ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಇಇ ಪ್ರಮುಖ ಪರೀಕ್ಷೆಯಲ್ಲಿ ಉಧವ್ ವರ್ಮಾ ರಾಜ್ಯಕ್ಕೆ ಪ್ರಥಮ

|
Google Oneindia Kannada News

ಬೆಂಗಳೂರು, ಮಾರ್ಚ್.09: ಬೆಂಗಳೂರಿನ ಎಫ್ಐಐಟಿ-ಜೆಇಇ ಕೇಂದ್ರದ ನಾಲ್ಕನೇ ವರ್ಷದ ವಿದ್ಯಾರ್ಥಿ ಉಧವ್ ವರ್ಮಾ ಅವರು 2021ನೇ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2021ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಜೆಇಇ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. 2021ರ ಫೆಬ್ರವರಿ ತಿಂಗಳಿನಲ್ಲಿ ನಡೆದ ಜೆಇಇ ಪರೀಕ್ಷೆಯಲ್ಲಿ ಉಧವ್ ವರ್ಮಾ 99.9970675 ಎನ್‌ಟಿಎ ಸ್ಕೋರ್ ಮಾಡಿದ್ದಾರೆ.

ಜೆಇಇ ಮೇನ್ ಪರೀಕ್ಷೆ ಫಲಿತಾಂಶ: ಆರು ಮಂದಿಗೆ ಶೇ 100ರಷ್ಟು ಅಂಕಜೆಇಇ ಮೇನ್ ಪರೀಕ್ಷೆ ಫಲಿತಾಂಶ: ಆರು ಮಂದಿಗೆ ಶೇ 100ರಷ್ಟು ಅಂಕ

ಹುಡುಗಿಯರ ವಿಭಾಗದಲ್ಲಿ ಬೆಂಗಳೂರಿನ ಎಫ್ಐಐಟಿ-ಜೆಇಇ ಕೇಂದ್ರದ ನಾಲ್ಕನೇ ವರ್ಷದ ವಿದ್ಯಾರ್ಥಿನಿ ರಿಯಾ ಮಹೇಶ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರವರಿಯಲ್ಲಿ ನಡೆದ ಜೆಇಇ ಮುಖ್ಯ ಪರೀಕ್ಷೆಯಲ್ಲಿ 99.9730009 ಎನ್‌ಟಿಎ ಅಂಕ ಗಳಿಸಿದ್ದಾರೆ.

Udhav Varma, FIITJEE Bangalore Student declared Karnataka Topper in JEE Main 2021


ಜೆಇಇ ಪರೀಕ್ಷೆಗಳು:

2021ನೇ ಸಾಲಿನಲ್ಲಿ ಫೆಬ್ರವರಿ. 23-26ರವರೆಗೂ ಮೊದಲ ಹಂತದಲ್ಲಿ ಜೆಇಇ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಗಿತ್ತು. ಮಾರ್ಚ್.15 ರಿಂದ 21ರವರೆಗೂ ಎರಡನೇ ಹಂತದ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಏಪ್ರಿಲ್.27 ರಿಂದ 30ರವರೆಗೂ ಮೂರನೇ ಹಂತದಲ್ಲಿ ಜೆಇಇ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಮೇ.24 ರಿಂದ 27ರವರೆಗೂ ನಾಲ್ಕನೇ ಹಂತದ ಜೆಇಇ ಪ್ರವೇಶ ಪರೀಕ್ಷೆ ನಡೆಸಿದ ನಂತರದಲ್ಲಿ ಅಂತಿಮವಾಗಿ ಫೈನಲ್ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ.

ಉಧವ್ ವರ್ಮಾ ಅವರ ಎನ್‌ಟಿಎ ಸ್ಕೋರ್ ಹೀಗಿದೆ: ಗಣಿತದಲ್ಲಿ 100.0000000, ಭೌತಶಾಸ್ತ್ರದಲ್ಲಿ 100.0000000 ಮತ್ತು ರಸಾಯನಶಾಸ್ತ್ರದಲ್ಲಿ 99.9433046 ಅಂಕಗಳನ್ನು ಗಳಿಸಿದ್ದಾರೆ.

English summary
Udhav Varma, FIITJEE Bengaluru's 4-year Classroom Program Student declared Karnataka Topper in JEE Main 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X