ ಮಾಡಿಸಿ ಗಮನ ಸೆಳೆದಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ ಹಾಗಾದರೆ, ಎಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಇಂದು (ಪೆಬ್ರವರಿ 14) ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬೆಂಗಳೂರಿನ ಮೈಸೂರು ಬ್ಯಾಂಕ್ ಬಳಿ ಗಂಡು-ಹೆಣ್ಣು ಕತ್ತೆಗಳಿಗೆ ಸನ್ಮಾನ ಮಾಡಿ ವಿವಾಹ ಮಾಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

ವಧು-ವರರಿಗೆ ಹೇಗೆ ಮಂಗಳ ವಾದ್ಯಗಳೊಂದಿಗೆ ವಿವಾಹ ಮಾಡುತ್ತಾರೆಯೋ ಅದೇ ರೀತಿ ಕತ್ತೆಗಳಿಗೂ ವಿವಾಹ ಮಾಡಿಸಿದ್ದಾರೆ. ಮಂಗಳ ವಾದ್ಯಗಳೊಂದಿಗೆ ಮೈಸೂರು ಬ್ಯಾಂಕ್ ವೃತ್ತದಿಂದ ಹೊರಟು ನಗರದ ಬೀದಿ ಬೀದಿಗಳಲ್ಲಿ ಪ್ರೇಮದ ಸಂಕೇತವಾಗಿ ಗುಲಾಬಿ ಹೂಗಳನ್ನು ಹಂಚುವ ಮೂಲಕ ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಿದ ಘಟನೆ ನಡೆದಿದೆ.
ಇದಕ್ಕೂ ಒಂದು ದಿನ ಮುಂಚೆ ಅಂದರೆ ಫೆಬ್ರವರಿ 13ರಂದು ಈ ಬಗ್ಗೆ ಆಮಂತ್ರಣ ಪತ್ರಿಕೆಯನ್ನು ಸಹ ಬಿಡುಗಡೆಗೊಳಿಸಿದ್ದು, ಇದು ಎಲ್ಲೆಡೆ ವೈರಲ್ ಆಗಿತ್ತು. ಇದರಲ್ಲಿ ಪ್ರೇಮಿಗಳ ವಿವಾಹ ಆಹ್ವಾನ ಪ್ರತಿಕೆ ದಿನಾಚರಣೆ ಇದೊಂದು ವಿಶಿಷ್ಟ ವಿನೂತನ ಹಾಗೂ ವಿಶೇಷ ಪ್ರೇಮ-ಪ್ರೀತಿ ಪ್ರಾಣಿಗಳಲ್ಲೂ ಇದ್ದದ್ದೇ ಎಂದು ಬರೆಸಿದ್ದು, ಭಾರೀ ವೈರಲ್ ಆಗಿತ್ತು. ಹಾಗೆಯೇ ಇಂದು ಹೇಳಿದಂತೆ ಪ್ರೇಮಿಗಳಿಗೆ ಬೆಂಬಲ ಸೂಚಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕತ್ತೆಗಳಿಗೆ ವಿವಾಹ ಮಾಡಲಾಗಿದೆ.
ಫೆಬ್ರವರಿ 13 ವ್ಯಾಲೆಂಟೈನ್ಸ್ ಡೇಯಂತೆ ಹೆಚ್ಚು ಗಮನ ಸೆಳೆಯುವ ದಿನವಾಗಿದೆ. ಆದರೆ ಈ ದಿನ ಸುರಕ್ಷಿತ ಲೈಂಗಿಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಾಮುಖ್ಯತೆಯನ್ನು ಹೊಂದಿದೆ. ನಾವು ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ದಿನವನ್ನು ಪ್ರತಿವರ್ಷವೂ ಫೆಬ್ರವರಿ 13ರಂದು ಆಚರಿಸಲಾಗುತ್ತದೆ ಮತ್ತು ಕಾಂಡೋಮ್‌ಗಳನ್ನು ರಕ್ಷಣೆಯ ಸಾಧನವಾಗಿ ಬಳಸುವ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆರೋಗ್ಯಕರ ಲೈಂಗಿಕತೆಯನ್ನು ಉತ್ತೇಜಿಸಲು ಈ ದಿನವನ್ನು ಮೀಸಲಿಡಲಾಗುತ್ತದೆ.
ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಮಹತ್ವದ: ಕಾಂಡೋಮ್‌ಗಳು ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಗರ್ಭಾವಸ್ಥೆಯನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸುರಕ್ಷಿತ ಲೈಂಗಿಕತೆ ಬಗ್ಗೆ ಜಾಗೃತಿ ಮೂಡಿಸಲು, ಅಂತಾರರಾಷ್ಟ್ರೀಯ ಕಾಂಡೋಮ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 13ರಂದು ಅಂದರೆ ಪ್ರೇಮಿಗಳ ದಿನದ ಒಂದು ದಿನ ಮೊದಲು ಆಚರಣೆ ಮಾಡಲಾಗುತ್ತದೆ.
ಸುರಕ್ಷಿತ ಲೈಂಗಿಕ ಆರೋಗ್ಯವನ್ನು ಉತ್ತೇಜಿಸಲು AIDS ಹೆಲ್ತ್‌ಕೇರ್ ಫೌಂಡೇಶನ್ (AHF) 2009ರಿಂದ ಅಂತಾರಾಷ್ಟ್ರೀಯ ಕಾಂಡೋಮ್ ದಿನವನ್ನಾಗಿ ಆಚರಣೆ ಮಾಡಲಾಯಿತು. ಜವಾಬ್ದಾರಿಯುತ ಲೈಂಗಿಕ ನಡವಳಿಕೆಯನ್ನು ಉತ್ತೇಜಿಸಲು ವ್ಯಾಲೆಂಟೈನ್ಸ್ ದಿನದ ಒಂದು ದಿನದ ಮೊದಲು ಅಂತಾರಾಷ್ಟ್ರೀಯ ಕಾಂಡೋಮ್ ದಿನದ ಆಚರಣೆಗೆ ಸಮಯವನ್ನು ನಿಗದಿಪಡಿಸಲಾಗಿದೆ.
ಇನ್ನು ಫೆಬ್ರುವರಿ 14ರಂದು ಸೇಂಟ್ ವ್ಯಾಲೆಂಟೈನ್ ಅವರ ಹುತಾತ್ಮರ ನೆನಪಿಗಾಗಿ ಪ್ರೇಮಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರೀತಿಯ ವಾರವು ಫೆಬ್ರವರಿ 7ರಂದು ಗುಲಾಬಿ ದಿನದಿಂದ ಪ್ರಾರಂಭ ಆಗುತ್ತದೆ. ನಂತರ, ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12), ಕಿಸ್ ಡೇ (ಫೆಬ್ರವರಿ 13), ಮತ್ತು ವ್ಯಾಲೆಂಟೈನ್ಸ್ ಡೇ (ಫೆಬ್ರವರಿ 14).












Click it and Unblock the Notifications