Uday Express: ರೈಲು ಪ್ರಯಾಣಿಕರೇ ಗಮನಿಸಿ: ವಾರದ ಎಲ್ಲಾ ದಿನ ಉದಯ್ ಎಕ್ಸ್‌ಪ್ರೆಸ್ ಸಂಚಾರ

ಬೆಂಗಳೂರು, ಪೆಬ್ರವರಿ 01: ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಇನ್ನು ಮುಂದಿನ ದಿನಗಳಲ್ಲಿ ಉದಯ ಎಕ್ಸ್ ಪ್ರೆಸ್ ರೈಲು ವಾರದ ಏಳು ದಿನವೂ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರು ಹಾಗೂ ಕೊಯಮತ್ತೂರು ನಡುವಿನ ಪ್ರಯಾಣಿಕರ ನಿತ್ಯ ಸಂಚಾರಕ್ಕೆ ಅನುಕೂಲವಾಗುವಂತೆ ದಕ್ಷಿಣ ರೈಲ್ವೆ ವಲಯವು ಉದಯ ಎಕ್ಸ್ ಪ್ರೆಸ್ ರೈಲಿನ ಸೇವೆಯನ್ನು ಹೆಚ್ಚಿಸಿದೆ. ಉದಯ ಎಕ್ಸ್ ಪ್ರೆಸ್ ರೈಲು ಸಂಖ್ಯೆ 22665/22666 ಈ ಹಿಂದೆ ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸುತ್ತು. ಆದರೆ ಪ್ರಯಾಣಿಕರಿಗೆ ಅನುಕೂಲವಾಗ ಬೇಕು ಎನ್ನುವ ದೃಷ್ಟಿಯಲ್ಲಿ ರೈಲ್ವೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

Uday Express Train Now To Run All Seven Days

2024ರ ಮಾರ್ಚ್ 5ರ ನಂತರ ಬೆಂಗಳೂರು- ಕೊಯಮತ್ತೂರು ಉದಯ ಎಕ್ಸ್ ಪ್ರೆಸ್ ರೈಲು ವಾರದ ಏಳು ದಿನವೂ ಸಂಚರಿಸಲಿದೆ. ಇನ್ನು ಉದಯ ಎಕ್ಸ್‌ಪ್ರೆಸ್‌ ರೈಲು ಪ್ರತಿ ದಿನವೂ ಬೆಳಿಗ್ಗೆ 05.45ಕ್ಕೆ ಕೊಯಮತ್ತೂರಿನಿಂದ ಹೊರಟು ಮಧ್ಯಾಹ್ನ 12.40ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಬಳಿಕ ಮಧ್ಯಾಹ್ನ 2.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9ಕ್ಕೆ ಕೊಯಮತ್ತೂರು ತಲುಪಲಿದೆ. ಉದಯ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳ ಸಂಯೋಜನೆ, ವೇಳಾಪಟ್ಟಿ ಮತ್ತು ನಿಲುಗಡೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲುಗಳ ಮಾರ್ಗ ಬದಲಾವಣೆ / ನಿಯಂತ್ರಣ

ನಜೀರಗಂಜ-ಉಜಿಯಾರ್ಪುರ್-ಸಮಸ್ತಿಪುರ ನಿಲ್ದಾಣಗಳ ನಡುವೆ ಸುರಕ್ಷತಗೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲು ಪೂರ್ವ ಮಧ್ಯ ರೈಲ್ವೆಯು ಸೂಚಿಸಿದೆ.

1. ಮಾರ್ಚ್1, 2024 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12578 ಮೈಸೂರು-ದರ್ಭಂಗಾ ಭಾಗೃತಿ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು 75 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.

2. ಮಾರ್ಚ್ 7, 2024 ರಂದು ಬೆಂಗಳೂರಿನ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 15227 ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಮುಜಾಫರ್ಪುರ ಎಕ್ಸ್ ಪ್ರೆಸ್ ರೈಲು ಖಗರಿಯಾ, ಸಿಂಘಿಯಾಘಾಟ್ ಮತ್ತು ಸಮಸ್ತಿಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಬೇಗುಸರಾಯ್ ಮತ್ತು ಬರೌನಿ ನಿಲ್ದಾಣಗಳಲ್ಲಿ ನಿಲುಗಡೆ ತಪ್ಪಲಿದೆ ಎಂದು ರೈಲ್ವೆ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+