ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಕಲಾ ಪರಿಷತ್ತಿನಲ್ಲಿ ಬೆಂಗಳೂರು ಉತ್ಸವ, ಮಾರಾಟ ಮೇಳ

|
Google Oneindia Kannada News

ಬೆಂಗಳೂರು ಏಪ್ರಿಲ್ 1: ಯುಗಾದಿ ಚೈತ್ರಮಾಸದ ಮೊದಲ ದಿನ. ಭಾರತದ ಅನೇಕ ರಾಜ್ಯಗಳಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹೊಸ ಬಟ್ಟೆಯನ್ನು ತೊಡುವುದರ ಮೂಲಕ, ಜೀವನದಲ್ಲಿ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ಸೇವಿಸಲಾಗುತ್ತದೆ.

ಯುಗಾದಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಏಪ್ರಿಲ್‌ 2 ರಿಂದ 11 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ "ಬೆಂಗಳೂರು ಉತ್ಸವ" ಯುಗಾದಿ ಶಾಪಿಂಗ್‌ ಕಾರ್ನಿವಲ್‌ ನ್ನು ಆಯೋಜಿಸಿದೆ.

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ಎಲ್ಲಾ ಭಾಗಗಳಿಂದಲೂ ಆಗಮಿಸಲಿರುವ ಕರಕುಶಲ ಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ. ಕಾಶ್ಮೀರಿ ಸೀರೆಗಳು ಮತ್ತು ಶಾಲುಗಳು, ಮಣಿಪುರಿ, ಆಂಧ್ರಪ್ರದೇಶ, ತಮಿಳುನಾಡಿನ ಪ್ರಸಿದ್ದ ರೇಷ್ಮೇ ಸೀರೆಗಳು ಹಾಗೂ ಈಶಾನ್ಯ ರಾಜ್ಯಗಳ ಕಲಾಕಾರರು ತಯಾರಿಸಿರುವ ಉತ್ಪನ್ನಗಳು ಎಲ್ಲರ ಗಮನ ಸೆಳೆಯಲಿವೆ.

ಜಾನಪದ ಕಲಾಕಾರರಿಗೂ ವೇದಿಕೆ

ಜಾನಪದ ಕಲಾಕಾರರಿಗೂ ವೇದಿಕೆ

ಕರಕುಶಲ ಕರ್ಮಿಗಳ ಜೊತೆಯಲ್ಲಿಯೇ ರಾಜ್ಯದ ವಿವಿಧ ಭಾಗಗಳ ಜಾನಪದ ಕಲಾಕಾರರಿಗೂ ವೇದಿಕೆ ಒದಗಿಸುವ ಉದ್ದೇಶದಿಂದ ಲೈವ್‌ ಡಾನ್ಸ್‌ ಪರ್ಫಾನ್‌ಮೆನ್ಸ್‌ ಕೂಡಾ ಆಯೋಜಿಸಲಾಗಿದೆ. ಏಪ್ರಿಲ್‌ 3 ರಂದು ಡೊಳ್ಳುಕುಣಿತ, ಏಪ್ರಿಲ್‌ 4 ರಂದು ಹುಲಿವೇಶ ಕುಣಿತ, 10 ನೇ ಏಪ್ರಿಲ್‌ ನಂದು ಕಂಗಿಲು ಕುಣಿತಾ ಹಾಗೂ ಏಪ್ರಿಲ್‌ 11 ರಂದು ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.

ಕರಕುಶಲಕಾರರು ತಯಾರಿಸಿದ ಸೀರೆಗಳು

ಕರಕುಶಲಕಾರರು ತಯಾರಿಸಿದ ಸೀರೆಗಳು

ಇದಲ್ಲದೆ, ಮಣಿಪುರ, ನಾಗಾಲ್ಯಾಂಡ್ ರಾಜ್ಯದ ಕರಕುಶಲಕಾರರು ತಯಾರಿಸಿದ ಸೀರೆಗಳು ಈ ಬಾರಿಯ ಪ್ರಮುಖ ಆಕರ್ಷಣೆ. ಅಲ್ಲದೆ, ಸ್ಟೋನ್ ಆಭರಣಗಳು ಎಲ್ಲರ ಗಮನ ಸೆಳೆಯಲಿವೆ. ಹಾಗೆಯೇ, ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

ನೂರಾರು ಬಗೆಯ ಉತ್ಪನ್ನಗಳು

ನೂರಾರು ಬಗೆಯ ಉತ್ಪನ್ನಗಳು

ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

Recommended Video

ಜಮ್ಮು- ಕಾಶ್ಮೀರದಲ್ಲಿ ತಿಮ್ಮಪ್ಪನ ದೇವಾಲಯ ನಿರ್ಮಾಣ..! | Oneindia Kannada
ಯುಗಾದಿ ಶಾಪಿಂಗ್‌ ಕಾರ್ನಿವಲ್‌

ಯುಗಾದಿ ಶಾಪಿಂಗ್‌ ಕಾರ್ನಿವಲ್‌

100 ಕ್ಕೂ ಹೆಚ್ಚು ಅಂಗಡಿಗಳಿದ್ದು ದೇಶದ ಎಲ್ಲಾ ಭಾಗಗಳಿಂದ ಆಗಮಿಸಿರುವ ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಮಣ್ಣು, ಕಲ್ಲು, ಮರ ಹಾಗೂ ಲೋಹಗಳನ್ನು ಬಳಸಿ ತಯಾರಿಸಿರುವ ಗೊಂಬೆಗಳು ಪ್ರಮುಖ ಆಕರ್ಷಣೆಯಾಗಿರಲಿವೆ.

ಬೆಂಗಳೂರು ಉತ್ಸವ - ಯುಗಾದಿ ಶಾಪಿಂಗ್‌ ಕಾರ್ನಿವಲ್‌

ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ (ಶಿವಾನಂದ ವೃತ್ತದ ಬಳಿ)

ದಿನಾಂಕ: ಮಾರ್ಚ್‌ 13 ರಿಂದ ಮಾರ್ಚ್‌ 22,2020 ವರೆಗೆ

ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

English summary
Grand Flea Market is organising Bengaluru Utsav, the Ugadi Shopping Carnival on Ugadi at Chitrakal Parishat from April 2nd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X