ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಗಾಂಧಿಗೆ ಕೇಂದ್ರ ಸಚಿವ ಸದಾನಂದ ಗೌಡರ ಪ್ರಶ್ನೆಗಳು

|
Google Oneindia Kannada News

ಬೆಂಗಳೂರು, ಮಾರ್ಚ್ 31: ಜೆಡಿಎಸ್- ಕಾಂಗ್ರೆಸ್ ಮೈತ್ರಿ ಪಕ್ಷದಿಂದ ದೊಡ್ಡ ಮಟ್ಟದ ಶಕ್ತಿ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ವೇದಿಕೆ ಸಿದ್ಧವಾದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿವಿ.ಸದಾನಂದ ಗೌಡ ಅವರು ಕೆಲವು ಪ್ರಶ್ನೆಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆವರನ್ನು ಕೇಳಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ಕೇಳಲಾದ ಈ ಪ್ರಶ್ನೆಗಳು ಆಸಕ್ತಿದಾಯಕವಾಗಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

* ಬೆಂಗಳೂರಿಗೆ ಬರುತ್ತಿರುವ ಮಾನ್ಯ ರಾಹುಲ್ ಅವರೆ ತಾವು ಯಾವ ಸ್ಥಾನದಿಂದ ಅಲಂಕೃತರಾಗಿ ಇಂದು ಬರುತ್ತಿದ್ದೀರೆಂದು ತಿಳಿಸಿಬಿಡಿ. ಜನ ಗಲಿಬಿಲಿಗೊಂಡಿದ್ದಾರೆ. ಪಕ್ಷದ ಅಧ್ಯಕ್ಷರಾಗಿಯೇ?

ರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿರಾಹುಲ್ ಅವರ 'ನ್ಯಾಯ್' ಬಳಸಿ ಜೀವನಾಂಶ ನೀಡುವೆ: ನಿರುದ್ಯೋಗಿ ಪತಿ

* ನೀವೇ ಹೇಳುವಂತಹ ಮಹಾಘಟಬಂಧನದ ಮುಖ್ಯ ಪಾತ್ರಧಾರಿಯಾಗಿಯೇ?

Union minister, BJP candidate for Bengaluru north DVS questions Rahul Gandhi

* ಸಾಂದರ್ಭಿಕ ಮೈತ್ರಿ ಮಾಡಿಕೊಂಡು ಈಗ ಪರಿವರ್ತನೆ ಮಾಡಲು ಹೊರಟಿರುವ ಜನರ ನಾಯಕರಾಗಿಯೇ?

* ನಿಮ್ಮ ಪಕ್ಷದ ಅಧ್ಯಕ್ಷರಾಗಿಯೇ?- ಅದು ನೀವೆಂದು ಅನ್ನಿಸಲೇ ಇಲ್ಲ. ನೀವು ಸಂಸದ್ ನಲ್ಲಿ ಪ್ರತಿನಿಧಿಸಿದ ಉತ್ತರಪ್ರದೇಶದಲ್ಲಿ ನಿಮ್ಮನ್ನು ನಿಮ್ಮ ಮಿತ್ರರು ಗಣನೆಗೆ ತೆಗೆದುಕೊಳ್ಳಲಿಲ್ಲ. ನಿಮ್ಮೊಂದಿಗೆ ಮೈತ್ರಿಗೆ ಒಪ್ಪಲಿಲ್ಲ.

ಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆಅಧಿಕಾರಕ್ಕೆ ಬಂದರೆ ನೀತಿ ಆಯೋಗ ರದ್ದು : ರಾಹುಲ್ ಘೋಷಣೆ

* ನೀವೇ ಹೇಳುವ ಮಹಾ ಘಟಬಂಧನದ ಮುಖ್ಯ ಪಾತ್ರಧಾರಿಯಾಗಿಯೇ ? ಕೆಲ ತಿಂಗಳ ಹಿಂದೆ ಕರ್ನಾಟಕದಲ್ಲಿ ಆರಂಭ ಅಂದಿದ್ದು ನೆನಪಿದೆ. ಬಳಿಕ ದೇಶಾದ್ಯಂತ ನಿಮ್ಮ ಘಟಬಂಧ ಹಳ್ಳ ಹಿಡಿದದ್ದೂ ತಿಳಿದುಕೊಂಡಿದ್ದೇವೆ.

* ಸಾಂದರ್ಭಿಕ ಮೈತ್ರಿ ಮಾಡಿಕೊಂಡು ಈಗ ಪರಿವರ್ತನೆ ಮಾಡಲು ಹೊರಟಿರುವ ಜನರ ನಾಯಕರಾಗಿಯೇ? ದಿನಕ್ಕೊಂದು ವೇಷ ಜನ ನಂಬುತ್ತಾರಾ?

English summary
Union minister, BJP candidate for Bengaluru north DV Sadananda Gowda questions AICC president Rahul Gandhi on Sunday in twitter account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X