ಟ್ರಾಫಿಕ್ ಕಂಟ್ರೋಲ್‌ಗೆ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಳಕೆ: ಪೋಷಕರ ವಿರೋಧ

ಬೆಂಗಳೂರು, ಅಕ್ಟೋಬರ್‌ 11: ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್ ತಗ್ಗಿಸುವ ಸಲುವಾಗಿ ಮಹತ್ತರ ಸಭೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಟ್ರಾಫಿಕ್ ನಿಯಂತ್ರಣ ಸಲುವಾಗಿ ವ್ಯಕ್ತವಾದ ಎರಡು ಮುಖ್ಯ ಸಲಹೆಗಳು ಸದ್ಯ ಚರ್ಚೆಯಲ್ಲಿವೆ. ಒಂದು ಸಲಹೆಯನ್ನು ಜನ ಸ್ವಾಗತ ಮಾಡಿದರೆ ಇನ್ನೊಂದು ಸಲಹೆಗೆ ಅಸಮಾಧನ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಟ್ರಾಫಿಕ್‌ದೇ ಅತೀ ದೊಡ್ಡ ಸಮಸ್ಯೆ. ಹೌ ಟು ಅವಾಯ್ಡ್ ಟ್ರಾಫಿಕ್ ಅಂತ ಗೂಗಲ್ ಅಲ್ಲಿ ಸರ್ಚ್ ಮಾಡುವವರ ಸಂಖ್ಯೆ ಕೂಡ ಒನ್ ಟು ಡಬಲ್ ಆಗಿದೆ. ಈ ಮಧ್ಯೆ ಟ್ರಾಫಿಕ್ ಕಡಿಮೆ ಮಾಡುವ ಸಲುವಾಗಿ ನಿನ್ನೆ ಶಿಕ್ಷಣ ಇಲಾಖೆ ನಡೆಸಿದ ಸಭೆಯಲ್ಲಿ ಟ್ರಾಫಿಕ್ ವಾರ್ಡನ್ ಪರಿಚಯ ಮಾಡುವ ಪರಿಕಲ್ಪನೆ ಹಾಗೂ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಳಕೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದೆ.

use-of-bmtc-bus-in-school-area

ಈ ಎರಡೂ ಸಲಹೆಗೆ ಸಂಬಂಧಪಟ್ಟ ಸಂಚಾರಿ ಇಲಾಖೆಯ ಅಧಿಕಾರಿಗಳು ಹಾಗೂ ಬಿಎಂಟಿಸಿ ಅಧಿಕಾರಿಗಳು ಗ್ರೀನ್ ಸಿಗ್ನಲ್ ಕೊಟ್ಟಿರುವುದು ಸದ್ಯ ಪೋಷಕರ ತಲೆನೋವಿಗೆ ಕಾರಣವಾಗಿದೆ.

ಟ್ರಾಫಿಕ್ ಕಂಟ್ರೋಲ್ ಮಾಡಲು ಟ್ರಾಫಿಕ್ ವಾರ್ಡನ್ ಪರಿಚಯ ಮಾಡುವ ಪರಿಕಲ್ಪನೆ ಅಂದ್ರೆ ಏನು ಅಂತ ನೋಡುವುದಾದರೆ ಆಯಾಯ ಶಾಲೆಯ ವ್ಯಾಪ್ತಿಯ 100 ಮೀಟರ್ ಟ್ರಾಫಿಕ್ ನಿಯಂತ್ರಣ ಮಾಡುವ ಜವಾಬ್ದಾರಿ ಪೋಷಕರದ್ದು, ದಿನ ಒಬ್ಬೊಬ್ಬ ಪೋಷಕರು ಸ್ವಯಂ ಆಗಿ ಮುಂದೆ ಬಂದು ಸಂಚಾರ ದಟ್ಟಣೆ ನಿಯಂತ್ರಣ ಮಾಡಬೇಕು. ಈ ಬಗ್ಗೆ ಖಾಸಗಿ ಶಾಲ ಒಕ್ಕೂಟ ಒಂದಷ್ಟು ಸಲಹೆ ಕೊಟ್ಟಿದೆ.

ಟ್ರಾಫಿಕ್ ವಾರ್ಡನ್ ಆಗಿ ಕೆಲಸ ಮಾಡಲು ಇಚ್ಛಿಸುವ ಪೋಷಕರಿಗೆ ಪೊಲೀಸ್ ಇಲಾಖೆಯಿಂದ ಟ್ರೈನಿಂಗ್ ಕೊಡಬೇಕು. ಟ್ರೈನಿಂಗ್ ಮುಗಿದ ಮೇಲೆ ಸರ್ಟಿಫೈಡ್ ಅಂತ ಏನಾದ್ರೂ ಸರ್ಟಿಫಿಕೇಟ್ ಕೊಡಬೇಕು. ಆಗ ಪೋಷಕರಿಗೂ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸಲು ಉತ್ತೇಜನ ಸಿಗುತ್ತದೆ. ಬೆಳಿಗ್ಗೆ ಶಾಲಾ ಆರಂಭ ಆಗುವ ಹೊತ್ತಲ್ಲಿ, ಸಂಜೆ ಶಾಲಾ ಬಿಡುವ ಹೊತ್ತಲ್ಲಿ ಶಾಲೆಯ 100 ಮೀಟರ್ ಟ್ರಾಫಿಕ್ ಕಂಟ್ರೋಲ್ ಮಾಡುವ ಟ್ರಾಫಿಕ್ ವಾರ್ಡನ್ ಸಿಲಿಕಾನ್ ಸಿಟಿಯಲ್ಲಿ ಬಹು ಅಗತ್ಯ ಎಂದು ಖಾಸಗಿ ಶಾಲಾ ಒಕ್ಕೂಟ ತಿಳಿಸಿದೆ.

ಇನ್ನು ಯಾವ ಶಾಲೆ ತನ್ನದೇ ಆದ ಸ್ಕೂಲ್ ಬಸ್ ಹೊಂದಿಲ್ಲವೋ ಅಂತಹ ಶಾಲೆಗಳು ಖಾಸಗಿ ಬಸ್ ಬಳಸುವ ಬದಲು ಬಿಎಂಟಿಸಿ ಬಸ್ ಬಳಕೆ ಮಾಡಲು ಸಭೆಯಲ್ಲಿ ಸಲಹೆ ವ್ಯಕ್ತವಾಗಿತ್ತು. ಸಾರ್ವಜನಿಕ ಸಾರಿಗೆ ಉತ್ತೇಜನ ಕೊಡಲು ಕೂಡ ಬಿಎಂಟಿಸಿ ಬಳಕೆ ಉತ್ತಮ ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಆದರೆ ಬಿಎಂಟಿಸಿ ಬಸ್‌ನಲ್ಲಿ ಮಕ್ಕಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಬಿಎಂಟಿಸಿ ಬಸ್ ಬಳಕೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಬಿಎಂಟಿಸಿ ಬಸ್ ಹೋಗುವ ವೇಗ ನೋಡಿದರೆ ಹಾರ್ಟ್ ಬೀಟ್ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಬಿಎಂಟಿಸಿ ಮಳೆ ಬಂದರೆ ಸೋರುತ್ತದೆ, ಸೀಟ್ ಹರಿದು ಹೋಗಿದೆ. ಎಲ್ಲಿ ಕೆಟ್ಟು ನಿಲ್ಲುತ್ತೋ ಅದಕ್ಕೆ ಗೊತ್ತಿಲ್ಲ. ಹೊಗೆಯ ಪ್ರಮಾಣ ಮಾತ್ರ ಅಬ್ಬಬ್ಬಾ ಹೇಳುವುದಕ್ಕೆ ಅಸಾಧ್ಯ ಹೀಗಿರುವಾಗ ಶಾಲಾ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಿಟ್ಟರೆ ಹೆಂಗಪ್ಪಾ ಕತೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಸದ್ಯ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+