ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತೀಯನ ಮಾನವೀಯ ಕಾರ್ಯಕ್ಕೆ ಹೊಗಳಿ ಯು.ಎಸ್ ಸೆಕ್ರೆಟರಿ ಟ್ವೀಟ್

|
Google Oneindia Kannada News

ಬೆಂಗಳೂರು, ಏಪ್ರಿಲ್ 30: ಕೋವಿಡ್-19 ತಡೆಗಟ್ಟಲು ಸಾಮಾಜಿಕ ಅಂತರ ಬಹುದೊಡ್ಡ ಉಪಾಯ. ಹೀಗಾಗಿ, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಆದರೆ, ಲಾಕ್ ಡೌನ್ ನಿಂದಾಗಿ ದಿನಗೂಲಿ ಕಾರ್ಮಿಕರೂ ಸೇರಿದಂತೆ ಎಷ್ಟೋ ಮಂದಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ.

Recommended Video

ಮೇ 3 ರ ನಂತರ ಎಫೆಕ್ಟ್ ಇನ್ನೂ ಜಾಸ್ತಿಯಾಗುತ್ತೆ,ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ | DKS | Oneindia Kannada

ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!ಕೊರೊನಾ ತವರು ಚೀನಾ ವಿರುದ್ಧ ಗುಟುರು ಹಾಕಿದ ಡೊನಾಲ್ಡ್ ಟ್ರಂಪ್!

ವ್ಯಾಪಾರ-ವಹಿವಾಟು ಬಂದ್ ಆಗಿರುವುದರಿಂದ ಎಷ್ಟೋ ಜನರಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನೂ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ನಟ-ನಟಿಯರು, ರಾಜಕಾರಣಿಗಳು, ಸಮಾಜ ಸೇವಕರು, ಕಾರ್ಪೊರೇಟ್ ದಿಗ್ಗಜರು ಸಹಾಯ ಹಸ್ತ ಚಾಚುತ್ತಿದ್ದಾರೆ.

US Secretary Pompeo Tweets About Arun Sivags Humanitarian Spirit

ಈ ನಡುವೆ ಗ್ಲೋಬಲ್ ಕಲ್ಚರ್ ಎಂಬ ಸಂಸ್ಥೆಯಿಂದ ಅರುಣ್ ಸಿವಾಗ್ ಎಂಬುವರು ಕೋವಿಡ್-19 ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬಗಳಿಗೆ ನೆರವು ನೀಡಿದ್ದಾರೆ. ಎಸ್.ಸಿ.ಇ.ಎ.ಡಿ ಫೌಂಡೇಶನ್ ಮತ್ತು ರಾಗರಶ್ಮಿ ಫೌಂಡೇಶನ್ ಜೊತೆ ಸೇರಿ 12 ಸಾವಿರ ಕೆಜಿ ಆಹಾರ, ಅಗತ್ಯ ವಸ್ತುಗಳು ಮತ್ತು ಔ‍ಷಧಿಗಳನ್ನು ಬೆಂಗಳೂರಿನಲ್ಲಿ ವಿತರಿಸಿದ್ದಾರೆ. ಈ ಬಗ್ಗೆ ಯು.ಎಸ್ ಕಾನ್ಸುಲೇಟ್ ಚೆನ್ನೈ ಟ್ವೀಟ್ ಮಾಡಿತ್ತು.

ಇದನ್ನ ಕಂಡ ಯು.ಎಸ್ ಸೆಕ್ರಿಟರಿ ಮೈಕ್ ಪಾಂಪಿಯೋ, ಅರುಣ್ ಸಿವಾಗ್ ಕೆಲಸವನ್ನು ಶ್ಲಾಘಿಸಿದ್ದಾರೆ.

''ಅರುಣ್ ಸಿವಾಗ್, ನಿಮ್ಮ ಮಾನವೀಯ ಮನೋಭಾವ ಮತ್ತು ಸೇವ ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತದೆ'' ಎಂದು ಮೈಕ್ ಪಾಂಪಿಯೋ ಟ್ವೀಟ್ ಮಾಡಿದ್ದಾರೆ.

English summary
US Secretary Pompeo tweets about Arun Sivag's humanitarian spirit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X