5 ಸಾವಿರ ಕೊಟ್ರೆ ಬೆಂಗಳೂರಿನ ಮೇಲೆ ಹಾರಾಡಬಹುದು

ಹೌದು, Uber Cab service ಸಂಸ್ಥೆಯು ಪ್ರಾಚಾರಕ್ಕಾಗಿ ಇಂತಹದೊಂದು ವ್ಯವಸ್ಥೆಯನ್ನು ಬೆಂಗಳೂರಿನ ಜನಕ್ಕೆ ಕಲ್ಪಿಸಿಕೊಡುತ್ತಿದೆ. ಈ ವಾರಾಂತ್ಯ ಜೂನ್ 15ರಂದು ಭಾನುವಾರ (Father's Day) ಚಾಪರ್ ನಲ್ಲಿ ಈ ಹಾರಾಟ ವ್ಯವಸ್ಥೆ ಕಲ್ಪಿಸಲಾಗುವುದು.
ಇದಕ್ಕೆ ನೀವು ಜಸ್ಟ್ 4,999 ರೂ ಕೊಟ್ಟರೆ ಸಾಕು. ಮನೆಯಿಂದ ಕಾರಿನಲ್ಲಿ ಪಿಕ್ ಅಪ್ ಡ್ರಾಪ್ ವ್ಯವಸ್ಥೆ ಸೇರಿ Deccan Charters ಚಾಪರ್ ನಲ್ಲಿ ಬೆಂಗಳೂರಿನ ಮೇಲೆ ಸುಮಾರು 30 ನಿಮಿಷ ಕಾಲ ಹಾರಾಡಬಹುದು ಎಂದು ಬೆಂಗಳೂರಿನಲ್ಲಿರುವ Uber Cab service ವ್ಯವಸ್ಥಾಪಕ ಭಾವಿಕ್ ರಾಥೋಡ್ ತಿಳಿಸಿದ್ದಾರೆ.
ಅಮೆರಿಕ ಮೂಲದ ಯೂಬರ್ ಕ್ಯಾಬ್ ಸರ್ವಿಸ್ ಕಂಪನಿಯಲ್ಲಿ TPG ಮತ್ತು Google Ventures ಕಂಪನಿಗಳು ಹಣ ತೊಡಗಿಸಿವೆ. ಭಾನುವಾರ ಅಪ್ಪಂದಿರ ದಿನದಂದು ಮುಂಬೈನಲ್ಲೂ ಇಂತಹುದೆ 30 ನಿಮಿಷಗಳ ಹಾರಾಟ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications